ಮತ್ತೋಬ್ಬ ಸ್ಯಾಂಡಲ್ವುಡ್ ನಟಿ ಟಾಲಿವುಡ್ಗೆ!

ಬೆಂಗಳೂರು: ಇತ್ತೀಚಿಗೆ ಸ್ಯಾಂಡಲ್‌ವುಡ್‌ನ ಅನೇಕ ನಟಿಯರು ಟಾಲಿವುಡ್, ಬಾಲಿವುಡ್, ಕಾಲಿವುಡ್ ಸಿನಿರಂಗಗಳಲ್ಲಿ ಮಿಂಚುತ್ತಿದ್ದು, ಇದೀಗ ಕನ್ನಡದ ಟಾಪ್ ನಟಿಯೊಬ್ಬರು ತೆಲುಗು ಸಿನೆಮಾವೊಂದರಲ್ಲಿ ನಟಿಸುವ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ನೀಡಲಿದ್ದಾರೆ.

ಟಾಲಿವುಡ್‌ನಲ್ಲಿ ಸ್ಯಾಂಡಲ್‌ವುಡ್‌ನ ನಟಿಯರ ಟ್ರೆಂಡ್ ಶುರುವಾಗಿದ್ದು, ರಶ್ಮೀಕಾ ಮಂದಣ್ಣ, ಶ್ರೀಲೀಲಾ ಟಾಲಿವುಡ್‌ನ ಸಿನೆಮಾಗಳಲ್ಲಿ ನಟನೆ ಮಾಡಲು ಎಂಟ್ರಿ ಕೊಟ್ಟಾಗಿದೆ. ಈ ಸಾಲಿಗೆ ಇದೀಗ ಚಂದನವನದ ನಟಿ ಅನಿತಾ ಭಟ್ ಸಹ ತೆಲುಗು ಚಿತ್ರವೊಂದರಲ್ಲಿ ನಟಿಸಲಿದ್ದಾರೆ. ನಿರ್ದೇಶಕ ಕಾರ್ತಿಕೇಯನ್ ಸಾರಥ್ಯದಲ್ಲಿ ಮೂಡಿಬರಲಿರುವ ಪಕ್ಕಾ ರೌಡಿಸಂ ಕಥನವುಳ್ಳ ಚಿತ್ರವಾದ ಕೃಷ್ಣ ಲಂಕಾ ಎಂಬ ಸಿನೆಮಾದಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ ಅನಿತಾ ಭಟ್.

ನಟಿ ಅನಿತಾ ಭಟ ಸೈಕೋ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಗೆ ಎಂಟ್ರಿ ಕೊಟ್ಟು ಮೊದಲ ಚಿತ್ರದಲ್ಲಿಯೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಇದಾದ ನಂತರ ಅನೇಕ ಸಿನೆಮಾಗಳಲ್ಲಿ ನಟಿಸಿದ್ದು, ಸದ್ಯ ಹಾಟ್ ನಟಿಯೆಂದು ಪ್ರಖ್ಯಾತಿ ಪಡೆದಿದ್ದಾರೆ. ಇನ್ನೂ ಅನಿತಾ ಭಟ್ ಅಭಿನಯದ ಬಳೆಪೇಟೆ ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದ್ದು ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ಅಭಿಮಾನಿಗಳಿಂದ ವ್ಯಕ್ತವಾಗಿದೆ.

ನಟಿ ಅನಿತಾ ಭಟ್ ಫೆಬ್ರವರಿಯಿಂದ ಕೃಷ್ಣ ಲಂಕಾ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದು, ಚಿತ್ರದಲ್ಲಿ ನಾಯಕನಾಗಿ ಪರುಚೂರು ರವಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಕನ್ನಡ ಚಿತ್ರರಂಗದಿಂದ ತೆಲುಗು ಚಿತ್ರರಂಗಕ್ಕೆ ಅನಿತಾ ಭಟ್ ಎಂಟ್ರಿ ನೀಡುತ್ತಿದ್ದು, ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

Previous articleತಲೈವಾ ಬಿಡುಗಡೆ ದಿನಾಂಕ ಘೋಷಣೆ: ಖುಷಿಯಲ್ಲಿ ತಲೈವಾ ಅಭಿಮಾನಿಗಳು
Next articleರಿವೀಲ್ ಆಯ್ತು ಬೆಲ್ ಬಾಟಂ-2 ಪೋಸ್ಟರ್!