Saturday, May 21, 2022
HomeCurrent Issuesಬದುಕಿ ಬಾಳಬೇಕಿದ್ದ ಪುಟ್ಟ ಮಗುವಿನ ಪ್ರಾಣ ಹೊತ್ತೊಯ್ದ ಟಿಪ್ಪರ್ ಲಾರಿ!

ಬದುಕಿ ಬಾಳಬೇಕಿದ್ದ ಪುಟ್ಟ ಮಗುವಿನ ಪ್ರಾಣ ಹೊತ್ತೊಯ್ದ ಟಿಪ್ಪರ್ ಲಾರಿ!

6 ವರ್ಷದ ಮಗು ಸಮನ್ವಿ ಅಪಘಾತದಲ್ಲಿ ಸಾವನ್ನಪ್ಪಿರುವುದು ನಿಜಕ್ಕೂ ಕಲ್ಲು ಮನಸ್ಸುಗಳು ಸಹ ಮರಗುವ ದುರಂತ. ಅಂರಿತ ನಾಯ್ಡು ಅವರ ಪುತ್ರಿ ಸಮನ್ವಿ ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುತ್ತಿದ್ದ ನಮ್ಮಮ್ಮ ಸೂಪರ್ ಸ್ಟಾರ್ ಸ್ಪರ್ದಿಯಾಗಿದ್ದಳು.

ತಾಯಿ ಗರ್ಭಿಣಿ ಆಗಿದ್ದು ಆಟ ಆಡೋದು ಮತ್ತು ಷೋನ ಗೇಮ್ ಗಳಲ್ಲಿ ಭಾಗವಹಿಸಲು ಆಗದ ಕಾರಣ ಕಳೆದ ವಾರ ಎಲಿಮಿನೇಟ್ ಆಗಿದ್ದರು. ಸಮನ್ವಿ ಕೆಲವೇ ದಿನಗಳು ಷೋನಲ್ಲಿ ಕಾಣಿಸಿಕೊಂಡಿದ್ದರು, ಎಲ್ಲರ ಮನೆಮಾತಾಗಿದ್ದಳು. ಆದರೆ ವಿಧಿ ಆಟದಿಂದ ನೆನ್ನೆ ಸಂಜೆ ಸರಿಸುಮಾರು 6:30 ಹೊತ್ತಿಗೆ, ಬೆಂಗಳೂರಿನ ಕೋಣನ ಕುಂಟೆ ರಸ್ತೆ ಬಳಿ ಭೀಕರ ಅಪಘಾತಕಿಡಾಗಿ ಸಾವನ್ನಪ್ಪಿದ್ದಾಳೆ.

ಡಿ ಮಾರ್ಟ್ ಗೆ ಹೋಗಿ ವಾಪಸ್ ತಾಯಿ ಅಮೃತಾ ಮತ್ತು ಮಗು ಸಮನ್ವಿ ದ್ವಿ ಚಕ್ರವಾಹನದಲ್ಲಿ ಬರುವಾಗ, ಯಮನಂತೆ ಬಂದ ಟಿಪ್ಪರ್ ಲಾರಿ ಏಕಾಏಕಿ ಗುದ್ದಿದೆ. ಗುದ್ದಿದ ರಭಸಕ್ಕೆ ಮಗು ಸಮನ್ವಿ ಸಾವನ್ನಪ್ಪಿದ್ದು, ತಾಯಿಯ ಸ್ಥಿತಿ ಗಂಭೀರವಾಗಿದೆ. ಬೆಳೆಯ ಬೇಕಾದ ಗಿಡ ಮೊಳಕೆಯಲ್ಲೇ ಚಿವುಟಿ ಹೋಗಿದ್ದು ನಿಜಕ್ಕೂ ನೋವಿನ ಸಂಗತಿ.

- Advertisement -

You May Like

More