ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿಗಂತ್…, ದಿಗಂತ್ ರವರಿಗೆ ವೈದ್ಯರು ನೀಡಿದ ಸಲಹೆ ಆದ್ರೂ ಏನು?

ಕಳೆದೆರಡು ದಿನಗಳ ಹಿಂದೆಯಷ್ಟೆ ನಟ ದಿಗಂತ್ ಹಾಗೂ ಅವರ ಕುಟುಂಬದೊಂದಿಗೆ ಗೋವಾಗೆ ಹೋಗಿದ್ದರು. ಗೋವಾದ ಸಮುದ್ರದ ತಟದಲ್ಲಿ ಫ್ಲಿಪ್ ಡೈವ್ ಹೊಡೆಯುವಾಗ ಲ್ಯಾಂಡಿಂಗ್ ಮಿಸ್ ಆಗಿ ಬಿದ್ದು ಕತ್ತಿಗೆ ಗಾಯ ಮಾಡಿಕೊಂಡಿದ್ದರು. ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಏರ್‍ ಲಿಫ್ಟ್ ಮೂಲಕ ಆತನನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಣಿಪಾಲ್ ಆಸ್ಪತ್ರೆಯಲ್ಲಿ ನಿನ್ನೆ ಶಸ್ತ್ರ ಚಿಕಿತ್ಸೆ ಸಹ ಮಾಡಲಾಗಿದೆ. ಇದೀಗ ಆಸ್ಪತ್ರೆಯಿಂದ ದಿಗಂತ್ ಡಿಸ್ಚಾರ್ಜ್ ಆಗಿದ್ದಾರೆ.

ನಟ ದಿಗಂತ್ ರವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿದ್ದರು. ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿಗಂತ್ ಮನೆಗೆ ತೆರೆಳಿದ್ದಾರೆ. ಇನ್ನೂ ದಿಗಂತ್ ರವರಿಗೆ ಕೆಲವೊಂದು ಹೆಲ್ತ್ ಟಿಪ್ಸ್ ಸಹ ವೈದ್ಯರು ನೀಡಿ ಡಿಸ್ಚಾರ್ಜ್ ಮಾಡಿದ್ದಾರಂತೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು, ಒಂದು ದಿನದ ಬಳಿಕ ದಿಗಂತ್ ರನ್ನು ಡಿಸ್ಚಾರ್ಜ್ ಮಾಡಿ, ಮೂರು ತಿಂಗಳುಗಳ ಕಾಲ ಬೆಡ್ ರೆಸ್ಟ್ ಮಾಡುವಂತೆ ಸಲಹೆ ಸಹ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ದಿಗಂತ್ ರವರಿಗೆ ಆದ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಗೋವಾದಿಂದ ಬಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಬಳಿಕ ವೈದ್ಯರು ಹಾಗೂ ಐಂದ್ರಿತಾ ರೈ ಮಾದ್ಯಮಗಳಿಗೆ ಹೇಳಿಕ ನೀಡಿದ ಬಳಿಕ ಅಭಿಮಾನಿಗಳು ನಿರಾಳರಾಗಿದ್ದಾರೆ.

