ಸರ್ಜರಿ ಬಳಿಕ ಸೋಷಿಯಲ್ ಮಿಡಿಯಾದಲ್ಲಿ ಪ್ರತ್ಯಕ್ಷನಾದ ದೂದ್ ಪೇಡ ದಿಗಂತ್…!

ಕೆಲವು ದಿನಗಳ ಹಿಂದೆಯಷ್ಟೆ ಗೋವಾ ಪ್ರಯಾಣಕ್ಕೆ ಹೊರಟಿದ್ದ ಸ್ಯಾಂಡಲ್ ವುಡ್ ಯುವ ನಟ ದಿಗಂತ್ ಅಲ್ಲಿ ಸಮ್ಮರ್‍ ಸ್ಟಂಟ್ ಮಾಡುವಾಗ ಗಂಭೀರವಾಗಿ ಗಾಯಗೊಂಡಿದ್ದ. ಶಸ್ತ್ರ ಚಿಕಿತ್ಸೆಗಾಗಿ ಗೋವಾದಿಂದ ಏರ್‍ ಆಂಬ್ಯಲೆನ್ಸ್ ಮೂಲಕ ಬೆಂಗಳೂರಿಗೆ ಬಂದು ಅಲ್ಲಿನ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಅಲ್ಲಿಂದ ಮನೆಗೆ ತೆರಳಿದ್ದರು. ಇನ್ನೂ ಆ ಬಳಿಕ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ದಿಗಂತ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಪ್ರತ್ಯಕ್ಷನಾಗಿದ್ದು, ತಮಗೆ ಸಹಾಯ ಮಾಡಿದ ಎಲ್ಲರನ್ನೂ ನೆನೆದು ಧನ್ಯವಾದಗಳನ್ನು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೆ ನಟ ದಿಗಂತ್ ಆತನ ಪತ್ನಿ ಐಂದ್ರಿತಾ ರೈ ಸೇರಿದಂತೆ ಅವರ ಆಪ್ತರೊಂದಿಗೆ ಗೋವಾ ಪ್ರವಾಸಕ್ಕೆ ಹೋಗಿದ್ದರು. ನಟ ದಿಗಂತ್ ಗೆ ಸಮ್ಮರ್‍ ಶಾರ್ಟ್ಸ್ ಸ್ಟಂಟ್ ಮಾಡುವುದು ಎಂದರೇ ತುಂಬಾನೆ ಇಷ್ಟವಾಗಿದ್ದು, ಪ್ರವಾಸಕ್ಕೆ ತೆರಳಿದಾಗ ಇಂತಹ ಸ್ಟಂಟ್ ಗಳನ್ನು ಮಾಡುತ್ತಿದ್ದರು. ಅದೇ ರೀತಿಯಲ್ಲಿ ಗೋವಾದಲ್ಲೂ ಸ್ಟಂಟ್ ಮಾಡಲು ಹೋಗಿ ಆಯಾತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಇನ್ನೂ ಮೊದಲಿಗೆ ಗೊವಾದಲ್ಲೇ ಪ್ರಾಥಮಿಕಿ ಚಿಕಿತ್ಸೆ ನೀಡಿ ಬಳಿಕ ಏರ್‍ ಲಿಫ್ಟ್ ಮೂಲಕ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಶಸ್ತ್ರ ಚಿಕಿತ್ಸೆಗೆ ಸಹ ಗುರಿಯಾಗಿದ್ದರು. ಬಳಿಕ ಐಂದ್ರಿತಾ ರೈ  ಎಲ್ಲರಿಗೂ ಹಾಗೂ ಸಿಎಂ ಪ್ರಮೋದ್ ಸಾವಂತ್ ರವರಿಗೆ ಧನ್ಯವಾದಗಳು ಹೇಳಿದ್ದರು.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ನಟ ದಿಗಂತ್ ಶಸ್ತ್ರ ಚಿಕಿತ್ಸೆ ಬಳಿಕ ಮೊದಲ ಬಾರಿಗೆ ವಿಡಿಯೋ ಮೂಲಕ ಪ್ರತ್ಯಕ್ಷರಾಗಿದ್ದಾರೆ. ವಿಡಿಯೋ ಮೂಲಕ ತಮಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ವಿಡಿಯೋದಲ್ಲಿ ಮಾತನಾಡುತ್ತಾ ಮೊನೆನ ನಡೆದ ಘಟನೆಯಿಂದಾಗಿ ಒಂದು ಸಣ್ಣ ಸರ್ಜರಿ ಆಗಿದೆ. ಈ ಸಮಯದಲ್ಲಿ ನನಗೆ ಸಹಾಯ ಮಾಡಿದವರಿಗೆ ಧನ್ಯವಾದಗಳನ್ನು ಹೇಳಬೇಕು. ವೆಂಕಟನಾರಾಯಣ್ ರವರು ನನಗೆ ಮಾಡಿದ ಸಹಾಯವನ್ನು ನಾನು ಸಾಯುವವರೆಗೂ ಮರೆಯುವುದಿಲ್ಲ. ಗೋವಾದಿಂದ ಬೆಂಗಳೂರಿಗೆ ಬರಲು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನನಗೆ ಸಹಾಯ ಮಾಡಿದ್ದಾರೆ. ಜೊತೆಗೆ ಗೋವಾ ಹಾಗೂ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗಳು ನನಗೆ ತುಂಬಾ ಸಹಾಯ ಮಾಡಿದ್ದು, ಅವರ ಸಹಾಯವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.

