ಇತ್ತೀಚಿಗೆ ಸೌತ್ ನಲ್ಲಿ ಕನ್ನಡ ಮೂಲದ ನಟಿಯರ ಜೋರು ಸಾಗುತ್ತಿದೆ. ಈ ಹಾದಿಯಲ್ಲೇ ಕನ್ನಡದ ನಟಿ ಶ್ರೀಲೀಲಾ ಸಹ ಪೆಳ್ಳಿಸಂದD ಎಂಬ ಸಿನೆಮಾದ ಮೂಲಕ ತೆಲುಗು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಮೂಲಕವೇ ಆಕೆ ಓವರ್ ನೈಟ್ ಸ್ಟಾರ್ ನಟಿಯಾಗಿಬಿಟ್ಟರು. ಈ ಸಿನೆಮಾವನ್ನು ಖ್ಯಾತ ನಿರ್ದೇಶಕ ಕೆ.ರಾಘವೇಂದ್ರರಾವ್ ಸಾರಥ್ಯದಲ್ಲಿ ಮೂಡಿಬಂದಿತ್ತು. ಈ ಸಿನೆಮಾದಲ್ಲಿ ರಾಘವೇಂದ್ರರಾವ್ ಆಕೆಯನ್ನು ಮತಷ್ಟು ಗ್ಲಾಮರಸ್ ಆಗಿ ತೋರಿಸಿದ್ದರು. ಈ ಹಾದಿಯಲ್ಲೇ ಆಕೆಗೆ ಸದ್ಯ ಸಾಲು ಸಾಲು ಅವಕಾಶಗಳು ಗಿಟ್ಟಿಸಿಕೊಂಡಿದ್ದಾರೆ. ಇದೀಗ ಸ್ಟಾರ್ ನಟನ ಸಿನೆಮಾದಲ್ಲೂ ಸಹ ಆಕೆ ಭರ್ಜರಿ ಅವಕಾಶವನ್ನು ಪಡೆದುಕೊಂಡಿದ್ದಾರೆ.
ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ಇದೀಗ ಸ್ಟಾರ್ ನಟನ ಜೊತೆಗೆ ನಟಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ತೆಲುಗು ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ SSMB28 ಎಂಬ ಟೈಟಲ್ ನಡಿ ಸಿನೆಮಾ ಒಂದು ಸೆಟ್ಟೇರಿದೆ. ಈ ಸಿನೆಮಾದಲ್ಲಿ ಮಹೇಶ್ ಬಾಬು ಜೊತೆಗೆ ಸ್ಟಾರ್ ನಟಿ ಪೂಜಾ ಹೆಗ್ಡೆ ನಟಿಸಲಿದ್ದಾರೆ. ಸಾಮಾನ್ಯವಾಗಿ ತ್ರಿವಿಕ್ರಮ್ ಶ್ರೀನಿವಾಸ್ ರವರ ಸಿನೆಮಾದಲ್ಲಿ ಇಬ್ಬರು ನಟಿಯರು ಇರುತ್ತಾರೆ. ಇದೀಗ ಈ ಸಿನೆಮಾದಲ್ಲಿ ಎರಡನೇ ನಟಿಯಾಗಿ ಶ್ರೀಲೀಲಾ ಅವಕಾಶ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಹಾರಿಕಾ ಅಂಡ್ ಹಾಸಿನಿ ಕ್ರಿಯೇಷನ್ ಬ್ಯಾನರ್ ನಡಿ ಈ ಸಿನೆಮಾ ತೆರೆಗೆ ಬರಲಿದೆ. ಇದೀಗ ಈ ಸಿನೆಮಾದಲ್ಲಿ ಸೆಕೆಂಡ್ ಹಿರೋಯಿನ್ ಆಗಿ ಶ್ರೀಲೀಲಾ ಆಯ್ಕೆ ಆಗುವ ಮೂಲಕ ಭರ್ಜರಿ ಆಫರ್ ಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ನಿರ್ದೇಶಕ ತ್ರಿವಿಕ್ರಮ್ ರವರ ಸಿನೆಮಾದಲ್ಲಿ ಸಾಮಾನ್ಯವಾಗಿ ಇಬ್ಬರು ನಟಿಯರಿರುತ್ತಾರೆ. ಇದೀಗ SSMB28 ಸಿನೆಮಾದಲ್ಲೂ ಸಹ ಇಬ್ಬರು ನಟಿಯರಿರುತ್ತಾರೆ. ಮೈನ್ ಲೀಡ್ ನಟಿಯಾಗಿ ಪೂಜಾ ಹೆಗ್ಡೆ, ಸಪೋರ್ಟಿಂಗ್ ನಟಿಯಾಗಿ ಶ್ರೀಲೀಲಾ ನಟಿಸಲಿದ್ದಾರೆ ಎನ್ನಲಾಗಿದೆ. ಈ ಸಿನೆಮಾದಲ್ಲಿ ಸೆಕೆಂಡ್ ಹಿರೋಯಿನ್ ಗೆ ಅಷ್ಟೊಂದು ಪ್ರಾಮುಖ್ಯತೆ ಇರುವುದಿಲ್ಲ ಎನ್ನಲಾಗುತ್ತದೆ. ಶ್ರೀಲೀಲಾಗೆ ಈ ಆಫರ್ ಅಷ್ಟೊಂದು ಪ್ರಯೋಜನ ಇರುವುದಿಲ್ಲ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಆದರೆ ಈ ಸಿನೆಮಾದಲ್ಲಿ ಶ್ರೀಲೀಲಾಗೆ ಎಂತಹ ಪ್ರಾಮುಖ್ಯತೆ ದೊರಕಬಹುದು ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಸಹ ಹೊರಬಂದಿಲ್ಲ. ಆದರೆ ಸುದ್ದಿ ಮಾತ್ರ ಎಲ್ಲಾ ಕಡೆ ಹರಿದಾಡುತ್ತಿದೆ.
