ಶೂಟಿಂಗ್ ವೇಳೆ ಗಂಭೀರವಾಗಿ ಗಾಯಗೊಂಡ ಕಿರಿಕ್ ಹುಡುಗಿ ಸಂಯುಕ್ತಾ…!

ಸ್ಯಾಂಡಲ್ ವುಡ್ ನಲ್ಲಿ ಕಿರಿಕ್ ಹುಡುಗಿ ಎಂದೇ ಕರೆಯಲಾಗುವ ಸಂಯುಕ್ತಾ ಹೆಗಡೆ ಸೋಷಿಯಲ್ ಮಿಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಕಿರಿಕ್ ಪಾರ್ಟಿ ಎಂಬ ಸಿನೆಮಾ ಮೂಲಕ ಹೆಚ್ಚು ಖ್ಯಾತಿ ಪಡೆದುಕೊಂಡ ಈ ನಟಿ, ಬಳಿಕ ಸಿನೆಮಾಗಳಲ್ಲಿ ಅಷ್ಟು ಜನಪ್ರಿಯತೆ ಪಡೆದುಕೊಳ್ಳಲಿಲ್ಲ. ಸದ್ಯ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಲು ಪ್ರಯತ್ನ ನಡೆಸುತ್ತಿದ್ದಾರೆ. ಇನ್ನೂ ಶೂಟಿಂಗ್ ಒಂದರಲ್ಲಿ ಭಾಗವಹಿಸಿದ್ದು, ಶೂಟಿಂಗ್ ವೇಳೆ ಆಕೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಕ್ಷನ್ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದ ಸಮಯದಲ್ಲಿ ಆಕೆ ಗಾಯಗೊಂಡಿದ್ದಾರೆ.

ಕನ್ನಡದ ಕಿರಿಕ್ ಪಾರ್ಟಿ ಎಂಬ ಸಿನೆಮಾದ ಮೂಲಕ ಪರಿಚಯವಾದ ಈಕೆ ಮೊದಲನೇ ಸಿನೆಮಾದಲ್ಲಿ ತುಂಬಾನೆ ಚೆನ್ನಾಗಿ ಅಭಿನಯಿಸಿದ್ದರು. ತೆಲುಗಿನಲ್ಲಿ ನಿಖಿಲ್ ಸಿದ್ದಾರ್ತ್ ಅಭಿನಯದ ಕಿರಾಕ್ ಪಾರ್ಟಿ ಸಿನೆಮಾದಲ್ಲಿ ಸೆಕೆಂಡ್ ನಟಿಯಾಗಿ ಕಾಣಿಸಿಕೊಂಡು ತೆಲುಗು ಪ್ರೇಕ್ಷಕರಿಗೆ ಪರಿಚಯವಾದರು. ಈ ಸಿನೆಮಾದ ಮೂಲಕವೇ ಆಕೆ ದೊಡ್ಡ ಕ್ರೇಜ್ ಸಂಪಾದಿಸಿಕೊಂಡರು. ಸಾಲು ಸಾಲು ಸಿನೆಮಾಗಳ ಮೂಲಕ ಆಕೆ ಅಭಿಮಾನಿಗಳನ್ನು ಹಾಗೂ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇತ್ತೀಚಿಗೆ ಆಕೆ ಸಿನೆಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಕೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಗಾಯಗೊಂಡ ಈ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.  ನಟಿ ಸಂಯುಕ್ತಾ ಹೆಗ್ಡೆ ಸ್ಟಾರ್‍ ನಟಿಯರಿಗೆ ಪೈಪೋಟಿ ನೀಡುವಂತೆ ಅಭಿನಯದ ಜೊತೆಗೆ ಆಕ್ಷನ್ ಸನ್ನಿವೇಶಗಳಲ್ಲೂ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಆಕ್ಷನ್ ಸಿನೆಮಾಗಳಲ್ಲಿ ನಟಿಸಲು ಬೇಕಾದ ಶಿಕ್ಷಣ ಪಡೆದುಕೊಂಡು ಸ್ಟಂಟ್ಸ್ ಮಾಡುತ್ತಿದ್ದಾರೆ. ಆಕೆ ಡ್ಯೂಪ್ ಬಳಸದೇ ಆಕೆಯೇ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಕೆಲವೊಂದು ದುರಂತಗಳು ಸಂಭವಿಸುವುದು ಸಾಮಾನ್ಯವಾಗಿದೆ. ಈ ಹಿಂದೆ ಸಹ ಕೆಲವು ನಟ ನಟಿಯರೂ ಸಹ ಆಕ್ಷನ್ ದೃಶ್ಯಗಳ ಚಿತ್ರೀಕರಣದ ವೇಳೆ ಗಾಯಗೊಂಡಿದ್ದರು. ಇದೀಗ ಸ್ಯಾಂಡಲ್ ವುಡ್ ನಟಿ ಸಂಯುಕ್ತಾ ಸಹ ಗಾಯಗೊಂಡಿದ್ದಾರೆ.

