ಅಪ್ಪು ಮೆಚ್ಚಿದ ಮ್ಯಾನ್ ಆಫ್ ದಿ ಮ್ಯಾಚ್ ಸಿನೆಮಾದ ಟ್ರೈಲರ್ ರಿಲೀಸ್!

ಕನ್ನಡ ಮೇರು ನಟ ಎಲ್ಲರ ಮನಸ್ಸನ್ನು ಗೆದ್ದ ದಿವಂಗತ ಪುನೀತ್ ರಾಜ್ ಕುಮಾರ್‍ ರವರ ನೆಚ್ಚಿನ ಸಿನೆಮಾ ಮ್ಯಾನ್ ಆಫ್ ದಿ ಮ್ಯಾಚ್ ಟ್ರೈಲರ್‍ ಬಿಡುಗಡೆಯಾಗಿದ್ದು. ಈ ಟ್ರೈಲರ್‍ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಈ ಕಥೆಯನ್ನು ಪುನೀತ್ ತುಂಬಾ ನೆಚ್ಚಿಕೊಂಡಿದ್ದರಂತೆ. ಪುನೀತ್ ರವರ ಪಿಆರ್‌ಕೆ ಪ್ರೊಸಕ್ಷನ್ ನಡಿಯಲ್ಲಿ ಈ ಸಿನೆಮಾ ನಿರ್ಮಾಣ ವಾಗಿದೆ.

ಮಾನವನ ಭಾವನೆಗಳನ್ನು ಹಾಗೂ ಸಾಮಾಜಿಕ ಸವಾಲುಗಳನ್ನು ಬಿಚ್ಚಿಡುವಂತಹ ಹಾಸ್ಯ ವಿಡಂಬನಡೆಗಳಿಂದ ಕೂಡಿದ ಟ್ರೈಲರ್‍ ಅನ್ನು ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರತಂಡ ಬಿಡುಗಡೆ ಮಾಡಿದೆ.  ಚಿತ್ರತಂಡ ಬಿಡುಗಡೆ ಮಾಡಿರುವ ಟ್ರೈಲರ್‍ ಹಾಸ್ಯದಿಂದ ಕೂಡಿದ್ದು. ಸಿನೆಮಾ ಮೇಲಿನ ಕುತೂಹಲ ಮತಷ್ಟು ಹೆಚ್ಚು ಮಾಡಿದೆ. ಚಿತ್ರದಲ್ಲಿ ನಿರ್ದೇಶಕರೊಬ್ಬರು ಸಿನೆಮಾಗೆ ಆಡಿಷನ್ ನಡೆಸುತ್ತಿರುತ್ತಾರೆ. ಅನೇಕರು ಅವಕಾಶಕ್ಕಾಗಿ ಬಂದಿರುತ್ತಾರೆ. ಅಲ್ಲಿ ನಡೆಯುವಂತಹ ಸನ್ನಿವೇಶಗಳನ್ನು ನಿರ್ದೇಶಕ ಪಾತ್ರಧಾರಿಗಳಿಂದ ಮಾಡಿಸುತ್ತಾರೆ. ಜೊತೆಗೆ ಸಂಘರ್ಷ ಶುರುವಾಗುತ್ತದೆ. ಈ ಎಲ್ಲಾ ದೃಶ್ಯಗಳು ಟ್ರೈಲರ್‍ ನಲ್ಲಿ ವ್ಯಕ್ತವಾಗಿದೆ.

ಈ ಕುರಿತು ಸಿನೆಮಾ ನಿರ್ದೇಶಕ ಸತ್ಯ ಪ್ರಕಾಶ್ ಮಾತನಾಡಿ ಈ ಸಿನೆಮಾ ನನ್ನ ಹೃದಯಕ್ಕೆ ತುಂಬಾನೆ ಹತ್ತಿರವಾದ ಸಿನೆಮಾ. ಲಾಕ್ ಡೌನ್ ಸಮಯದಲ್ಲಿ ನಾನು ಪುನೀತ್ ಸರ್‍ ಈ ಸಿನೆಮಾ ಕಥೆಯನ್ನು ಹಂಚಿಕೊಂಡಿದ್ದೆ. ಕಥೆ ಕೇಳಿದ ಕೂಡಲೇ ಅಪ್ಪು ಸರ್‍ ಇಷ್ಟಪಟ್ಟಿದ್ದರು. ಉತ್ತಮವಾದ ಕಥೆ ಇಂತಹ ಹೊಸ ಕಥೆಗಳಿಗೆ ನಾವು ಹೋಗಬೇಕು. ಹೊಸ ತಲೆಮಾರಿನ ಸಿನೆಮಾಗಳನ್ನು ನಿರ್ಮಾನ ಮಾಡಬೇಕೆಂದು ಸಿನೆಮಾ ಮಾಡಲು ಒಪ್ಪಿಗೆ ನೀಡಿದ್ದರು. ಈ ಸಿನೆಮಾದಲ್ಲಿ ಒಳ್ಳೆಯ ಪಂಚ್ ಡೈಲಾಗ್ ಗಳು. ಹಾಸ್ಯ, ಆಕರ್ಷಕ ಕಥೆ ಇದೆ ಎಂದಿದ್ದಾರೆ.

ಇನ್ನೂ ಈ ಸಿನೆಮಾದಲ್ಲಿ ಕಲಾವಿದರಾದ ರಾಜ್ ಎಸ್ ಭಟ್, ಧರ್ಮಣ್ಣ ಕಡೂರು, ವೀಣಾ ಸುಂಧರ್‍, ವಾಸುಕಿ ವೈಭವ್ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ. ಈ ಸಿನೆಮಾ ಒಟಿಟಿ ವೇದಿಕೆ ಮೂಲಕ ಬಿಡುಗಡೆಯಾಗುತ್ತಿದ್ದು. ಮೇ.5 ರಂದು ಅಮಜಾನ್ ಒಟಿಟಿ ನಲ್ಲಿ ರಿಲೀಸ್ ಆಗಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಡಿ ಸತ್ಯ ಪ್ರಕಾಶ್ ಈ ಸಿನೆಮಾವನ್ನು ನಿರ್ದೇಶನ ಮಾಡಿದ್ದಾರೆ.

Previous articleಸಮಾಜ ಸೇವೆಯಲ್ಲಿ ಸದಾ ಮುಂದಿರುವ ಮೆಗಾ ಕುಟುಂಬದ ಸೊಸೆ ಉಪಾಸನಾ….
Next articleಸೂಪರ್ ವುಮೆನ್ ಆಗಿ ಕತ್ರಿನಾ ಕೈಫ್, ಆಕ್ಷನ್ ಸಿನೆಮಾದಲ್ಲಿ ಸೂಪರ್ ವುಮೆನ್ ಆಗಲಿದ್ದಾರೆ ಕತ್ರಿನಾ