ನಟ ದಿಗಂತ್ ಗೆ ಈಗ ಹೇಗಿದ್ದಾರೆ? ಯಾವಾಗ ಡಿಸ್ಚಾಜ್ ಆಗ್ತಾರೆ? ಐಂದ್ರಿತಾ ಏನು ಹೇಳಿದ್ರು..!

ಸ್ಯಾಂಡಲ್ ವುಡ್ ನ ನಟ ದಿಗಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋವಾ ಟ್ರಿಪ್ ನಲ್ಲಿ ದ್ದ ದಿಗಂತ್ ಸಮುದ್ರದಲ್ಲಿ ಬ್ಯಾಕ್ ಫ್ಲಿಪ್ ಡೈವಿಂಗ್ ಮಾಡಲು ಹೋಗಿದ ಅಪಘಾತಕ್ಕೆ ತುತ್ತಾಗಿದ್ದಾರೆ. ಬ್ಯಾಕ್ ಡೈವಿಂಗ್ ಹೊಡೆದಾಗ ಆತನ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ. ನಿನ್ನೆಯಷ್ಟೆ ಅವರನ್ನು ಏರ್‍ ಅಂಬ್ಯುಲೆನ್ಸ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರ ಪರಿಸ್ಥಿತಿ ಹೇಗಿದೆ. ಯಾವಾಗ ಡಿಸ್ಚಾರ್ಜ್ ಆಗುತ್ತಾರೆ ಎಂಬ ವಿಚಾರವನ್ನು ನಟಿ ಐಂದ್ರಿತಾ ಮಾದ್ಯಮಗಳಿಗೆ ತಿಳಿಸಿದ್ದಾರೆ.

ಇನ್ನೂ ನಟ ದಿಗಂತ್ ರನ್ನು ಮಣಿಪಾಲ್ ಆಸ್ಪತ್ರೆಗೆ ಕರೆತಂದ ಕೂಡಲೇ ಅವರನ್ನು ತೀವ್ರ ನಿಗಾ ಘಟಕದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸುಮಾರು ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನೀಡಿದ್ದು, ಸದ್ಯ ದಿಗಂತ್ ಅಪಾಯದಿಂದ ಪಾರಾಗಿದ್ದಾರೆ. ಇನ್ನೂ ಶಸ್ತ್ರಚಿಕಿತ್ಸೆ ಬಳಿಕ ದಿಗಂತ್ ಪೊಟೋ ಒಂದನ್ನು ಶೇರ್‍ ಮಾಡಿದ್ದು, ಅದರಲ್ಲಿ ದಿಗಂತ್ ನಗುತ್ತಾ ಗೆಲುವಿನ ಸಂಕೇತವನ್ನು ತೋರಿಸಿದ್ದಾರೆ. ಸದ್ಯ ದಿಗಂತ್ ರವರನ್ನು ವೈದ್ಯರು ಅಬ್ಸವೇರ್ಷನ್ ನಲ್ಲಿ ಇಟ್ಟಿದ್ದಾರೆ. ಶೀಘ್ರದಲ್ಲೇ ಅವರ ಆರೋಗ್ಯದ ಬಗ್ಗೆ ಎರಡನೇ ಹೆಲ್ತ್ ಬುಲೆಟಿನ್ ಸಹ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಇನ್ನೂ ಈ ಕುರಿತು ದಿಗಂತ್ ಪತ್ನಿ ಹಾಗೂ ನಟಿ ಐಂದ್ರಿತಾ ರೈ ಸಹ ಮಾಹಿತಿ ಹಂಚಿಕೊಂಡಿದ್ದಾರೆ. ಆಕೆ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸರ್ಜರಿ ಯಶಸ್ವಿಯಾಗಿ ನಡೆದಿದೆ. ದಿಂಗತ್ ಚೇತರಿಸಿಕೊಳ್ಳುತ್ತಿದ್ದಾರೆ. ಏನು ಚಿಂತೆ ಮಾಡುವಂತಹ ಅವಶ್ಯಕತೆಯಿಲ್ಲ. ದಿಗಂತ್ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿದ ಅಭಿಮಾನಿಗಳೂ ಸೇರಿದಂತೆ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಇನ್ನೂ ದಿಗಂತ್ ರವರ ಹೆಲ್ತ್ ಬುಲೆಟಿನ್ ಬರುವವರೆಗೂ ಅವರ ಅಭಿಮಾನಿಗಳು ತುಂಬಾ ಆತಂಕದಲ್ಲಿದ್ದರು. ಬುಲೆಟಿನ್ ಬಿಡುಗಡೆಯಾದ ಬಳಿಕ ಎಲ್ಲರೂ ನಿಟ್ಟಿಸುರು ಬಿಟ್ಟಿದ್ದಾರೆ. ಈ ವೇಳೆ ದಿಗಂತ್ ಮತ್ತೆ ನಾನು ಸಮ್ಮರ್‍ ಸಾಲ್ಟ್ ಮಾಡಲು ರೆಡಿಯಾಗಿದ್ದೇನೆ ಎಂದು ವೈದ್ಯರಿಗೆ ದಿಗಂತ್ ಹೇಳಿದ್ದಾರಂತೆ. ಈ ವಿಚಾರವನ್ನು ಸಹ ಐಂದ್ರಿತಾ ಮಾದ್ಯಮಗಳ ಮುಂದೆ ತಿಳಿಸಿದ್ದಾರೆ.

