ಬೆಂಗಳೂರು: ಡ್ರಗ್ಸ್ ಕೇಸ್ನಲ್ಲಿ ಜೈಲು ಸೇರಿ ಜಾಮೀನು ಮೇಲೆ ಹೊರಬಂದ ನಟಿ ಸಂಜನಾ ಗಲ್ರಾನಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಇತ್ತೀಚಿಗಷ್ಟೆ ಫೇಸ್ಬುಕ್ನಲ್ಲಿ ಲೈವ್ಗೆ ಬಂದು ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಟಿ ಸಂಜನಾ ಗಲ್ರಾನಿ ಎಂದ ತಕ್ಷಣ ಅವರ ಕುರಿತು ಕೇಳಿಬಂದ ಅನೇಕ ಸುದ್ದಿಗಳ ಪೈಕಿ ಹೆಚ್ಚಾಗಿ ಚರ್ಚೆ ಆಗಿದ್ದು ಅವರ ಮದುವೆ ಹಾಗೂ ಮತಾಂತರದ ಕುರಿತು. ಈ ಎಲ್ಲಾ ವಿಚಾರಗಳ ಕುರಿತು ಸಂಜನಾ ಇದೀಗ ಸ್ಪಷ್ಟನೆ ನೀಡಿದ್ದಾರೆ. ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ ಸಂಜನಾ ತಾವು ಇಸ್ಮಾಂ ಧರ್ಮಕ್ಕೆ ಮತಾಂತರವಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರತಿನಿತ್ಯ ನಮಾಜ್ ಹಾಗೂ ಪೂಜೆ ಮಾಡುವಾಗ ಇಷ್ಟೆಲ್ಲಾ ನೋವು ನೀಡುವ ಬದಲು ನನಗೆ ಸಾವು ಕೊಡು ದೇವರೇ ಎಂದು ಬೇಡಿಕೊಳ್ಳುತ್ತೇನೆ ಎಂದಿದ್ದಾರೆ.
ನನಗೆ ಎಲ್ಲರ ದೇವರ ಮೇಲೂ ಅಪಾರವಾದ ನಂಬಿಕೆಯಿದೆ. ಅದೇ ರೀತಿ ಅಲ್ಲಾ ಮೇಲೂ ನಂಬಿಕೆ ಇದೆ. ಈ ಕಾರಣಕ್ಕಾಗಿಯೇ ನಾನು ಮತಾಂತರ ಆಗಿದ್ದೇನೆ. ಆದರೆ ಈ ವಿಷಯವನ್ನು ಏತಕ್ಕಾಗಿ ಇಷ್ಟು ದೊಡ್ಡದಾಗಿ ಮಾಡಿದ್ದಾರೋ ನನಗೆ ಗೊತ್ತಿಲ್ಲ. ಮತಾಂತರವಾಗುವುದು ನನ್ನಿಷ್ಟ. ನನ್ನ ವೈಯುಕ್ತಿಕ ವಿಚಾರ. ನನ್ನ ಖಾಸಗಿ ವಿಚಾರದ ಬಗ್ಗೆ ಏಕೆ ಇಷ್ಟು ಚರ್ಚೆ ಎಂದಿದ್ದಾರೆ.
ಇನ್ನೂ ಮದುವೆ ಕುರಿತು ಸಹ ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದು, ನಾನು ಎಂಗೇಜ್ ಆಗಿರುವುದು ನಿಜ. ಆದರೆ ಅದನ್ನು ಮುಚ್ಚಿಡುವ ಉದ್ದೇಶ ನನಗಿಲ್ಲ. ಆದರೆ ಲಾಕ್ಡೌನ್ ಸಮಯದಲ್ಲಿ ಎಂಗೇಜ್ ಆಗಿರುವ ಕಾರಣ ಸಂಭ್ರಮದಿಂದ ನಡೆದಿಲ್ಲ. ಒಂದು ಚಾರಿಟೇಬಲ್ ಸೊಸೈಟಿಯಲ್ಲಿ ನನ್ನ ಮದುವೆ ಸರಳವಾಗಿ ನಡೆಯಲಿದೆ ಎಂದಿದ್ದಾರೆ.