ಇನ್ನೂ ಶ್ರೀಲೀಲಾ ಸದ್ಯ ಏಳು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಬಹುತೇಕ ಎಲ್ಲಾ ಸಿನೆಮಾಗಳೂ ಸಹ ಒಳ್ಳೆಯ ಕ್ರೇಜ್ ಇರುವಂತಹ ಸಿನೆಮಾಗಳೇ ಎನ್ನಬಹುದಾಗಿದೆ. ಮಾಸ್ ಮಹಾರಾಜ ರವಿತೇಜ ಜೊತೆಗೆ ಧಮಾಕಾ ಸಿನೆಮಾದಲ್ಲಿ ಶ್ರೀಲೀಲಾ ನಟಿಸಿದ್ದಾರೆ. ಈ ಸಿನೆಮಾ ಇದೇ ಡಿಸೆಂಬರ್ 23 ರಂದು ಬಿಡುಗಡೆಯಾಗಲಿದೆ. ಇದರ ಜೊತೆಗೆ ಆಕೆ ಬಾಲಕೃಷ್ಣ ರವರ ಮುಂದಿನ ಸಿನೆಮಾದಲ್ಲಿ ಬಾಲಕೃಷ್ಣ ರವರ ಮಗಳ ಪಾತ್ರಕ್ಕೆ ಆಯ್ಕೆ ಆಗಿದ್ದಾರೆ. ಸಾಲು ಸಾಲು ಸಿನೆಮಾಗಳ ಅವಕಾಶಗಳ ಮೂಲಕ ಆಕೆ ತೆಲುಗು ಸಿನಿರಂಗದಲ್ಲಿ ಸದ್ಯ ಬ್ಯುಸಿಯಾಗಿರುವ ನಟಿಯಾಗಿದ್ದಾರೆ.
ತೆಲುಗಿನಲ್ಲಿ ಬ್ಲಾಕ್ ಬ್ಲಸ್ಟರ್ ಹಿಟ್ ಹೊಡೆದ ವಕೀಲ್ ಸಾಭ್ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ಅನನ್ಯ ನಾಗಳ್ಳ ಇತ್ತೀಚಿಗೆ ಸಖತ್…
ಬಾಲಿವುಡ್ ನಲ್ಲಿ ಫೈರ್ ಬ್ರಾಂಡ್ ಎಂತಲೇ ಖ್ಯಾತಿ ಪಡೆದುಕೊಂಡ ಸ್ಟಾರ್ ನಟಿ ಕಂಗನಾ ರಾನೌತ್ ಆಗಾಗ ದೊಡ್ಡ ದೊಡ್ಡ ಸೆಲೆಬ್ರೆಟಿಗಳ…
ಸಿನೆಮಾಗಳಲ್ಲಿ ಹೋಮ್ಲಿಯಾಗಿ, ಓವರ್ ಗ್ಲಾಮರ್ ಶೋ ಮಾಡದೇ ಕ್ರೇಜ್ ಸಂಪಾದಿಸಿಕೊಂಡ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗೆ ಗ್ಲಾಮರ್ ಡೋಸ್ ಏರಿಸುತ್ತಿದ್ದಾರೆ.…
ಬಾಲಿವುಡ್ ನ ಮುನ್ನಾ ಮೈಕಲ್ ಎಂಬ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ನಿಧಿ ಅಗರ್ವಾಲ್ ಕಡಿಮೆ ಸಮಯದಲ್ಲೇ…
ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಅಭಿನಯದ ಮೂಲಕ ಕ್ರೇಜ್ ಪಡೆದುಕೊಂಡಿದ್ದಾರೆ. ಬಾಲಿವುಡ್ ಸ್ಟಾರ್ ನಟ ಶತ್ರುಘ್ನ ಸಿನ್ಹಾ…
ಸಿನೆಮಾ ಸೆಲೆಬ್ರೆಟಿಗಳ ಮದುವೆ ಬಗ್ಗೆ ಸುದ್ದಿಗಳು ಸದಾ ಕೇಳಿಬರುತ್ತಲೇ ಇರುತ್ತದೆ. ಅದರಲ್ಲೂ ನಟಿಯರ ಮದುವೆ ಬಗ್ಗೆ ಅವರ ಅಭಿಮಾನಿಗಳೂ ಸೇರಿದಂತೆ…
Leave a Comment