ಬಾಲಿವುಡ್ ನಲ್ಲಿ ಲೀಡ್ ಹಿರೋಯಿನ್ ಆಗಿ ಮಾಡಲಿರುವ ಸಿನೆಮಾಗೆ ಟಾಪ್ ನಟಿ ಪ್ರೊಡ್ಯೂಸರ್, ಯಾರು ಗೊತ್ತಾ?

ದೇಶದಲ್ಲಿ ಇದೀಗ ಎಲ್ಲಾ ಸಿನಿರಂಗಗಳಲ್ಲೂ ಕೇಳಿಬರುತ್ತಿರುವ ಹೆಸರು ಸಮಂತಾ. ದಕ್ಷಿಣ ಭಾರತದ ಸಿನೆಮಾಗಳಲ್ಲಿ ಮಾತ್ರವಲ್ಲದೇ ಬಾಲಿವುಡ್ ನಲ್ಲೂ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸೌತ್ ಸಿನಿರಂಗದಲ್ಲಿ ದೊಡ್ಡ ಸ್ಟಾರ್‍ ನಟಿಯಾಗಿದ್ದ ಈಕೆ ಇದೀಗ ಬಾಲಿವುಡ್ ಮೇಲೆ ಕಣ್ಣಿಟ್ಟಿದ್ದು, ಈಗಾಗಲೇ ಕೆಲವೊಂದು ಸಿನೆಮಾಗಳಿಗೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಇದೀಗ ಬಾಲಿವುಡ್ ಸಿನೆಮಾದಲ್ಲಿ ನಟಿ ಸಮಂತಾ ಲೀಡ್ ಆಕ್ಟರ್‍ ಆಗಿ ಕಾಣಿಸಿಕೊಳಲ್ಲಿದ್ದು, ಆ ಸಿನೆಮಾಗೆ ಪಾಪ್ಯುಲರ್‍ ನಟಿಯೊಬ್ಬರು ಬಂಡವಾಳ ಹಾಕಲಿದ್ದಾರಂತೆ. ಅಷ್ಟಕ್ಕೂ ಆ ನಟಿ ಯಾರೂ ಎಂಬ ವಿಚಾರಕ್ಕೆ ಬಂದರೇ..,

