Film News

ರಾಬರ್ಟ್ ಚಿತ್ರ ಬಿಡುಗಡೆಗಿದ್ದ ಎಲ್ಲಾ ವಿಘ್ನಗಳು ದೂರ: ಬಿಡುಗಡೆ ಹಾದಿ ಸುಗಮ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರವನ್ನು ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಮಾಡಲು ಅಡ್ಡಿಯಾಗುತ್ತಿದೆ ಎಂದು ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಫಿಲಂ ಚೇಂಬರ್ ಗೆ ದೂರು ನೀಡಿದ್ದರು.

ಆದರೆ ಇದೀಗ ರಾಬರ್ಟ್ ಚಿತ್ರ ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಮಾಡಲು ಉದ್ಬವಿಸಿದ ಎಲ್ಲಾ ತೊಂದರೆಗಳು ನಿವಾರಣೆಯಾಗಿದ್ದು, ತೆಲುಗು ರಾಜ್ಯಗಳಲ್ಲೂ ಸಹ ರಾಬರ್ಟ್ ಅಬ್ಬರಿಸಲಿದೆಯಂತೆ. ಏಕಕಾಲದಲ್ಲಿ ಕನ್ನಡ ಹಾಗೂ  ತೆಲುಗು ಎರಡೂ ಭಾಷೆಗಳಲ್ಲೂ ರಾಬರ್ಟ್ ಚಿತ್ರ ಬಿಡುಗಡೆಯಾಗಲಿದ್ದು, ತೆಲುಗು ರಾಜ್ಯಗಳಲ್ಲಿ ಸುಮಾರು ೪೦೦ ಚಿತ್ರಮಂದಿರಗಳಲ್ಲಿ ರಾಬರ್ಟ್ ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ.

ಇನ್ನೂ ರಾಬರ್ಟ್ ಚಿತ್ರವನ್ನು ಬರಮಾಡಿಕೊಳ್ಳಲು ನಿರ್ಮಾಪಕ ಚದಲವಾಡ ಶ್ರೀನಿವಾಸ ರಾವ್ ನೇತೃತ್ವದಲ್ಲಿ ಹಲವು ತೆಲುಗು ನಿರ್ಮಾಪಕರು ನಿನ್ನೆಯಷ್ಟೆ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಯವರನ್ನು ಆತ್ಮೀಯವಾಗಿ ಸನ್ಮಾನಿಸಿದ್ದಾರೆ. ಇದೇ ಸಂದರ್ಭದಲ್ಲಿ ನಿರ್ಮಾಪಕ ಶ್ರೀನಿವಾಸ ರಾವ್ ಮಾತನಾಡಿ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ರಾವ್ ರವರಿಗೆ ಆತ್ಮೀಯವಾದ ಸ್ವಾಗತ, ನಿಮ್ಮ ಸಿನೆಮಾವನ್ನು ನಮ್ಮ ಸಿನೆಮದಂತೆ ನೋಡಿಕೊಳ್ಳುತ್ತೇವೆ. ಕನ್ನಡ ಪ್ರೇಕ್ಷಕರು ತೆಲುಗು ಸಿನೆಮಾಗಳನ್ನು ಯಾವ ರೀತಿಯಲ್ಲಿ ಆತ್ಮೀಯವಾಗಿ ಸ್ವಾಗತಿಸುತ್ತಾರೆ ಅಂತೆಯೇ ನಾವು ಸಹ ಕನ್ನಡ ಸಿನೆಮಾಗಳನ್ನು ಸ್ವಾಗತಿಸೋಣ. ರಾಬರ್ಟ್ ಸಿನೆಮಾ ಬಿಡುಗಡೆಗೆ ತೆಲುಗು ರಾಜ್ಯಗಳಲ್ಲಿ ತಡೆ ನೀಡಲಾಗಿದೆ ಎಂಬುದು ಸುಳ್ಳು ಸುದ್ದಿಯಾಗಿದ್ದು, ಯಾರು ಇದನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ.

Trending

To Top