Film News

ಸ್ಯಾಂಡಲ್ ವುಡ್ ರೆಬೆಲ್ ಸ್ಟಾರ್ ಅಂಬರೀಶ್ ರವರ ಹುಟ್ಟುಹಬ್ಬದ ಸಂಭ್ರಮ…

ಕನ್ನಡ ಸಿನಿರಂಗದ ಖ್ಯಾತ ನಟ ರೆಬೆಲ್ ಸ್ಟಾರ್‍ ಅಂಬರೀಶ್ ರವರಿಗೆ ಇಂದು 70ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಕನ್ನಡ ಸಿನಿರಂಗದಲ್ಲಿ ದೊಡ್ಡ ಹೆಸರು ಗಳಿಸಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಅಂಬರೀಶ್ ರವರು ಮೃತಪಟ್ಟಾಗ ಇಡೀ ಕನ್ನಡ ನಾಡು ಶೋಕ ಸೂಚಿಸಿತ್ತು. ಸಿನಿರಂಗದ ಜೊತೆಗೆ ರಾಜಕೀಯದಲ್ಲೂ ಮಿಂಚಿದ ರೆಬೆಲ್ ಸ್ಟಾರ್‍ ಅಂಬರೀಶ್ ರವರ ಕೊಡುಗೆ ಅಪಾರವಾದುದು.

ಮಂಡ್ಯದ ಗಂಡು ಅಂಬರೀಶ್ ಕನ್ನಡ ನಾಡಿನ ಅಚ್ಚುಮೆಚ್ಚಿನ ನಟ. ಅಂಬಿಯನ್ನು ನಿರ್ಮಾಪಕರ ಪಾಲಿಗೆ ಸೂಪರ್‍ ಸ್ಟಾರ್‍ ಎಂದೇ ಕರೆಯುತ್ತಾರೆ. ತಮ್ಮ ನೇರ ನುಡಿಗಳ ಮೂಲಕ ಎಲ್ಲರನ್ನೂ ಸೆಳೆಯುತ್ತಿದ್ದರು. ಇಂದು ರೆಬೆಲ್ ಸ್ಟಾರ್‍ ರವರ ಅಂಬರೀಶ್ ಹುಟ್ಟುಹಬ್ಬ. ಅವರು ಬದುಕಿದಿದ್ದರೇ ಇಡೀ ಕರ್ನಾಟಕವೇ ಜೋರಾಗಿ ಆಚರಣೆ ಮಾಡುತ್ತಿದ್ದು, ಜೊತೆಗೆ ಅಂಬಿಯವರ ಮನೆಯ ಮುಂದೆ ಜನಸಾಗರವೇ ಹರಿದು ಬರುತ್ತಿತ್ತು. ರಾಜ್ಯದ ಮೂಲೆ ಮೂಲೆಗಳಿಂದಲೂ ರೆಬೆಲ್ ಸ್ಟಾರ್‍ ಅಭಿಮಾನಿಗಳು  ಸಿನೆಮಾ ಹಾಗೂ ರಾಜಕೀಯ ಮುಖಂಡರುಗಳಿಂದ ಶುಭಾಷಯಗಳ ಸುರಿಮಳೆಯಾಗುತ್ತಿದೆ. ತಾವು ಪ್ರೀತಿಸುವ ಅಭಿಮಾನದ ನಟ ದಿವಂಗತರಾದರೂ ಇಂದಿಗೂ ಸಹ ಅಂಬಿ ರವರ ಮೇಲೆ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ.

ಇನ್ನೂ ಅಂಬಿಯವರ ಪತ್ನಿ ಸುಮಲತಾ ಅಂಬಿ ನೆನಪಿನಲ್ಲಿಯೇ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದ ಮೂಲಕ ವಿಶೇಷ ರೀತಿಯ ಶುಭಾಷಯಗಳನ್ನು ತಿಳಿಸಿದ್ದಾರೆ. ಟ್ವೀಟರ್‍ ಮೂಲಕ ಶುಭಾಷಯ ತಿಳಿಸಿದ ನಟಿ ಸುಮಲತಾ ಅಂಬಿಯವರನ್ನು ಗುಣಗಾಣ ಮಾಡಿದ್ದಾರೆ. ಹೃದಯ ಶ್ರೀಮಂತಿಕೆ ಹೊಂದಿದ್ದ ವ್ಯಕ್ತಿ ನೀವು. ನಿಮಗೆ 70 ವರ್ಷ ಅನ್ನೊಂದು ಚಿಕ್ಕ ಸಂಖ್ಯೆಯಷ್ಟೆ. ಆದರೆ ನೀವು ಸದಾ ನಮ್ಮೊಂದಿಗೆ ಜೀವಿಸುತ್ತಲೇ ಇರುತ್ತೀರಾ. ನಿಮಗೆ ಎಂದಿಗೂ ವಯಸ್ಸು ಅನ್ನುವುದೇ ಇಲ್ಲ. ಅಂಬಿ ಅಮರ ಎಂದು ಟ್ವೀಟ್ ಮಾಡಿದ್ದಾರೆ.

ಇದರ ಜೊತೆಗೆ ಮತ್ತೊಂದು ಟ್ವೀಟ್ ಸಹ ಸುಮಲತಾ ಮಾಡಿದ್ದಾರೆ. ಆಗಸಕ್ಕೆ ಯಾವುದೇ ಮಿತಿಯಿಲ್ಲ. ಅಂಬರೀಶ್ ಆ ಆಕಾಶಕ್ಕೆ ದೇವರಿದ್ದಂಗೆ. ಆಕಾಶದಂತೆ ನಿಮ್ಮ ಪ್ರೀತಿಗೂ ಸಹ ಮಿತಿಯಿಲ್ಲ. ನಿಮ್ಮ ಎಂದಿಗೂ ಮರೆಯಲೂ ಸಾಧ್ಯವಾಗದಷ್ಟು ನೆನಪುಗಳನ್ನು ನಮಗೆ ಕೊಟ್ಟು ಹೋಗಿದ್ದಾರೆ. ಜೀವನ ಪರ್ಯಂತ ಅನುಭವಿಸುವಷ್ಟು ಖುಷಿಯನ್ನು ಕೊಟ್ಟಿದ್ದೀರಿ ಜೊತೆಗೆ ತುಂಭಾ ಪ್ರೀತಿಯನ್ನು ಸಹ ಕೊಟ್ಟಿದ್ದೀರಿ ಎಂದು ಇನ್ನೋಂದು ಟ್ವೀಟ್ ಮೂಲಕ ಅಂಬಿಯವರ ಬಗ್ಗೆ ಬರೆದುಕೊಂಡಿದ್ದಾರೆ. ಇಂದು (ಮೇ.29) ಅಂಬಿಯವರ 70 ನೇ ಹುಟ್ಟುಹಬ್ಬ. ಒಂದು ವೇಳೆ ಅವರಿದ್ದರೇ ಇಡೀ ಕರ್ನಾಟಕವೇ ಅಂಬಿಯವರ ಹುಟ್ಟುಹಬ್ಬವನ್ನು ಜೋರಾಗಿ ಆಚರಿಸಿಕೊಳ್ಳುತ್ತಿದ್ದರು. ಅಂಬಿಯಿಲ್ಲದೇ ಇದ್ದರೂ ಸಹ ಕೆಲವು ಕಡೆ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

Trending

To Top