ನಟ ದಿಗಂತ್ ಗೆ ಸತತ ಮೂರು ಗಂಟೆಗಳ ಕಾಲ ಮಣಿಪಾಲ್ ಆಸ್ಪತ್ರೆಯ ತಜ್ಞ ವೈದ್ಯ ಡಾ.ವಿದ್ಯಾಧರ್‍ ಹಾಗೂ ಅವರ ತಂಡ ಶಸ್ತ್ರಚಿಕಿತ್ಸೆ ಮಾಡಿದ್ದರು. ಇನ್ನೂ ದಿಗಂತ್ ರನ್ನು ಮಣಿಪಾಲ್ ಆಸ್ಪತ್ರೆಗೆ ಕರೆತರುವುದಕ್ಕೂ ಮುನ್ನವೇ ಐಂದ್ರಿತಾ ರೈ ಗೋವಾದಿಂದಲೇ ದಿಗಂತ್ ಗೆ ಸಂಬಂಧಿಸಿದ ಎಲ್ಲಾ ರಿಪೋರ್ಟ್‌ಗಳನ್ನು ಕಳುಹಿಸಿದ್ದರು. ರಿಪೋರ್ಟ್‌‌ಗಳನ್ನು ಪಡೆದುಕೊಂಡ ವೈದ್ಯರು ದಿಗಂತ್ ಬರುವುದಕ್ಕೂ ಮುನ್ನವೇ ಶಸ್ತ್ರ ಚಿಕಿತ್ಸೆಗೆ ತಯಾರಿ ನಡೆಸಿಕೊಂಡಿದ್ದರು. ಇನ್ನೂ ದಿಗಂತ್ ಆಸ್ಪತ್ರೆಗೆ ಬರುತ್ತಿದ್ದಂತೆಯೇ ಶಸ್ತ್ರ ಚಿಕಿತ್ಸೆಯನ್ನು ವೈದ್ಯರು ಶುರು ಮಾಡಿದ್ದರು. ಐಂದ್ರಿತಾ ಮಾಡಿದ ಈ ಕೆಲಸದಿಂದ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲು ಮತಷ್ಟು ಅನುಕೂಲವಾಗಿದೆ ಎಂದು ಹೇಳಲಾಗಿದೆ.

ನಟ ದಿಗಂತ್ ರಿಗೆ ಫ್ಲಿಪ್ ಬ್ಯಾಕ್ ಹೊಡೆಯುವ ಸಾಹಸ ಮಾಡುವುದು ಎಂದರೇ ತುಂಬಾ ಇಷ್ಟವಂತೆ. ಈ ಹಿನ್ನೆಲೆಯಲ್ಲಿ ಆತ ಸದಾ ಇಂತಹ ಸಾಹಸಗಳನ್ನು ಮಾಡುತ್ತಿರುತ್ತಾರೆ. ಆದರೆ ಗೋವಾದಲ್ಲಿ ಈ ಸಾಹಸ ಮಾಡುವಾಗ ಆಯಾ ತಪ್ಪಿ ಬಿದ್ದು ಕತ್ತಿಗೆ ಗಾಯ ಮಾಡಿಕೊಂಡಿದ್ದಾರೆ. ಈ ಹಿಂದೆ ಸಹ ದಿಗಂತ್ ಅನೇಕ ಬಾರಿ ಗಾಯ ಮಾಡಿಕೊಂಡಿದ್ದಾಗ ಗಾಯ ವಾಸಿಯಾದ ಬಳಿಕ ಮತ್ತೆ ಸ್ಟಂಟ್ ಮಾಡಲು ಮುಂದಾಗಿದ್ದರು. ಮತ್ತೇ ದಿಗಂತ್ ಆರೋಗ್ಯದಲ್ಲಿ ಚೇತರಿಸಿಕೊಂಡ ಬಳಿಕ ಇಂತಹ ಸಾಹಸಕ್ಕೆ ಮುಂದಾಗಬಹುದು ಎನ್ನಲಾಗಿದೆ.

Previous articleಬ್ಲಾಕ್ ಡ್ರೆಸ್ ನಲ್ಲಿ ದೇಹದ ಸೌಂದರ್ಯ ಪ್ರದರ್ಶನ ಮಾಡಿದ ನಟಿ ಇಷಾ ಗುಪ್ತಾ..!
Next articleಡೈಲಾಗ್ ಹೊಡೆಯಲು ಬಾರದವರನ್ನು ಸ್ಟಾರ್ ಮಾಡಿದ್ದೀರಾ, ನಿನ್ನ ಮಗನ ಬಗ್ಗೆ ನಿರ್ಲಕ್ಷ್ಯ ಏಕೆ ಎಂದು ಪೂರಿಗೆ ಪ್ರಶ್ನೆ?