Film News

ಆಚಾರ್ಯ ಚಿತ್ರದಲ್ಲಿ ಕನ್ನಡದ ಭಜರಂಗಿ ವಿಲನ್ ನಟನೆ

ಹೈದರಾಬಾದ್: ಟಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ಆಚಾರ್ಯ ಚಿತ್ರದಲ್ಲಿ ಕನ್ನಡದಲ್ಲಿ ಹಿಟ್ ಹೊಡೆದ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ ಚಿತ್ರದಲ್ಲಿ ವಿಲನ್ ಆಗಿ ನಟನೆ ಮಾಡಿದ್ದ ಸೌರವ್ ಲೋಕೇಶ್ ವಿಲನ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗಿದೆ.

ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ ಬಿಗ್ ಬಜೆಟ್ ಸಿನೆಮಾ ಆಚಾರ್ಯ ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿ ನಡೆಯುತ್ತಿದೆ. ಇದೀಗ ಭಜರಂಗಿ ಚಿತ್ರದಲ್ಲಿನ ವಿಲನ್ ಸೌರವ್ ಲೋಕೇಶ್ ಆಚಾರ್ಯ ಚಿತ್ರದಲ್ಲೂ ವಿಲನ್ ಪಾತ್ರವನ್ನು ಪೋಷಣೆ ಮಾಡಲಿದ್ದಾರಂತೆ. ಆದರೆ ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ಬಹಿರಂಗ ಮಾಡಿಲ್ಲ. ಇನ್ನೂ ಸ್ಯಾಂಡಲ್‌ವುಡ್ ನಟ ಸೌರವ್ ಲೋಕೇಶ್ ಮೊದಲ ಬಾರಿಗೆ ತೆಲುಗು ಸಿನಿರಂಗದ ಚಿರಂಜೀವಿ ಹಾಗೂ ರಾಮ್ ಚರಣ್ ತೇಜ್ ರವರ ಜೊತೆ ಅಭಿನಯಿಸಲಿದ್ದಾರೆ.

ಈಗಾಗಲೇ ಸ್ಯಾಂಡಲ್‌ವುಡ್ ನ  ಸುಮಾರು 20 ಸಿನೆಮಾಗಳಲ್ಲಿ ಸೌರವ್ ಲೋಕೇಶ್ ನಟಿಸಿದ್ದು, ಆಚಾರ್ಯ ಚಿತ್ರದಲ್ಲಿ ಪಾಲ್ಗೊಳ್ಳುವ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಭಜರಂಗಿ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದರು, ಇದೀಗ ಭಜರಂಗಿ-೨ ಚಿತ್ರದಲ್ಲೂ ನಟಿಸಿದ್ದು, ಈ ಚಿತ್ರದಲ್ಲಿ ಸೌರವ್ ಲೋಕೇಶ್ ಅಭಿನಯ ಯಾವ ರೀತಿಯಲ್ಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಇನ್ನೂ ಆಚಾರ್ಯ ಚಿತ್ರದಲ್ಲಿ ಈಗಾಗಲೇ ನಟ ಸೋನು ಸೂದ್ ಸಹ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದು, ಸೌರವ್ ಲೋಕೇಶ್ ಸಹ ಮತ್ತೊಬ್ಬ ವಿಲನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಈ ಚಿತ್ರದ ಕೆಲವೊಂದು ದೃಶ್ಯಗಳನ್ನು ಚಿತ್ರೀಕರಿಸಲು ಭಾರಿ ಮೊತ್ತದಲ್ಲಿ ದೇವಾಲಯ ಹಾಗೂ ಗ್ರಾಮವೊಂದರ ಸೆಟ್ ಅನ್ನು ಸಹ ನಿರ್ಮಾಣ ಮಾಡಿದ್ದಾರೆ. ಚಿರಂಜೀವಿ ರವರಿಗೆ ನಾಯಕಿಯಾಗಿ ಬಹು ಬೇಡಿಕೆ ನಟಿ ಕಾಜಲ್ ಅಗರವಾಲ್ ಅಭಿನಯಿಸಿದ್ದಾರೆ.

Trending

To Top