Film News

ಗೋವಾದಲ್ಲಿ ನಡೆಯಲಿರುವ ಚಿತ್ರೋತ್ಸವದಲ್ಲಿ ಕಿಚ್ಚ ಸುದೀಪ್ ಮುಖ್ಯ ಅತಿಥಿ

ಬೆಂಗಳೂರು: ಕನ್ನಡ ಸಿನಿರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರಿಗೆ ಇತರೆ ಯಾವ ಕನ್ನಡದ ನಟರಿಗೂ ಸಿಗದಂತಹ ಗೌರವ ಸಿಕ್ಕಿದೆ. ಗೋವಾದಲ್ಲಿ ನಡೆಯಲಿರುವ ೫೧ನೇ ವರ್ಷದ ಭಾರತೀಯ ಅಂತರಾಷ್ಟ್ರೀಯ ಚಿತ್ರೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಕಿಚ್ಚ ಸುದೀಪ್.

ನಟ ಕಿಚ್ಚ ಸುದೀಪ್ ಕನ್ನಡ ಸಿನಿರಂಗಕ್ಕೆ ಮಾತ್ರ ಸೀಮಿತವಾಗದೇ ಬಾಲಿವುಡ್, ಟಾಲಿವುಡ್ ಗಳಲ್ಲು ಮಿಂಚುತ್ತಿದ್ದಾರೆ. ಇದೀಗ ಜ.16 ರಂದು ಗೋವಾದ ಪಣಜಿಯಲ್ಲಿ ನಡೆಯು0ತಹ ಪ್ರತಿಷ್ಟಿತ ಭಾರತೀಯ ಅಂತರಾಷ್ಟ್ರೀಯ ಚಿತ್ರೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವುದರ ಜೊತೆಗೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇದು ಕನ್ನಡ ಸಿನಿರಂಗದಲ್ಲಿ ಇಂತಹ ಅವಕಾಶ ಪಡೆದ ಏಕೈಕ ನಟ ಎಂಬ ಖ್ಯಾತಿಗೆ ಕಿಚ್ಚ ಸುದೀಪ್ ಪಾತ್ರರಾಗಲಿದ್ದಾರೆ.

ಇನ್ನೂ ಈ ಫಿಲಂ ಫೆಸ್ಟಿವಲ್ ಜ.೧೬ ರಿಂದ ಜ.೨೪ ರವರೆಗೆ ನಡೆಯಲಿದ್ದು, ಗೋವಾದ ಪಣಜಿ ನಗರದ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರ್ರಮದಲ್ಲಿ ಸುದೀಪ್ ರೊಂದಿಗೆ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಸಹ ಭಾಗಿಯಾಗಲಿದ್ದಾರೆ. ಇನ್ನೂ ಸುದೀಪ್ ಅಭಿಮಾನಿಗಳು ಈ ವಿಚಾರ ತಿಳಿದು ಪುಲ್ ಖುಷ್ ಆಗಿದ್ದಾರೆ. ಅಷ್ಟೇ ಅಲ್ಲದೇ ಇಡೀ ಕನ್ನಡ ಚಿತ್ರೋದ್ಯಮಕ್ಕೆ ಇದೊಂದು ಹೆಮ್ಮೆಯ ಸಂಗತಿಯಾಗಿದೆ ಎನ್ನಲಾಗುತ್ತಿದೆ.

ಈ ಬಾರಿ ಫಿಲಂ ಫೆಸ್ಟಿವಲ್ ಆಯೋಜನೆಯಲ್ಲಿ ಹಲವು ಬದಲಾವಣೆಗಳಿದ್ದು, ತಜ್ಞರೊಂದಿಗಿನ ಸಂವಾದ ಸೇರಿದಂತೆ ಹಲವು ಕಾರ್ಯಕ್ರಮಗಳು ಒಟಿಟಿ ಮೂಲಕ ನಡೆಯಲಿದೆಯಂತೆ. ಸುಮಾರು 119 ಚಿತ್ರಗಳು ಈ ಬಾರಿ ಪ್ರದರ್ಶನಗೊಳ್ಳಲಿವೆ ಎನ್ನಲಾಗಿದೆ.

Trending

To Top