ಸತತ ಸಿನೆಮಾಗಳಿಂದ ಬಿಡುವು ಮಾಡಿಕೊಂಡು ಕುಟುಂಬದೊಂದಿಗೆ ಗೋವಾಗೆ ತೆರಳಿದ್ದರು. ಗೋವಾ ಸಮುದ್ರ ತಟದಲ್ಲಿ ಫ್ಲಿಪ್ ಬ್ಯಾಕ್ ಮಾಡುವಾಗ ಲ್ಯಾಂಡಿಂಗ್ ವೇಳೆ ಆಯಾತಪ್ಪಿ ಬಿದ್ದ ಪರಿಣಾಮ ದಿಗಂತ್ ಗೆ ತೀವ್ರ ಪೆಟ್ಟಾಗಿತ್ತು. ಗೋವಾದಲ್ಲಿ ಇದ್ದಾಗ ನನಗೆ ತುಂಬಾನೆ ಟೆನ್ಷನ್ ಆಗಿತ್ತು. ಆದರೆ ಬೆಂಗಳೂರಿಗೆ ಬಂದ ಬಳಿಕ ಸ್ವಲ್ಪ ಸಮಧಾನ ಆಯಿತು. ಗೋವಾದಲ್ಲಿ ನಾನು ಒಂಟಿಯಾಗಿದ್ದ ಕಾರಣ ಟೆನ್ಷನ್ ಆಗಿತ್ತು. ಆದರೆ ಬೆಂಗಳೂರಿನಲ್ಲಿ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಇರುವ ಕಾರಣ ಧೈರ್ಯದಿಂದ ಇದ್ದೇನೆ. ದಿಗಂತ್ ಸದ್ಯ ಊಟ ಮಾಡುತ್ತಿದ್ದಾನೆ. ಮಾತನಾಡುತ್ತಾ ಇದ್ದಾನೆ. ಇಂದು ಅಥವಾ ನಾಳೆ ಡಿಸ್ಚಾರ್ಜ್ ಸಹ ಆಗಬಹುದು. ಗೋವಾದ ಸರ್ಕಾರದ ಸಹಾಯದಿಂದ ನಮಗೆ ತುಂಬಾ ಸಹಕಾರವಾಗಿದೆ. ಇನ್ನೂ ಮುಂದೆ ದಿಗಂತ್ ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸುತ್ತೇನೆ ಎಂದು ಐಂದ್ರಿತಾ ಹೇಳಿದ್ದಾರೆ.

Previous articleನಮ್ಮ ಆಸ್ತಿಗಳೆಲ್ಲಾ ಹೋದವು, ಆದರೆ ಇದು ನನಗೆ ತಡವಾಗಿ ತಿಳಿಯಿತು ಎಂದ ಪೂರಿ ಜಗನ್ನಾಥ್ ಮಗ!
Next articleಡಾಲಿಂಗ್ ಪ್ರಭಾಸ್ ಸಂಭಾವನೆ ಏರಿಕೆ. ಬರೊಬ್ಬರಿ 120 ಕೋಟಿ ಪಡೆಯುವ ಮೂಲಕ ಟಾಪ್ 2ನೇ ಸ್ಥಾನ…!