ನಟಿ ಸಮಂತಾ ಪುಷ್ಪಾ ಸಿನೆಮಾದಲ್ಲಿ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡ ಬಳಿಕೆ ಆಕೆಯ ಲಕ್ ಬದಲಾಗಿದೆ ಎನ್ನಲಾಗುತ್ತಿದೆ. ಸಾಲು ಸಾಲು ಸಿನೆಮಾಗಳು ಆಕೆಯನ್ನು ಹರಿಸಿ ಬರುತ್ತಿದೆ. ಸ್ಟಾರ್‍ ನಟರ ಜೊತೆಗೆ ಹಾಗೂ ಪ್ಯಾನ್ ಇಂಡಿಯಾ ಸಿನೆಮಾಗಳಲ್ಲೂ ಸಹ ಆಕೆ ನಟಿಸುವ ಮೂಲಕ ಟಾಪ್ ನಟಿಯಾಗಿ ಮುನ್ನುಗ್ಗುತ್ತಿದ್ದಾರೆ. ಪುಷ್ಪಾ ಸಿನೆಮಾದಲ್ಲಿ ಹೂ ಅಂಟಾವಾ ಮಾಮ ಹಾಡಿನ ಬಳಿಕ ಬಾಲಿವುಡ್ ನ ನಿರ್ಮಾಪಕರು, ನಿರ್ದೇಶಕರನ್ನೂ ಸಹ ಆಕರ್ಷಣೆ ಮಾಡಿದ್ದಾರೆ. ಇದರಿಂದಾಗಿ ಆಕೆಗೆ ಬಾಲಿವುಡ್ ನಲ್ಲಿ ತುಂಬಾ ಅವಕಾಶಗಳು ಹರಿಸಿ ಬಂದಿವೆ ಎನ್ನಲಾಗುತ್ತಿದೆ. ಸದ್ಯ ಬಾಲಿವುಡ್ ಸಿನೆಮಾ ಒಂದರಲ್ಲಿ ಸಮಂತಾ ಲೀಡ್ ನಾಯಕಿಯಾಗಿ ಕಾಣಿಸಿಕೊಳ್ಳಲ್ಲಿದ್ದು, ಈ ಸಿನೆಮಾಗೆ ಬಂಡವಾಳವನ್ನು ಟಾಪ್ ನಟಿ ತಾಪ್ಸಿ ಪನ್ನು ಹೂಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಸಮಂತಾ ಮುಂಬೈನಲ್ಲಿ ಠಿಕಾಣಿ ಹೂಡಿದ್ದು, ಬಾಲಿವುಡ್ ಸಿನೆಮಾಗಳಲ್ಲೂ ತಮ್ಮ ಕ್ರೇಜ್ ಹೆಚ್ಚಿಸಲಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಸಮಂತಾ ಸಿನೆಮಾಗೆ ತಾಪ್ಸಿ ಪನ್ನು ಬಂಡವಾಳ ಹೂಡುವ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಖಾಸಗಿ ಮಾದ್ಯಮವೊಂದಕ್ಕೆ ತಾಪ್ಸಿ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ನಾನು ಹಾಗೂ ಸಮಂತಾ ಸಿನೆಮಾ ಒಂದನ್ನು ಮಾಡಲಿದ್ದೇವೆ. ಈಗಾಗಲೇ ಸಿನೆಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ಜೋರಾಗಿ ನಡೆಯುತ್ತಿವೆ. ಸಿನೆಮಾಗೆ ನಾನೇ ಬಂಡವಾಳ ಹೂಡುತ್ತಿದ್ದೇನೆ. ಜೊತೆಗೆ ನಾನು ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಇನ್ನೂ ಸಮಂತಾ ಈ ಸಿನೆಮಾದಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಿದ್ದಾರೆ. ಇನ್ನೂ ಕೆಲವು ದಿನಗಳಿಂದ ತಾಪ್ಸಿ ಪನ್ನು ಸಿನೆಮಾ ಒಂದನ್ನು ಮಾಡಲಿದ್ದಾರೆ ಎಂಬ ಮಾತುಗಳು ಮುಂಬೈ ಸಿನಿನಗರದಲ್ಲಿ ಕೇಳಿಬರುತ್ತಿದ್ದು. ಇದೀಗ ಆ ಸುದ್ದಿಗೆ ಸ್ಪಷ್ಟನೆ ದೊರೆತಿದೆ. ಶೀಘ್ರದಲ್ಲೇ ಸಿನೆಮಾದ ಅಧಿಕೃತ ಘೋಷಣೆಯನ್ನು ಮಾಡಲಿದ್ದೇವೆ ಎಂದು ತಾಪ್ಸಿ ಹೇಳಿದ್ದಾರೆ. ಇನ್ನೂ ಸಮಂತಾ ಅಭಿಮಾನಿಗಳಲ್ಲಿ ಈ ಸಿನೆಮಾ ಯಾವ ರೀತಿ ಇರಬಹುದು ಬಾಲಿವುಡ್ ನಲ್ಲಿ ಸಮಂತಾ ಯಾವ ರೀತಿ ಹಿಟ್ ಹೊಡೆಯುತ್ತಾರೆ ಎಂಬುದರ ಬಗ್ಗೆ ಕುತೂಹಲ ಹೆಚ್ಚಿಸಿಕೊಂಡಿದ್ದಾರೆ.

ಇನ್ನೂ ಸಮಂತಾ ಬಾಲಿವುಡ್ ನ ಖ್ಯಾತ ನಿರ್ಮಾಪಕ ಕರಣ್ ಜೋಹರ್‍ ನಡೆಸಿಕೊಡುವ ವಿವಾದಾತ್ಮಕ ಶೋ ಎಂದೇ ಕರೆಯಲಾಗುವ ಕಾಫಿ ವಿತ್ ಕರಣ್ ಎಂಬ ಟಾಕ್ ಶೋ ನಲ್ಲಿ ಭಾಗಿಯಾಗಿದ್ದಾರೆ. ಈ ಶೋ ನಲ್ಲಿ ಸಮಂತಾ ತಮ್ಮ ವೈಯುಕ್ತಿಕ ವಿಚಾರಗಳು ಕೆಲವನ್ನು ಬಿಚ್ಚಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಶೋ ಪ್ರೊಮೋ ಸಹ ಬಿಡುಗಡೆಯಾಗಿದ್ದು, ಅದು ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನೂ ಕರಣ್ ಜೋಹರ್‍ ಸಿನೆಮಾದಲ್ಲೂ ಸಹ ಸಮಂತಾ ನಟಿಸಲಿದ್ದಾರೆ ಎಂಬ ಮಾತುಗಳೂ ಸಹ ಜೋರಾಗಿಯೇ ಕೇಳಿಬರುತ್ತಿವೆ.

Previous articleಮೆಗಾಸ್ಟಾರ್ ಚಿರಂಜೀವಿ ಗಾಡ್ ಫಾದರ್ ಫಸ್ಟ್ ಲುಕ್ ರಿವೀಲ್.. ನೆವರ್ ಬಿಪೋರ್ ಅನ್ನೊ ಲುಕ್ಸ್ ಫ್ಯಾನ್ ಹಬ್ಬ…!
Next articleಸೈಲೆಂಟ್ ಆಗಿ ಬ್ಯಾಂಕಾಕ್ ಗೆ ಹಾರಿದ ಮೋಹಕ ತಾರೆ ರಮ್ಯಾ.. ವೈರಲ್ ಆದ ಪೊಟೋಗಳು…!