ನಟಿ ಸಂಯುಕ್ತಾ ಕ್ರೀಮ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಸಿನೆಮಾತಂಡ ಕೆಲವೊಂದು ಆಕ್ಷನ್ ದೃಶ್ಯಗಳನ್ನು ಚಿತ್ರೀಕರಣ ನಡೆಸುತ್ತಿದೆ. ಸಂಯುಕ್ತಾ ಹೆಗ್ಡೆ ಕೆಲವು ರೌಡಿಗಳನ್ನು ಹೊಡೆಯುತ್ತಿರುವ ದೃಶ್ಯಗಳನ್ನು ಚಿತ್ರೀಕರಣ ಮಾಡುತ್ತಿದ್ದಾಗ ಆಕೆ ಗಾಯಗೊಂದಿದ್ದಾರೆ. ಮಾರ್ಷಲ್ ಆರ್ಟ್ಸ್ ಕಲೆಯೊಂದಿಗೆ ಆಕೆ ಫೈಟಿಂಗ್ ದೃಶ್ಯಗಳನ್ನು ಮಾಡುತ್ತಿದ್ದು, ಸ್ಟಂಟ್ಸ್ ಹೊಡೆಯುವ ವೇಳೆ ಸಂಯುಕ್ತಾ ಕಾಲಿಗೆ ಗಾಯವಾಗಿದೆ. ಇದರಿಂದಾಗಿ ಆಕೆ ಅಲ್ಲಿಯೇ ಕುಸಿದುಬಿದಿದ್ದಾರೆ. ಕೂಡಲೇ ಶೂಟಿಂಗ್ ಸ್ಥಗಿತಗೊಳಿಸಿ, ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.  ಚಿಕಿತ್ಸೆ ನೀಡಿದ ವೈದ್ಯರು ಆಕೆಯನ್ನು ಕೆಲ ದಿನಗಳ ಕಾಲ ರೆಸ್ಟ್ ಮಾಡುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

ಇನ್ನೂ ಆಕೆ ಯಾವ ರೀತಿ ಗಾಯಗೊಂಡರು ಎಂಬುದನ್ನು ತಿಳಿಸುವ ಸಲುವಾಗಿ ಆಕೆ ಮೇಕಿಂಗ್ ವಿಡಿಯೋ ಒಂದನ್ನು ಶೇರ್‍ ಮಾಡಿದ್ದಾರೆ. ಸದ್ಯ ಆಕೆಯ ಅಭಿಮಾನಿಗಳೂ ಸಹ ಆಕೆ ಶೀಘ್ರವಾಗಿ ಗುಣಮುಖರಾಗಬೇಕೆಂದು ದೇವರಲ್ಲಿ ಪ್ರಾರ್ಥನೆಗಳನ್ನು ಮಾಡುತ್ತಿದ್ದಾರೆ. ಇನ್ನೂ ಈ ವಿಡಿಯೋ ಶೇರ್‍ ಮಾಡಿದ ಸಂಯುಕ್ತಾ ಕ್ಯಾಪ್ಷನ್ ಸಹ ಹಾಕಿದ್ದಾರೆ. ಶೂಟಿಂಗ್ ವೇಳ ನನಗೆ ಗಾಯವಾದರೂ ಸಹ, ಸಿನೆಮಾ ಬಿಡುಗಡೆಯ ಬಳಿಕ ಆ ಫೈಟ್ ನೋಡಿ ಪ್ರೇಕ್ಷಕರು ತುಂಬಾ ಖಷಿ ಪಡುತ್ತಾರೆ ಎಂದು ಪೋಸ್ಟ್ ಮಾಡಿದ್ದಾರೆ.

Previous articleವೈಟ್ ಬಿಕಿನಿಯಲ್ಲಿ ಹಾಟ್ ಟ್ರೀಟ್ ಕೊಟ್ಟ ನಟಿ ವೇದಿಕಾ, ಫಿದಾ ಆದ ಯುವಕರು…!
Next articleಆತನ ಮೋಸದ ಆಲೋಚನೆಗಳನ್ನು ಅಳೆಯಲು ಸಾಧ್ಯವಿಲ್ಲ ಎಂದು ಮಂಚು ಲಕ್ಷ್ಮೀ ಕಾಮೆಂಟ್ಸ್, ಆಕೆ ಹೇಳಿದ್ದು ಯಾರ ಬಗ್ಗೆ?