Uncategorized

ಸಮಂತಾಗೆ ಐದು ಸ್ಟಾರ್ ನಟರ ಸಪೋರ್ಟ್, ಯಶೋಧ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ಆ ಐದು ಮಂದಿ ಸ್ಟಾರ್…!

ಸೌತ್ ಸಿನಿರಂಗದಲ್ಲಿ ಸ್ಟಾರ್‍ ನಟಿಯಾಗಿ ಖ್ಯಾತಿ ಪಡೆದುಕೊಂಡ ಸಮಂತಾ ಅಭಿನಯದ ಯಶೋಧ ಸಿನೆಮಾ ಈಗಾಗಲೇ ದೊಡ್ಡ ಮಟ್ಟದಲ್ಲಿ ಕ್ರೇಜ್ ಹುಟ್ಟಿಸಿದ್ದಾರೆ. ಆಕ್ಷನ್ ಥ್ರಿಲ್ಲರ್‍ ಕಥೆಯನ್ನು ಆಧರಿಸಿ ಈ ಸಿನೆಮಾ ಚಿತ್ರೀಕರಿಸಲಾಗಿದ್ದು, ಈಗಾಗಲೇ ಸಿನೆಮಾದ ಪೋಸ್ಟರ್, ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಈ ಸಿನೆಮಾವನ್ನು ಹರಿ ಹಾಗೂ ಹರೀಶ್ ಎಂಬ ನಿರ್ದೇಶಕರು ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಸಿನೆಮಾದ ಟೀಸರ್‍ ಬಿಡುಗಡೆಯಾಗಿದ್ದು, ಟೀಸರ್‍ ಬಳಿಕ ಮತಷ್ಟು ಹೈಪ್ ಹೆಚ್ಚಾಗಿದೆ. ಇದೀಗ ಸಿನೆಮಾ ಟ್ರೈಲರ್‍ ಬಿಡುಗಡೆಗೆ ಚಿತ್ರತಂಡ ಸಿದ್ದವಾಗುತ್ತಿದೆ.

ನಟಿ ಸಮಂತಾ ಅಭಿನಯದ ಯಶೋಧ ಸಿನೆಮಾದ ಟೀಸರ್‍ ಕೆಲವು ದಿನಗಳ ಹಿಂದೆಯಷ್ಟೆ ರಿಲೀಸ್ ಆಗಿತ್ತು. ಇನ್ನೂ ಟೀಸರ್‍ ಗೆ ಅಪಾರ ಪ್ರಮಾಣದ ಬೆಂಬಲ ಸಹ ವ್ಯಕ್ತವಾಗಿತ್ತು. ಇನ್ನೂ ಟೀಸರ್‍ ನೋಡಿದ ಅಭಿಮಾನಿಗಳೂ ಸಹ ಸಿನೆಮಾದ ಮೇಲಿನ ನಿರೀಕ್ಷೆಯನ್ನು ಮತಷ್ಟು ಹೆಚ್ಚಿಸಿಕೊಂಡಿದ್ದಾರೆ. ಇದೀಗ ಟ್ರೈಲರ್‍ ಗಾಗಿ ಕಾಯುತ್ತಿದ್ದಾರೆ. ಟ್ರೈಲರ್‍ ಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಚಿತ್ರತಂಡ ಗುಡ್ ನ್ಯೂಸ್ ನೀಡಿದೆ. ವಿಭಿನ್ನವಾಗಿ ಟ್ರೈಲರ್‍ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಯಶೋಧ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆದ ಕಾರಣದಿಂದ ಪ್ಯಾನ್ ಇಂಡಿಯಾ ಸ್ಟಾರ್‍ ಗಳ ಕೈಯಲ್ಲೇ ಯಶೋಧ ಟ್ರೈಲರ್‍ ಸಹ ಬಿಡುಗಡೆ ಮಾಡಿಸಲು ಪ್ಲಾನ್ ಮಾಡಿದ್ದಾರೆ. ಅ.27 ರಂದು ಯಶೋಧ ಸಿನೆಮಾದ ಟ್ರೈಲರ್‍ ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗಿದೆ. ಖ್ಯಾತ ಪ್ಯಾನ್ ಇಂಡಿಯಾ ಸ್ಟಾರ್‍ ಗಳ ಕೈಯಿಂದ ಈ ಟ್ರೈಲರ್‍ ಸಹ ರಿಲೀಸ್ ಆಗಲಿರುವುದು ವಿಶೇಷ ಎನ್ನಲಾಗುತ್ತಿದೆ.

