ಆಕೆ ಕೊಟ್ಟ ಬಿಕಿನಿ ಪೋಸ್ ಗೆ ತಾಯಿ ಎಂದರೇ ಯಾರು ನಂಬಲು ಸಾಧ್ಯವಿಲ್ಲ…!

ಚಂದನವನದ ಕ್ಯೂಟ್ ನಟಿ ಪ್ರಣಿತಾ ಸುಭಾಷ್ ತನ್ನ ಸೌಂದರ್ಯ ಹಾಗೂ ನಟನೆಯಿಂದ ಅಪಾರ ಸಂಖ್ಯೆಯಲ್ಲಿ ಜನಮನ್ನಣೆ ಗಳಿಸಿಕೊಂಡಿದ್ದಾರೆ. ಮುದ್ದಾದ ನಗುವಿನೊಂದಿಗೆ ಎಲ್ಲರ ಮನಗೆದ್ದ ನಟಿ ಪ್ರಣಿತಾ ಸುಭಾಷ್ ಜೂನ್ 10 ರಂದು ಮುದ್ದಾದ ಮಗುವಿಗೆ ಜನ್ಮ ಕೊಟ್ಟರು. ಹೆಣ್ಣುಮಗುವಿಗೆ ಜನ್ಮ ಕೊಡುವ ಮೂಲಕ ಮೊದಲ ತಾಯ್ತನದ ಖುಷಿಯನ್ನು ಸಂಭ್ರಮಿಸಿದ್ದಾರೆ. ಇನ್ನೂ ಈ ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕ ಎಲ್ಲರೊಂದಿಗೆ ಹಂಚಿಕೊಂಡಿದ್ದರು. ದಕ್ಷಿಣ ಭಾರತದಲ್ಲಿ ಕಡಿಮೆ ಸಮಯದಲ್ಲೇ ಬಹುಬೇಡಿಕೆ ನಟಿಯಾದ ಈಕೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ.

ದೊಡ್ಡ ದೊಡ್ಡ ಸ್ಟಾರ್‍ ನಟರ ಜೊತೆ ತೆರೆ ಹಂಚಿಕೊಂಡು ಹಿಟ್ ಸಿನೆಮಾಗಳನ್ನು ನೀಡಿದ್ದಾರೆ ಪ್ರಣಿತಾ. ಮೊದಲಿಗೆ ಆಕೆ ಟಾಲಿವುಡ್ ಗೆ ಎಂಟ್ರಿಕೊಟ್ಟಾಗ ಆಕೆ ಪಕ್ಕಾ ಸ್ಟಾರ್‍ ನಟಿಯಾಗುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಟಾಲಿವುಡ್ ನಲ್ಲಿ ಆರೇಳು ಸಿನೆಮಾಗಳಲ್ಲಿ ಮಾತ್ರ ನಟಿಸಿದರು. ಬಳಿಕ ಕನ್ನಡ ಸಿನೆಮಾಗಳಿಗೆ ಮರಳಿದರು. ಬಾಲಿವುಡ್ ನಲ್ಲೂ ಕಾಲಿವುಡ್ ನಲ್ಲೂ ಸಹ ಆಕೆ ಕೆಲವೊಂದು ಸಿನೆಮಾಗಳನ್ನು ಮಾಡಿದರು. ಯಾವುದೇ ಸಿನೆಮಾಗಳೂ ಆಕೆಗೆ ದೊಡ್ಡ ಸಕ್ಸಸ್ ತಂದುಕೊಡಲಿಲ್ಲ. ಬಳಿಕ ಕನ್ನಡದಲ್ಲಿ ಬ್ಯುಸಿಯಾದರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ ಉದ್ಯಮಿ ನಿತಿನ್ ರಾಜ್ ಎಂಬುವವರೊಂದಿಗೆ ಪ್ರೇಮ ಪಯಣ ಸಾಗಿಸಿದರು. ಬಳಿಕ ಮದುವೆಯಾದರು. ಇತ್ತೀಚಿಗಷ್ಟೆ ಮಗುವೊಂದಕ್ಕೆ ಜನ್ಮ ಸಹ ನೀಡಿದರು.

