ಬಾಲಿವುಡ್ ನ ಹೆಸರಾಂತ ನಟ ಸಂಜಯ್ ದತ್ ಅವರಿಗೆ ಅನಾರೋಗ್ಯದ ಸಮಸ್ಯೆ ಉಂಟಾಗಿರುವ ಕಾರಣ, ಅವರನ್ನು ನಿನ್ನೆ ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಜುಲೈ 29ರಂದು 61 ನೆ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು ಸಂಜಯ್ ದತ್. ನಿನ್ನೆ ಸಂಜೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಸಂಜೆ 6 ಗಂಟೆಯ ನಂತರ ಅವರನ್ನು ಮುಂಬೈ ನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಜಯ್ ದತ್ ಅವರಿಗೆ ಕರೊನಾ ಪರೀಕ್ಷೆ ನಡೆಸಿದ್ದು, ವರದಿ ನೆಗಟಿವ್ ಬಂದಿದೆ. ಇದು ಎಲ್ಲರಿಗೂ ಒಂದು ರೀತಿ ನೆಮ್ಮದಿ ತಂದಿದೆ. ಸಧ್ಯಕ್ಕೆ ಸಂಜಯ್ ದತ್ ಅವರಿಗೆ ಕರೊನೇತರ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯ ಡಾಕ್ಟರ್ ಡಾ.ವಿ ರವಿಶಂಕರ್ ಅವರು ಸಂಜಯ್ ದತ್ ಅವರ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದಾರೆ. ಸಂಜಯ್ ದತ್ ಅವರ ಆರೋಗ್ಯ ಸ್ಥಿರವಾಗಿದೆ. ಯಾರೂ ಆತಂಕ ಪಡುವುದು ಬೇಡ ಎಂದು ಡಾಕ್ಟರ್ ಹೇಳಿದ್ದಾರೆ. ಸಂಜಯ್ ದತ್ ಅವರ ಹುಟ್ಟುಹಬ್ಬದಂದು ಕೆಜಿಎಫ್2 ಸಿನಿಮಾದಲ್ಲಿ ಸಂಜಯ್ ದತ್ ಅವರ ಹೊಸ ಪೋಸ್ಟರ್ ರಿಲೀಸ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿತ್ತು.
ಕನ್ನಡ ಚಿತ್ರರಂಗದಲ್ಲಿ ಹೊಸ ಆಯಾಮ ಬರೆದ ಸಿನಿಮಾ ಕೆಜಿಎಫ್. ಕನ್ನಡದ ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸಿತು. ಕನ್ನಡದ ಹಮ್ಮೆಯ ಸಿನಿಮಾ ಆಗಿ ಹೊರಹೊಮ್ಮಿತ್ತು. ಯಶ್ ರನ್ನು ಇಂಟರ್ ನ್ಯಾಷನಲ್ ಸ್ಟಾರ್ ಆಗಿ ಮಾಡಿತ್ತು ಕೆಜಿಎಫ್ ಸಿನಿಮಾ. ಕನ್ನಡ ಚಿತ್ರರಂಗವನ್ನು ಇತರರು ನೋಡುವ ದೃಷ್ಟಿಕೋನವನ್ನು ಕೆಜಿಎಫ್ ಬದಲಾಯಿಸಿತು. ಇಷ್ಟು ಖ್ಯಾತಿ ಪಡೆದ ಕೆಜಿಎಫ್ ಸಿನಿಮಾ ಕ್ಲೈಮ್ಯಾಕ್ಸ್ ನಲ್ಲಿ ನಿರ್ದೇಶಕರು ಇಟ್ಟಿರುವ ಒಂದೆರಡು ಪ್ರಶ್ನೆಗಳಿಗೆ ಉತ್ತರಕ್ಕಾಗಿ ಕಾಯುತ್ತಿರುವ ಅಭಿಮಾನಿಗಳು ಕೆಜಿಎಫ್ ನ ಮುಂದುವರೆದ ಭಾಗವನ್ನು ನೋಡಿ ಉತ್ತರ ಕಂಡುಕೊಳ್ಳಲು ಬಹಳ ಕಾತುರರಾಗಿದ್ದಾರೆ. ಈಗಾಗಲೇ ಶೇ.75 ರಷ್ಟು ಚಿತ್ರೀಕರಣ ಮುಗಿಸಿದೆ ಕೆಜಿಎಫ್ ಚಾಪ್ಟರ್2 ತಂಡ.ನಮೆಗಲ್ಲ ತಿಳಿದಿರುವ ಹಾಗೆ ಕೆಜಿಎಫ್ ಚಾಪ್ಟರ್2 ಸಿನಿಮಾದಲ್ಲಿ ಬಹುತಾರಾಗಣವಿದೆ. ಭಾರತದ ಹೆಸರಾಂತ ಪ್ರತಿಭಾನ್ವಿತ ಕಲಾವಿದರ ದಂಡೇ ಕೆಜಿಎಫ್2 ಸಿನಿಮಾದಲ್ಲಿ ಇರಲಿದೆ. ರವೀನಾ ಟಂಡನ್, ರಾವ್ ರಮೇಶ್, ಅನಂತ್ ನಾಗ್, ಈಶ್ವರಿ ರಾವ್ ಸೇರಿದಂತೆ ಮಹಾನ್ ಕಲಾವಿದರು ನಟಿಸುತ್ತಿದ್ದಾರೆ. ಆದರೆ ಕೆಜಿಎಫ್ 2 ಸಿನಿಮಾದ ಮೇಜರ್ ಆಕರ್ಷಣೆ ಅಧೀರನ ಪಾತ್ರ ನಿರ್ವಹಿಸುತ್ತಿರುವ ಬಾಲಿವುಡ್ ನಟ ಸಂಜಯ್ ದತ್. ಸಂಜಯ್ ದತ್ ಅವರು ಕೆಜಿಎಫ್2 ಸಿನಿಮಾದಲ್ಲಿ ನಟಿಸುತ್ತಿರುವುದು ಕನ್ನಡಿಗರಿಗೆ ಹೆಮ್ಮೆ. ಯಶ್ ಅವರಿಗೆ ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಸಂಜಯ್ ದತ್. ಅಧೀರನ ಪಾತ್ರದಲ್ಲಿ ಅವರನ್ನು ನೋಡಲು ಅಭಿಮಾನಿಗಳು ಮಾತ್ರವಲ್ಲದೆ ಇಡೀ ಭಾರತ ಚಿತ್ರರಂಗವೇ ಕಾಯುತ್ತಿದೆ.
