ಬೆಂಗಳೂರು: ಇಡೀ ದೇಶದ ಚಿತ್ರರಂಗದಲ್ಲಿ ಕೆಜಿಎಫ್-೨ ಚಿತ್ರದ್ದೆ ಸೌಂಡು, ಚಿತ್ರದ ಶೂಟಿಂಗ್ ಸಹ ಬಹುತೇಕ ಪೂರ್ಣಗೊಂಡಿದ್ದು, ಯಶ್ ಹುಟ್ಟುಹಬ್ಬಕ್ಕೆ ಟೀಸರ್ ಸಹ ಬಿಡುಗಡೆಯಾಗಲಿದೆ.
ಇದೀಗ ಕೆಜಿಎಫ್-೨ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಂಜಯ್ ದತ್ ಪೋಸ್ಟರ್ ಒಂದನ್ನು ರಿಲೀಸ್ ಮಾಡಿರುವುದು ಅಭಿಮಾನಿಗಳಲ್ಲಿ ಮತಷ್ಟು ಕುತೂಹಲ ಹೆಚ್ಚಿಸಿದೆ. ಅಧೀರನ ಪಾತ್ರದ ಪೋಸ್ಟರ್ ಅನ್ನು ಹಂಚಿಕೊಂಡಿರುವ ಸಂಜತ್ ದತ್, ಇನ್ನು ಎರಡು ದಿನಗಳಷ್ಟೆ, ಅಧೀರನನ್ನು ನಿಮಗೆ ಪರಿಚಯಿಸಲಿದ್ದೇವೆ, ಜನವರಿ ೮, ಬೆಳಿಗ್ಗೆ ೧೦.೧೮ ಕ್ಕೆ ಕೆಜಿಎಫ್-೨ ಟೀಸರ್ ಬಿಡುಗಡೆಯಾಗಲಿದೆ, ಮರಯಬೇಡಿ, ನೆನಪಿಟ್ಟುಕೊಳ್ಳಿ ಎಂದು ಸಾಮಾಜಿಕ ಜಾತಾಣಗಳಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟರ್ ಭಾರಿ ಮಟ್ಟದಲ್ಲಿ ವೈರಲ್ ಆಗುತ್ತಿದೆ.
ಇನ್ನೂ ಸಂಜಯ್ ದತ್ ಹಂಚಿಕೊಂಡ ಪೋಸ್ಟರ್ ನಲ್ಲಿ ಅಧೀರನು ಕತ್ತಿ ಹಿಡಿದುಕೊಂಡಿರುವ ಕೈ ಮಾತ್ರ ಕಾಣುತ್ತದೆ. ಬೆರಳಿಗೆ ಸಿಂಹ ಮುಖದ ಉಂಗುರ ಹಾಕಿಕೊಂಡಿದ್ದು, ಅದು ಅಧೀರನ ಪಾತ್ರದ ಗುರುತನ್ನು ಹೇಳುವಂತಿದೆ.
ಅಂದಹಾಗೆ ಜನವರಿ ೮ ರಂದು ನಟ ಯಶ್ ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಅದೇ ದಿನ ಕೆಜಿಎಫ್-೨ ಟೀಸರ್ ಬಿಡುಗಡೆ ಮಾಡುವ ಮೂಲಕ ಯಶ್ ರವರಿಗೆ ಹುಟ್ಟುಹಬ್ಬದ ಶುಭಾಷಯಗಳನ್ನು ತಿಳಿಸಲಿದ್ದಾರೆ ಕೆಜಿಎಫ್ ತಂಡ.