ಮದುವೆಯಾಯಿತು, ಮಗುವಾಯಿತು ಸಿನಿರಂಗದಿಂದ ದೂರ ಉಳಿಯುತ್ತಾರೆ ಎಂದು ಪ್ರಣಿತಾ ಅಭಿಮಾನಿಗಳೂ ಸೇರಿದಂತೆ ಅನೇಕರು ಭಾವಿಸಿದ್ದರು. ತಮ್ಮ  ಮುಂದಿನ ಜೀವನವನ್ನು ಕುಟುಂಬ ನಿರ್ವಹಣೆಗೆ ಮೀಸಲಿಡುತ್ತಾರೆ ಎಂದು ಭಾವಿಸಿದ್ದರು. ಆದರೆ ಮದುವೆಯಾದ ಬಳಿಕವೂ ಸಹ ಪತಿಯ ಒಪ್ಪಿಗೆಯ ಮೇರೆಗೆ ಅನೇಕ ಸಿನೆಮಾಗಳಲ್ಲಿ ನಟಿಸಿದ್ದರು. ಪ್ರಣಿತಾಗೆ ಸಿನಿಮಾ ರಂಗ ಎಂದರೇ ತುಂಬಾನೆ ಇಷ್ಟವಾದ್ದರಿಂದ ಆಕೆ ಸಿನೆಮಾಗಳಲ್ಲಿ ಮುಂದುವರೆಯಲು ಪತಿ ಸಹ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುವ ಈಕೆ ಹಾಟ್ ಪೊಟೋಗಳ ಜೊತೆಗೆ ಕೆಲವೊಂದು ಟಿಪ್ಸ್ ಗಳ ಮೂಲಕ ಅಭಿಮಾನಿಗಳಿಗೆ ಟಚ್ ನಲ್ಲಿರುತ್ತಾರೆ. ಜೊತೆಗೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಫಾಲೋಯಿಂಗ್ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ನಟಿ ಪ್ರಣಿತಾ ಇತ್ತಿಚಿಗೆ ಹಂಚಿಕೊಂಡ ಪೊಟೋ ಒಂದರಲ್ಲಿ ಆಕೆ ಬಿಕಿನಿಯಲ್ಲಿ ಪ್ರತ್ಯಕ್ಷರಾಗಿದ್ದಾಳೆ. ಬೀಚ್ ಬಳಿಯಲ್ಲಿ ಬಿಕಿನಿಯಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಬ್ಲಾಕ್ ಕಲರ್‍ ಬಿಕಿನಿಯಲ್ಲಿ ನಡೆದುಕೊಂಡು ಬರುವಂತಹ ವಿಡಿಯೋ ಒಂದು ಸಹ ಶೇರ್‍ ಮಾಡಿದ್ದಾರೆ. ಆಕೆಯ ಫಿಜಿಕ್, ದೇಹದ ಮೈಮಾಟ ಗಮನಿಸಿದರೇ ಆಕೆ ತಾಯಿ ಎಂದು ಯಾರೂ ನಂಬುವುದಿಲ್ಲ ಎಂದು ಹೇಳಲಾಗುತ್ತಿದೆ. ಸದ್ಯ ಆಕೆಯ ಬಿಕಿನಿ ಟ್ರೀಟ್ ಗೆ ಸೋಷಿಯಲ್ ಮಿಡಿಯಾದಲ್ಲಿ ವಿಭಿನ್ನ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪೊಟೋ ಕಡಿಮೆ ಸಮಯದಲ್ಲೇ ವೈರಲ್ ಸಹ ಆಗಿದೆ.

Previous articleಬಾಯ್ ಫ್ರೆಂಡ್ ಜೊತೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ ಸೌತ್ ಇಂಡಿಯನ್ ಸ್ಟಾರ್ ನಟಿ..!
Next articleವೈಟ್ ಕಲರ್ ಡ್ರೆಸ್ ನಲ್ಲಿ ದೇವಲೋಕದ ಸುಂದರಿಯರಿಗೂ ಅಸೂಯೆ ಹುಟ್ಟಿಸಿದ ನಟಿ ಜಾಕ್ವೆಲಿನ್….!