Film News

ವೈದ್ಯರ ದಿನ ಪತಿಗೆ ಶುಭಾಶಯ ತಿಳಿಸಿದ ಸಂಜನಾ ಗಲ್ರಾನಿ!

ದೇಶದೆಲ್ಲೆಡೆ ವೈದ್ಯರ ದಿನ ಆಚರಿಸಿದ್ದು, ಕೊರೋನ ಸಂಕಷ್ಟ ಸಮಯದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೆಲಸ ಮಾಡಿದ ವೈದ್ಯರನ್ನ ಸ್ಮರಿಸಲಾಗುತ್ತಿದೆ. ಅದೇ ರೀತಿ ಸಂಜನಾ ಗಲ್ರಾನಿ ತಮ್ಮ ಪತಿಯ ಜೊತೆಗಿನ ಫೋಟೋವನ್ನ ಹಂಚಿಕೊಂಡು ವೈದ್ಯರ ದಿನಕ್ಕೆ ಶುಭ ಕೋರಿದ್ದಾರೆ.

ಪತಿಯ ಜೊತೆ ಫೋಟೋ ಅಂಚಿಕೊಂಡು ಬಾವನಾತ್ಮಕ ಬರೆದುಕೊಳ್ಳುವ ಮೂಲಕ ವೈದ್ಯರ ದಿನದ ಶುಭ ತಿಳಿಸಿದ್ದಾರೆ.ವೈದ್ಯರೇ ರಿಯಲ್ ಹೀರೋಗಳು ಸಾಂಕ್ರಾಮಿಕ ರೋಗದ ಸಂಕಷ್ಟದ ಸಮಯದಲ್ಲಿ ಇದನ್ನ ಅವರು ನಿರೂಪಿಸಿದ್ದಾರೆ ಸಹ ತಮ್ಮ ಪ್ರಾಣವನ್ನು ಲೆಕ್ಕಿಸದೇ ದೇವರಂತೆ ಇತರ ಪರಾಣವನ್ನು ಉಳಿಸಿದ್ದಾರೆ ಎಂದು ಹೇಳಿದ್ದಾರೆ.

ಕೊರೋನ ಸಂಕಷ್ಟದ ಸಮಯದಲ್ಲಿ ಸಾಕಷ್ಟು ವೈದ್ಯರು ಜೀವ ತ್ಯಾಗ ಮಾಡಿದ್ದಾರೆ. ವ್ಯಾಸ್ಕುಲಾರ್ ಸರ್ಜನ್ ನ ಪತ್ನಿಯಾದ ನಾನು ಕೊರೋನ ಸಮಯದಲ್ಲಿ ತಿಂಗಳಿಗೆ ಒಂದು ದಿನವಾದ್ರೂ ರಜೆ ತಗೊಳಿ ಎಂದು ಹೇಳುತ್ತಿದೆ ಮತ್ತು ಹಲವು ಬಾರಿ ವಾಗ್ವಾದಗಳನ್ನು ಸಹ ಮಾಡಿಕೊಂಡಿದ್ದೇವೆ ಈ ವೇಳೆ ಅವರು ನನಗೆ ಸ್ಪಷ್ಟವಾಗಿ ಹೇಳಿದರು ನನ್ನ ಜೀವ ಇರುವುದು ಜನರ ಸೇವೆ ಮಾಡಲು ಇದೆ ನನ್ನ ಮುಖ್ಯ ಆದ್ಯತೆ ಇದು ನನ್ನ ಕುಟುಂಬಕಿಂತಲೂ ಮಿಗಿಲಾದುದ್ದು ಎಂದರು, ಇತರ ಮಹಿಳೆಯರಂತೆ ಕುಟುಂಬವೇ ನನ್ನ ಮೊದಲ ಆದ್ಯತೆ ನಂತರ ಬೇರೆಯವರ ವಿಷಯ ಎಂಬುದು ನನ್ನ ವಾದವಾಗಿತ್ತು.

ಜೀವನ ಮದುವೆ ಹಾಗೂ ಸಹಬಾಗಿತ್ವ ಅರ್ಥೈಸಿಕೊಳ್ಳುವುದರ ಮೇಲೆ ನಿಂತಿದೆ ಪರಸ್ಪರ ಆಲೋಚನೆ ಪ್ರಕ್ರಿಯೆಯನ್ನ ಸರಿಹೊಂದಿಸುವುದು ಹಾಗೂ ಅವರ ನಿರ್ಧಾರಗಳನ್ನ ಗೌರವಿಸುವುದು ಎಂದು ಸಂಜನಾ ಬರೆದುಕೊಂಡಿದ್ದಾರೆ.

https://www.instagram.com/p/CQxh3HMp3Rk/?utm_medium=copy_link

Trending

To Top