ಅಷ್ಟೇಅಲ್ಲದೇ ನನಗೆ ಸರ್ಜರಿ ಮಾಡಲು ದೇವರಂತೆ ಬಂದಿದ್ದು, ಡಾ.ವಿದ್ಯಾಧರ್‍ ರವರು. ಒಂದು ದೊಡ್ಡ ದುರಂತ ನಡೆಯಬೇಕಿತ್ತು. ಆದರೆ ಒಂದು ಸಾಧಾರಣ ಸರ್ಜರಿ ಮೂಲಕ ನನ್ನನ್ನು ಗುಣಪಡಿಸಿದ್ದಾರೆ. ಇನ್ನೂ ನನ್ನ ಅಭಿಮಾನಿಗಳು, ಸಿನಿರಂಗದ ಸ್ನೇಹಿತರೂ, ಕುಟುಂಬದವು ಎಲ್ಲರೂ ನನ್ನ ಆರೋಗ್ಯಕ್ಕಾಗಿ ನೆನಪಿಸಿಕೊಂಡಿದ್ದಾರೆ. ನೀವು ನನಗಾಗಿ ಮಾಡಿದ ಪ್ರಾರ್ಥನೆಯಿಂದಾಗಿ ಕೇವಲ ಒಂದೇ ವಾರದಲ್ಲಿ ಗುಣಮುಖನಾಗಿದ್ದೇನೆ. ಇನ್ನೂ ಎರಡು ವಾರಗಳ ಕಾಲ ವಿಶ್ರಾಂತಿ ಬೇಕಿದ್ದು, ವಿಶ್ರಾಂತಿಯ ಬಳಿಕ ಸಿನಿಮಾ ಶೂಟಿಂಗ್ ಗಳಲ್ಲಿ ಭಾಗಿಯಾಗುತ್ತೇನೆ ಎಂದಿದ್ದಾರೆ.

Previous articleಲೈಗರ್ ನ್ಯೂಡ್ ಪೋಸ್ಟರ್ ರಿಲೀಸ್, ಹಾಟ್ ನಟಿಯರ ಹಾಟ್ ಕಾಮೆಂಟ್ಸ್, ಕ್ರೇಜಿ ಕಾಮೆಂಟ್ಸ್ ಹಂಚಿಕೊಂಡ ನಟಿಯರು..!
Next articleಪುಷ್ಪಾ-2 ಸಿನೆಮಾದಲ್ಲಿ ನಿಮಗೂ ನಟಿಸಬೇಕೆಂಬ ಆಸೆಯಿದೆಯೇ, ತಡ ಯಾಕೆ ನೀವು ಸಹ ಟ್ರೈ ಮಾಡಿ…!