ಅಪ್ಪು ಇಲ್ಲದ ನೋವಿನಲ್ಲೇ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡ ಶಿವಣ್ಣ..!

ಕನ್ನಡ ಸಿನಿರಂಗದ ಮೇರು ನಟ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್‍ ರವರ ಹುಟ್ಟುಹಬ್ಬ ಇಂದು. 1962 ಜುಲೈ 12 ರಂದು ಶಿವರಾಜ್ ಕುಮಾರ್‍ ವರನಟ ಡಾ.ರಾಜಕುಮಾರ್‍ ಹಾಗೂ ಪಾರ್ವತಮ್ಮ ದಂಪತಿಗಳ ಮಗನಾಗಿ ಜನನ. ಇಂದಿಗೆ ಅವರು 60ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ಬಾರಿ ಅವರು ಅಪ್ಪು ಇಲ್ಲದೇ ಹುಟ್ಟುಹಬ್ಬವನ್ನು ಆಚರಿಸಕೊಳ್ಳಬೇಕಿದೆ. ಅಪ್ಪು ನೋವನ್ನು ಇನ್ನೂ ಮರೆಯಲು ಸಾಧ್ಯವಿಲ್ಲದೇ ಈ ಬಾರಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಬೇಡ ಎಂದು ಈ ಹಿಂದೆಯೇ ಹೇಳಿದ್ದರು. ಅಪ್ಪು ಇಲ್ಲದ ವಿಷಯವನ್ನು ಇಂದಿಗೂ ಸಹ ಯಾರು ನಂಬುತ್ತಿಲ್ಲ. ಶಿವರಾಜ್ ಕುಮಾರ್‍ ರವರು ಅಪ್ಪು ಅಗಲಿಕೆಯ ದುಃಖ ಅನುಭವಿಸುತ್ತಿದ್ದಾರೆ.

ಇನ್ನೂ ಪ್ರತೀ ವರ್ಷ ಶಿವಣ್ಣ ನವರ ಹುಟ್ಟುಹಬ್ಬಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮನೆಯ ಬಳಿ ಸೇರಿ ಶುಭಾಷಯ ಕೋರಿ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದರು. ಆದರೆ ಈ ಬಾರಿ ಈ ಸಂಭ್ರಮದ ಹುಟ್ಟುಹಬ್ಬ ಇಲ್ಲದ ಕಾರಣ ಎಲ್ಲರೂ ಸೋಷಿಯಲ್ ಮಿಡಿಯಾ ಮೂಲಕವೇ ಶುಭಾಷಯಗಳನ್ನು ಕೋರುತ್ತಿದ್ದಾರೆ. ಇನ್ನೂ ಶಿವಣ್ಣ ನಿನ್ನೆ ರಾತ್ರಿಯೇ ಕುಟುಂಬದ ಆಪ್ತರು ಹಾಗೂ ಕೆಲವು ಆತ್ಮೀಯ ಸ್ನೇಹಿತರ ಜೊತೆಗೆ ಹುಟ್ಟಹಬ್ಬ ಆಚರಿಸಿಕೊಂಡಿದ್ದಾರೆ. ಇನ್ನೂ ಶಿವಣ್ಣನವರ ಪತ್ನಿ ಗೀತಾ ಕೇಕ್ ತಿನ್ನಿಸುವವ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಕಳೆದ ವರ್ಷ ಸಹ ಶಿವರಾಜ್ ಕುಮಾರ್‍ ಹತ್ತಿರದ ಗೆಳೆಯರ ಜೊತೆ ಮಾತ್ರ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ಸಮಯದಲ್ಲಿ ಅಪ್ಪು ಶಿವಣ್ಣನಿಗೆ ಜೈಕಾರ ಸಹ ಹಾಕಿದ್ದರು. ಅಂದು ಶಿವಣ್ಣ ಜೊತೆಗೆ ಮಂಡಿ ಊರಿ ಕುಳಿದ ಅಪ್ಪು ಕ್ಯಾಮೆರಾಗೆ ಪೊಸ್ ಕೊಟ್ಟಿದ್ದರು. ಆದರೆ ಈ ವರ್ಷ ಅಪ್ಪು ಇಲ್ಲದೆ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಾದ ಸ್ಥಿತಿ ಬಂದಿದೆ.

