ನಡುರಸ್ತೆಯಲ್ಲೇ ಕುಡಿದು ಗಲಾಟೆ ಮಾಡಿದ ಆಶಿಕಾ ರಂಗನಾಥ್, ವೈರಲ್ ಆದ ವಿಡಿಯೋ…!

ಕನ್ನಡ ಸಿನಿರಂಗದಲ್ಲಿ ಬಹುಬೇಡಿಕೆ ನಟಿಯರಲ್ಲಿ ಒಬ್ಬರಾದ ಆಶಿಕಾ ರಂಗನಾಥ್ ಸಾಲು ಸಾಲು ಸಿನೆಮಾಗಳ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಗಳಿಸಿಕೊಂಡರು. ಕನ್ನಡದ ಸ್ಟಾರ್‍ ನಟರಾದ ಗಣೇಶ್, ಶ್ರೀಮುರಳಿ, ಸುದೀಪ್ ಸೇರಿದಂತೆ ಅನೇಕ ಸ್ಟಾರ್‍ ಗಳ ಜೊತೆ ಹಿಟ್ ಸಿನೆಮಾಗಳ ಮೂಲಕ ಸ್ಟಾರ್‍ ಡಮ್ ಗಿಟ್ಟಿಸಿಕೊಂಡರು. ಕ್ರೇಜಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ದೊಡ್ಡ ಮಟ್ಟದ ಕ್ರೇಜ್ ಪಡೆದುಕೊಂಡರು. ಬಳಿಕ ಮುಗುಳುನಗೆ ಎಂಬ ಸಿನೆಮಾದ ಮೂಲಕ ಫೇಮ್ ಪಡೆದುಕೊಂಡಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಅನೇಕ ಸಿನೆಮಾಗಲ ಮೂಲಕ ಕ್ರೇಜ್ ಪಡೆದುಕೊಂಡ ಆಶಿಕಾ ರಂಗನಾಥ್ ಇತ್ತೀಚಿಗೆ ಬೇರೆ ಭಾಷೆಗಳ ಸಿನೆಮಾಗಳಲ್ಲೂ ಸಹ ಕಾಲಿಟ್ಟಿದ್ದಾರೆ. ಸದ್ಯ ಆಕೆ ಹತ್ತು ಸಿನೆಮಾಗಳಿಗೂ ಹೆಚ್ಚು ಸಿನೆಮಾಗಳಲ್ಲಿ ಆಕೆ ನಟಿಸಿದ್ದಾರೆ. ಆದರೆ ಇಲ್ಲಿಯವರೆಗೂ ಈಕೆ ತನ್ನ ಮೇಲೆ ಯಾವುದೇ ವಿವಾದಗಳು ಹುಟ್ಟಿರಲಿಲ್ಲ. ಇನ್ನೂ ಇದೀಗ ಆಶಿಕಾ ನಡುರಸ್ತೆಯಲ್ಲೇ ಕುಡಿದು ಗಲಾಟೆ ಮಾಡಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.  ಕುಡಿದ ಮತ್ತಿನಲ್ಲಿ ಆಕೆ ರಂಪಾಟ ಮಾಡಿದ್ದಾರೆ. ಕುಡಿದು ಜಗಳ ಮಾಡಿಕೊಂಡಿದ್ದಾರೆ. ಈ ಸಂಬಂಧ ಕೆಲವೊಂದು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿವೆ. ಇನ್ನೂ ಆಶಿಕಾ ರಂಗನಾಥ್ ಕುಡಿದು ಗಲಾಟೆ ಮಾಡಲು ಕಾರಣವೂ ಸಹ ಬೇರೆನೇ ಇದೆ. ಕುಡಿದು ಗಲಾಟೆ ಮಾಡುವುದರ ಹಿಂದಿನ ಸತ್ಯಾಂಶ ಏನು ಎಂಬುದನ್ನು ಮುಂದೆ ತಿಳಿಯೋಣ

