Film News

ರೈತ ದಿನಾಚರಣೆಗೆ ಶುಭಾಷಯ ಕೋರಿದ ಸ್ಟಾರ್ ನಟರು

ಬೆಂಗಳೂರು: ಇಂದು (ಡಿ.23) ರೈತ ದಿನಾಚರಣೆಯಾಗಿದ್ದು, ದೇಶಕ್ಕೆ ಅನ್ನ ನೀಡುವ ರೈತರನ್ನು ನೆನೆಯುವ ಈ ದಿನಾಚರಣೆಯನ್ನು ಆಚರಿಸುವುದು ಹೆಮ್ಮೆಯ ವಿಚಾರವಾಗಿದ್ದು, ನಟ ಜಗ್ಗೇಶ್, ದರ್ಶನ್ ಸೇರಿದಂತೆ ಅನೇಕ ನಟರು ಹಾಗೂ ಗಣ್ಯರು ರೈತರನ್ನು ನೆನೆಪಿಸಿಕೊಳ್ಳುತ್ತಿದ್ದಾರೆ.

ಇನ್ನೂ ರೈತರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದ ನಟ ಜಗ್ಗೇಶ್, ಮಣ್ಣಲ್ಲಿ ಇರುವ ಸುಖ ಎಲ್ಲೂ ಸಿಗದು ತಾತ ಚಿಕ್ಕಪ್ಪಂದಿರು ಹೂಡುತ್ತಿದ್ದಿ ನೇಗಿಲ ಮೇಲೆ ಬೆಳೆದ ರೈತರ ಕುಡಿ ನಾನು. ಶೇ.೫೦ ರಷ್ಟು ಯುವಕರು ಈ ಕಾಯಕ ಬಿಟ್ಟು ಅಲ್ಪ ಆದಾಯಕ್ಕೆ ಪಟ್ಟನ ಜೀವನಕ್ಕೆ ಹೋಗಿದ್ದಾರೆ. ಇದರಿಂದ ಹೊಲಗದ್ದೆ ಬಣಗುಡುತ್ತಿದೆ. ಖಾಲಿ ಕೊಟ್ಟಿಗೆ, ಒಣಗಿದೆ ಗೊಬ್ಬರದ ಗುಂಡಿ, ಓ ಮನಸೆ ಮಣ್ಣಲ್ಲಿ ಇರುವ ಸುಖ ಎಲ್ಲೂ ಸಿಗದು ಮರಳಿ ಮಣ್ಣಿಗೆ, ಕೊಂಡು ತಿನ್ನುವುದಕ್ಕಿಂತ ಬೆಳೆದು ತಿನ್ನುವ. ಜೈ ಕಿಸಾನ್ ಎಂದು ಶುಭಾಷಯ ಕೋರಿದ್ದಾರೆ.

ಇನ್ನೂ ಮತ್ತೊಬ್ಬ ಸ್ಟಾರ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೈತರಿಗೆ ಶುಭಾಷಯಗಳನ್ನು ಕೋರುತ್ತಾ ರೈತರು ನಿಜವಾದ ವೀರರು, ಅವರ ಸಮರ್ಪಣೆ ಮತ್ತು ಶ್ರಮದಿಂದ ಬಂಜರು ಭೂಮಿಯನ್ನು ಆಹಾರ ಉತ್ಪಾಧಿಸುವ ಭೂಮಿಯನ್ನಾಗಿ ಪರಿವರ್ತಿಸುತ್ತಾರೆ. ತಮ್ಮ ಹೃದಯ ಹಾಗೂ ಆತ್ಮವನ್ನು ಮಣ್ಣಿನಲ್ಲಿಟ್ಟು ಅದನ್ನು ಜೀವಿಸಲು ಮತ್ತು ನಮಗೆ ಆಹಾರವನ್ನು ಕೊಡುತ್ತಾರೆ. ಅವರ ಕಠಿಣ ಪರಿಶ್ರಮನ್ನು ಸ್ಮರಿಸೋಣ, ಅವರನ್ನು ಗೌರವಿಸೋಣ. ರೈತ ದಿನಾಚರಣೆಯ ಶುಭಾಷಯಗಳು ಎಂದು ಸಾಮಾಜಿಕ ಜಾಲಾತಾಣಗಳಲ್ಲಿ ಶುಭಾಷಯಗಳನ್ನು ಕೋರಿದ್ದಾರೆ.

Trending

To Top