Film News

ಶಾಕುಂತಲಂ ಸಿನೆಮಾ ಕೂಡ ಪ್ಯಾನ್ ಇಂಡಿಯಾದಡಿ ಬಿಡುಗಡೆ?

ಹೈದರಾಬಾದ್: ದಕ್ಷಿಣ ಭಾರತದ ಬಹುಬೇಡಿಕೆ ನಟಿ ಸಮಂತಾ ಲೀಡ್ ರೋಲ್‌ನಲ್ಲಿ ನಟಿಸುತ್ತಿರುವ ಶಾಕುಂತಲಂ ಸಿನೆಮಾವನ್ನು ಪ್ಯಾನ್ ಇಂಡಿಯಾದಡಿ ಬಿಡುಗಡೆ ಮಾಡಲು ಚಿತ್ರತಂಡ ಯೋಚನೆ ಮಾಡುತ್ತಿದೆಯಂತೆ.

ಟಾಲಿವುಡ್ ನಿರ್ದೇಶಕ ಗುಣಶೇಖರ್ ಸಾರಥ್ಯದಲ್ಲಿ ಶಾಕುಂತಲಂ ಸಿನೆಮಾದಲ್ಲಿ ಲೀಡ್ ರೋಲ್‌ನಲ್ಲಿ ಸಮಂತಾ ನಟಿಸಲಿದ್ದು. ಈ ಚಿತ್ರವನ್ನು ಪ್ಯಾನ್ ಇಂಡಿಯಾದಡಿ ಬಿಡುಗಡೆ ಮಾಡಲು ನಿರ್ದೇಶಕ ಗುಣಶೇಖರ್ ಪ್ಲಾನ್ ಮಾಡಿದ್ದಾರಂತೆ. ನಟಿ ಸಮಂತಾ ಈಗಾಗಲೇ ಎಲ್ಲಾ ಭಾಷೆಯ ಸಿನಿರಂಗದಲ್ಲೂ ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಕುಂತಲಂ ಸಿನೆಮಾವನ್ನು ಪ್ಯಾನ್ ಇಂಡಿಯಾದಡಿ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ ಎಂಬ ಚರ್ಚೆ ಬಲವಾಗಿ ಕೇಳಿಬರುತ್ತಿದೆ.

ಇನ್ನೂ ನಟಿ ಸಮಂತಾ ಮದುವೆಯಾದ ಬಳಿಕ ಮತಷ್ಟು ಬ್ಯುಸಿಯಾಗಿದ್ದಾರೆ. ಹೋಸ್ಟ್ ಮೂಲಕ ಕಳೆದ ವರ್ಷ ದರ್ಶನ ಕೊಟ್ಟ ಸಮಂತ, ಈ ವರ್ಷದಲ್ಲಿ ನೂತನ ರೀತಿಯಲ್ಲಿ ತಮ್ಮ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಇನ್ನೂ ಸಮಂತರವರ ದಿ ಫ್ಯಾಮಿಲಿ ಮ್ಯಾನ್-2 ಮೂಲಕ ಬಾಲಿವುಡ್‌ನಲ್ಲೂ ಸಹ ತಮ್ಮ ಕ್ರೇಜ್ ಹೆಚ್ಚಿಸಲಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ನಟಿ ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಸಕ್ರಿಯರಾಗಿರುತ್ತಾರೆ. ಇತ್ತೀಚಿಗಷ್ಟೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ 15 ಮಿಲಿಯನ್ ಹಿಂಬಾಲಕರನ್ನು ಪಡೆದುಕೊಂಡಿದ್ದು, ಈ ಕುರಿತು ಸಂತಸವನ್ನು ಸಹ ಹಂಚಿಕೊಂಡು ಎಲ್ಲರಿಗೂ ಪ್ರೀತಿಯಿಂದ ಧನ್ಯವಾದಗಳನ್ನು ತಿಳಿಸಿದ್ದಾರೆ.

Trending

To Top