ಇನ್ನೂ ನಟ ಶಿವರಾಜ್ ಕುಮಾರ್‍ ರವರಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸೋಷಿಯಲ್ ಮಿಡಿಯಾ ಮೂಲಕವೇ ಶುಭಾಷಯಗಳನ್ನು ಕೋರುತ್ತಿದ್ದಾರೆ. ಜೊತೆಗೆ ಸಿನಿರಂಗದ ಅನೇಕ ಸೆಲೆಬ್ರೆಟಿಗಳೂ ಸಹ ಶಿವಣ್ಣನಿಗೆ ಪ್ರೀತಿಯಿಂದ ಶುಭ ಕೋರುತ್ತಿದ್ದಾರೆ. ಇನ್ನೂ ಶಿವರಾಜ್ ಕುಮಾರ್‍ ಹುಟ್ಟುಹಬ್ಬದ ಅಂಗವಾಗಿ ಅನೇಕ ಹೊಸ ಸಿನೆಮಾಗಳು ಸಹ ಘೋಷಣೆ ಆಗಿದೆ. ಕೆಲವೊಂದು ಸಿನೆಮಾ ಪೋಸ್ಟರ್‍ ಗಳು, ಹಾಡುಗಳು, ಟೀಸರ್‍ ಗಳೂ ಸಹ ಇಂದು ಬಿಡುಗಡೆಯಾಗಲಿದೆ. ಅನೇಕ ಸಿನಿಮಾ ತಂಡಗಳು ಶಿವರಾಜ್ ಕುಮಾರ್‍ ಹುಟ್ಟುಹಬ್ಬಕ್ಕೆ ದೊಡ್ಡ ಸರ್ಪ್ರೈಸ್ ನೀಡಲು ಮುಂದಾಗಿವೆ.

ಸದ್ಯ ಶಿವಣ್ಣ ಕೈಯಲ್ಲಿ ಸಾಲು ಸಾಲು ಸಿನೆಮಾಗಳು ಇವೆ. ಇದರ ಜೊತೆಗೆ ಶಿವಣ್ಣನವರ 127ನೇ ಸಿನೆಮಾದ ಪೋಸ್ಟರ್‍ ಸಹ ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಖ್ಯಾತ ನಿರ್ದೇಶಕ ಸಚಿನ್ ರವಿ ಈ ಸಿನೆಮಾವನ್ನು ನಿರ್ದೇಶನ ಮಾಡಲಿದ್ದಾರೆ. ಇನ್ನೂ ಪುರಾಣಕಥನವುಳ್ಳ ಈ ಸಿನೆಮಾ ಮಹಾಭಾರತದಲ್ಲಿ ಬರುವಂತಹ ಅಶ್ವತ್ಥಾಮ ಎಂಬ ವೀರನ ಸಾಹಸವನ್ನು ಈ ಸಿನೆಮಾದಲ್ಲಿ ತೋರಿಸಲಾಗುವುದು ಎನ್ನಲಾಗುತ್ತಿದೆ. ಆಗಸ್ಟ್ ಮಾಹೆಯಲ್ಲಿ ಈ ಸಿನೆಮಾದ ಟೈಟಲ್ ಸಹ ಘೋಷಣೆಯಾಗಲಿದೆ ಎಂದು ತಿಳಿದು ಬಂದಿದೆ. ಇವುಗಳ ಜೊತೆಗೆ ಇಂದು ಶಿವಣ್ಣ ನವರ ಸಿನೆಮಾಗಳ ಅನೇಕ ಅಪ್ಡೇಟ್  ಗಳು ದೊರೆಯಲಿದೆ.

Previous articleಮಲೈಕಾ ಅರೋರಾಗೆ ಪೌಡರ್ ಕಡಿಮೆ ಹಾಕೋಳ್ಳಿ ಆಂಟಿ ಎಂದ ನೆಟ್ಟಿಗರು…!
Next articleಎಲ್ಲೋ ಕಲರ್ ಟೈಟ್ ಫಿಟ್ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಟ್ಟ ಮಿಲ್ಕಿ ಬ್ಯೂಟಿ…!