ಸದ್ಯ ವೈರಲ್ ಆಗಿರುವಂತಹ ವಿಡಿಯೋದಲ್ಲಿ ಆಶಿಕಾ ರಂಗನಾಥ್ ಕೈಯಲ್ಲಿ ಎಣ್ಣೆಯ ಬಾಟಲಿಯಿನ್ನು ಹಿಡಿದು ಪೊಲೀಸರ ಮುಂದೆಯೇ ತುರಾಡುತ್ತಾ, ತನ್ನನ್ನ ವಿಡಿಯೋ ಮಾಡುತ್ತಿರುವ ವ್ಯಕ್ತಿಗೆ ಕ್ಯಾಮೆರಾ ಆಫ್ ಮಾಡುವಂತೆ ಧಮ್ಕಿ ಹಾಕುತ್ತಿರುತ್ತಾರೆ. ಜೊತೆಗೆ ವಿಡಿಯೋ ಮಾಡುತ್ತಿದ್ದ ವ್ಯಕ್ತಿಗೆ ಮಧ್ಯದ ಬೆರಳನ್ನು ಸಹ ತೋರಿಸಿದ್ದಾರೆ. ಇನ್ನೂ ಈ ವಿಡಿಯೋ ನಿಜವಲ್ಲ. ಆಶಿಕಾ ರಂಗನಾಥ್ ಅಭಿನಯಿಸುತ್ತಿರುವ ರೆಮೋ ಸಿನೆಮಾದ ಶೂಟಿಂಗ್ ದೃಶ್ಯ. ಈ ಸಿನೆಮಾವನ್ನು ಪವನ್ ಒಡೆಯರ್‍ ನಿರ್ದೇಶನ ಮಾಡುತ್ತಿದ್ದು, ಈ ಸಿನೆಮಾದ ಒಂದು ದೃಶ್ಯವೇ ಈ ವಿಡಿಯೋ ಆಗಿದೆ. ಸದ್ಯ ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದ್ದು, ಆಶಿಕಾ ಕೈಯಲ್ಲಿದ್ದ ಬಾಟಲಿ ಸಹ ಒಪೆನ್ ಆಗಿಲ್ಲ.

ಇನ್ನೂ ಸಿನೆಮಾದ ಶೂಟಿಂಗ್ ಗೆ ಸಂಬಂಧಿಸಿದ ಈ ವಿಡಿಯೋ ಲೀಕ್ ಮಾಡಿದ್ದಾದರೂ ಯಾರು ಎಂಬ ಸಂದೇಹಗಳು ಮೂಡಿದೆ. ಸಿನೆಮಾ ಬಿಡುಗಡೆಗೂ ಮುಂಚೆಯೇ ಸಿನೆಮಾದ ಇಂತಹ ವಿಡಿಯೋಗಳು ಲೀಕ್ ಆಗುವುದು ಆಗಾಗ ನಡೆಯುತ್ತಿರುತ್ತದೆ. ಕೆಲವರು ಇದನ್ನು ಖಂಡಿಸಿದರೇ ಮತ್ತೆ ಕೆಲವರು ಇದು ಪಬ್ಲಿಸಿಟಿ ಗಿಮಿಕ್ ಎನ್ನುತ್ತಿರುತ್ತಾರೆ.

Previous articleಕಾಲಿಗೆ ಗಾಯ ಆಗಿದ್ದರು ಜಿಮ್ ಗೆ ಹೋದ ಪೂಜಾ ಹೆಗ್ಡೆ, ವೈರಲ್ ಆದ ಪೊಟೋಸ್…!
Next articleನಯನತಾರಾ ಹುಟ್ಟುಹಬ್ಬಕ್ಕೆ ಎಮೋಷನಲ್ ಆಗಿ ಶುಭಾಷಯ ತಿಳಿಸಿದ ವಿಘ್ನೇಶ್ ಶಿವನ್…!