ಹೈದರಾಬಾದ್: ಕಳೆದ ಒಂದು ವರ್ಷದಿಂದ ಟಾಲಿವುಡ್ ರಂಗದಲ್ಲಿ ಸದ್ದು ಮಾಡುತ್ತಿರುವ ಶಕುಂತಲಾ ಚಿತ್ರದಲ್ಲಿ ಶಕುಂತಲಾ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ದೊರೆತಿದ್ದು, ದಕ್ಷಿಣ ಭಾರತದ ಬಹುಬೇಡಿಕೆ ನಟಿ ಸಮಂತಾ ಅಕ್ಕಿನೇನಿ ರವರ ಹೆಸರು ಅಧಿಕೃತವಾಗಿ ಘೋಷಣೆ ಮಾಡಿದೆ ಚಿತ್ರತಂಡ.
ಶಕುಂತಲಾ ಚಿತ್ರಕ್ಕಾಗಿ ಮೊದಲು ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ ರವರು ಹೆಸರುಗಳು ಕೇಳಿ ಬರುತ್ತಿತ್ತು. ಇದೀಗ ಶಕುಂತಲಾ ಚಿತ್ರದ ನಾಯಕಿ ಸಮಂತಾ ಅಕ್ಕಿನೇನಿ ಎಂದು ಅಧಿಕೃತವಾಗಿ ಘೋಷಣೆಯಾಗಿದೆ. ಇನ್ನೂ ಚಿತ್ರದ ಮೋಷನ್ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಿದ್ದು, ಶಕುಂತಲಾ ಪಾತ್ರದಲ್ಲಿ ನಟಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ ಎಂಬುದು ದೃಡಪಟ್ಟಿದೆ.
ಇನ್ನೂ ಟಾಲಿವುಡ್ ಖ್ಯಾತ ನಿರ್ದೇಶಕ ಗುಣಶೇಖರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರಕ್ಕೂ ಮೊದಲು ಹಿರಣ್ಯಕಶ್ಯಪು ಎಂಬ ಪೌರಾಣಿಕ ಸಿನೆಮಾ ಘೋಷಣೆ ಮಾಡಿದ್ದರು. ಆದರೇ ಇದೀಗ ಹಿರಣ್ಯ ಕಶ್ಯಪು ಚಿತ್ರಕ್ಕೂ ಮೊದಲೇ ಶಕುಂತಲಾ ಸಿನೆಮಾ ಮಾಡಲು ಮುಂದಾಗಿದ್ದಾರೆ. ಭಾರತದ ಮಹಾಕಾವ್ಯದಲ್ಲಿನ ಶಕುಂತಲ ಪಾತ್ರವನ್ನು ಆಧರಿಸಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ ಎನ್ನಲಾಗಿದೆ. ಆದರೆ ಈ ಚಿತ್ರದ ಕುರಿತಂತೆ ಹೆಚ್ಚಿನ ಮಾಹಿತಿ ಬಹಿರಂಗಗೊಳಿಸಿಲ್ಲ ಚಿತ್ರತಂಡ. ಕೆಲವೊಂದು ಮೂಲಗಳ ಪ್ರಕಾರ ದುಷ್ಯಂತ ಮತ್ತು ಶಕುಂತಲ ಇವರಿಬ್ಬರ ಪ್ರೇಮಕಥೆಯನ್ನು ಆಧರಿಸಿ ಈ ಸಿನೆಮಾ ಮೂಡಿಬರಲಿದೆ ಎನ್ನಲಾಗುತ್ತಿದೆ.