ಯಶೋಧ ಸಿನೆಮಾ ನ.11 ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಈ ಸಿನೆಮಾ ಟ್ರೈಲರ್‍ ಅ.27 ರಂದು ಬಿಡುಗಡೆಯಾಗಲಿದ್ದು, ಈ ಟ್ರೈಲರ್‍ ಐದು ಮಂದಿ ಪ್ಯಾನ್ ಇಂಡಿಯಾ ಸ್ಟಾರ್‍ ಗಳು ರಿಲೀಸ್ ಮಾಡಲಿದ್ದಾರೆ. ಈ ಸುದ್ದಿ ಅಭಿಮಾನಿಗಳಲ್ಲಿ ಮತಷ್ಟು ಕ್ರೇಜ್ ಹುಟ್ಟಿಸಿದೆ ಎನ್ನಲಾಗಿದೆ. ಟಾಲಿವುಡ್ ನಲ್ಲಿ ವಿಜಯ್ ದೇವರಕೊಂಡ, ಸ್ಯಾಂಡಲ್ ವುಡ್ ನಲ್ಲಿ ರಕ್ಷಿತ್ ಶೆಟ್ಟಿ, ಕಾಲಿವುಡ್ ನಲ್ಲಿ ಸೂರ್ಯ, ಮಾಲಿವುಡ್ ನಲ್ಲಿ ದುಲ್ಕರ್‍ ಸಲ್ಮಾನ್, ಹಿಂದಿಯಲ್ಲಿ ವರುಣ್ ಧವನ್ ಯಶೋಧ ಟ್ರೈಲರ್‍ ರಿಲೀಸ್ ಮಾಡಲಿದ್ದಾರೆ. ಇನ್ನೂ ಈ ಸುದ್ದಿ ಹೊರಬರುತ್ತಿದ್ದಂತೆ ಯಶೋಧ ಅಭಿಮಾನಿಗಳೂ ಸಹ ಪುಲ್ ಥ್ರಿಲ್ ಆಗಿದ್ದಾರೆ. ಜೊತೆಗೆ ಐದು ಮಂದಿ ಪ್ಯಾನ್ ಇಂಡಿಯಾ ಸ್ಟಾರ್‍ ಗಳು ಸಮಂತಾ ರವರ ಯಶೋಧ ಟ್ರೈಲರ್‍ ಬಿಡುಗಡೆ ಮಾಡುವ ಮೂಲಕ ಸಪೋರ್ಟ್ ಮಾಡಲಿದ್ದಾರೆ.

ಯಶೋಧ ಸಿನೆಮಾ ಶ್ರೀದೇವಿ ಮೂವಿಸ್ ಬ್ಯಾನರ್‍ ನಟಿ ಖ್ಯಾತ ನಿರ್ಮಾಪಕ ಶಿವಲೆಂಕ ಕೃಷ್ಣಪ್ರಸಾದ್ ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಸಿನೆಮಾ ವಿಶ್ವದಾದ್ಯಂತ ತೆಲುಗು, ತಮಿಳು, ಕನ್ನಡ, ಹಿಂದಿ, ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಇನ್ನೂ ಸಿನೆಮಾದ ಪ್ರಮೋಷನ್ ಸಹ ವಿಭಿನ್ನವಾಗಿ ಮಾಡಲು ಪ್ಲಾನ್ ಮಾಡಿದೆಯಂತೆ ಚಿತ್ರತಂಡ. ಈ ಸಿನೆಮಾದಲ್ಲಿ ವರಲಕ್ಷ್ಮೀ ಶರತ್ ಕುಮಾರ್‍, ಮುಕುಂದನ್, ರಾವು ರಮೇಶ್, ಪ್ರಿಯಾಂಕಾ ಶರ್ಮಾ, ಸಂಪತ್ ರಾಜ್ ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನೆಮಾದಲ್ಲಿದೆ.

Trending

To Top