ಸ್ಟಾರ್ ನಟ ನಾಗಾರ್ಜುನ ರವರಿಗೆ ಸಮಂತಾ ಅಂತಹ ಮಾತು ಅಂದ್ರಾ, ಅಕ್ಕಿನೇನಿ ಫ್ಯಾನ್ ಗರಂ ಆಗಿದ್ದೇಕೆ?

ಟಾಲಿವುಡ್ ನಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿದ್ದು, ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ವಿಚ್ಚೇದನದ ಸುದ್ದಿ. ಅವರು ವಿಚ್ಚೇಧನ ಪಡೆದುಕೊಂಡು ಒಂದು ವರ್ಷಕ್ಕೆ ಹತ್ತಿರವಾಗಿದೆ. ಈಗಲೂ ಸಹ ಅವರ ವಿಚ್ಚೇಧನದ ವಿಚಾರ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇದೆ. ವಿಚ್ಚೇಧನ ವಿಚಾರದಿಂದ ಸಮಂತಾ ಹಾಗೂ ನಾಗಚೈತನ್ಯ ರವರ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇದೆ. ಅದರಲ್ಲೂ ಸೋಷಿಯಲ್ ಮಿಡಿಯಾದಲ್ಲಿ ಒಂದಲ್ಲ ಒಂದು ವಿಚಾರ ಬರುತ್ತಲೇ ಇದೆ. ಇದೀಗ ಸಮಂತಾ ಮಾಜಿ ಮಾವ ನಾಗಾರ್ಜುನ್ ರವರ ಬಗ್ಗೆ ಸಮಂತಾ ಮಾತನಾಡಿರುವ ವಿಚಾರ ಇದೀಗ ಹಾಟ್ ಟಾಪಿಕ್ ಆಗಿದೆ.

ಇತ್ತೀಚಿಗೆ ಸಮಂತಾ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್‍ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಮಂತಾ ಡಿವೋರ್ಸ್ ಬಗ್ಗೆ ನೀಡಿದ ಹೇಳಿಕೆಗಳು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದರಲ್ಲೂ ಚೈತನ್ಯ ಪತಿಯಲ್ಲ ಮಾಜಿ ಪತಿ ಎಂದು ನೀಡಿದ ಹೇಳಿಕೆ, ಚೈತನ್ಯ ಸಮಂತಾ ರವರಿಬ್ಬರನ್ನೂ ಒಂದೇ ಕೋಣೆಯಲ್ಲಿಟ್ಟರೇ, ಕೋಣೆಯಲ್ಲಿ ಆಯುಧಗಳು ಇಲ್ಲದೇ ಇರುವ ಹಾಗೆ ಇರಬೇಕು ಎಂದು ಹೇಳಿದ್ದು ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿತ್ತು. ಇದೀಗ ಮತ್ತೊಮ್ಮೆ ಸಮಂತಾ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರಂತೆ. ಅದೂ ಈ ಬಾರಿ ನಾಗಚೈತನ್ಯ ತಂದೆ ಅಕ್ಕಿನೇನಿ ನಾಗಾರ್ಜುನ್ ರವರ ಕುರಿತು ಮಾತನಾಡಿದ್ದಾರೆ. ಆದರೆ ಸಮಂತಾ ಮಾತನಾಡಿರುವುದು ಈಗಲ್ಲ ಸುಮಾರು ತಿಂಗಳುಗಳ ಹಿಂದೆ ಸದ್ಯ ಈ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದ್ದು, ಇದಕ್ಕೆ ನಾಗಾರ್ಜುನ ಅಭಿಮಾನಿಗಳು ಸಮಂತಾ ಮೇಲೆ ಕಿಡಿಕಾರಿದ್ದಾರೆ.

ಇನ್ನೂ ಸಮಂತಾ ನಾಗಚೈತನ್ಯ ವಿಚ್ಚೇಧನ ಪಡೆದುಕೊಳ್ಳಬೇಕು ಎನ್ನುವ ಸಮಯದಲ್ಲಿ ಇಬ್ಬರನ್ನೂ ಏನಾದರೂ ಮಾಡಿ ಒಂದಾಗಿ ಮಾಡಬೇಕೆಂದು ನಾಗಾರ್ಜುನ ತುಂಬಾನೆ ಪ್ರಯತ್ನ ಮಾಡಿದ್ದರಂತೆ. ಈ ಸಂಬಂಧ ನಾಗಾರ್ಜುನ ಸಮಂತಾಗೆ ಕರೆ ಮಾಡಿ ಮಾತನಾಡಲು ಪ್ರಯತ್ನ ಮಾಡಿದ್ದರಂತೆ. ಆದರೆ ಸಮಂತಾ ಅವರ ಕರೆಯನ್ನು ಕಟ್ ಮಾಡಿದ್ದು, ನನಗೆ ಅವರೊಂದಿಗೆ ಮಾತನಾಡಲು ಇಷ್ಟವಿಲ್ಲ ಎಂದು ಹೇಳಿದ್ದರಂತೆ. ಆ ಸಮಯದಲ್ಲಿ ಸಮಂತಾ ಜೊತೆಗಿದ್ದ ನಟಿಯೊಬ್ಬರು ಪೋನ್ ಲಿಫ್ಟ್ ಮಾಡು ಅಂದ್ರೆ ಆತನಿಗೆ ಅಷ್ಟೊಂದು ಸೀನ್ ಇಲ್ಲ. ಆತ ತನ್ನ ಪತಿ ಹೇಳಿದಂತೆ ಕೇಳುತ್ತಾರೆ. ಆತನೊಂದಿಗೆ ಮಾತನಾಡಿ ಏನು ಪ್ರಯೋಜನವಿಲ್ಲ ಸಮಂತಾ ಹೇಳಿದ್ದರಂತೆ. ಆದರೆ ಈ ಸುದ್ದಿ ಎಷ್ಟರ ಮಟ್ಟಿಗೆ ನಿಜವೋ ತಿಳಿಯದು. ಆದರೆ ಈ ಹಳೇಯ ಹೇಳಿಕೆಗಳ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಕ್ಕಿನೇನಿ ನಾಗಾರ್ಜುನ ರವರ ಅಭಿಮಾನಿಗಳು ಮಾತ್ರ ಸಮಂತಾ ರವರ ವಿರುದ್ದ ಕಿಡಿ ಕಾರುತ್ತಿದ್ದಾರೆ.

ಇನ್ನೂ ವಿಚ್ಚೇದನದ ಬಳಿಕ ಸಮಂತಾ ಸಿನೆಮಾಗಳ ಮೇಲೆ ಪೋಕಸ್ ಇಟ್ಟಿದ್ದು, ಪ್ಯಾನ್ ಇಂಡಿಯಾ ಸ್ಟಾರ್‍ ನಟಿಯಾಗಿ ಮುನ್ನುಗ್ಗುತ್ತಿದ್ದಾರೆ. ಜೊತೆಗೆ ನಾಗಚೈತನ್ಯ ಸಹ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ನಾಗಚೈತನ್ಯ ಇತ್ತೀಚಿಗೆ ಶೋಭಿತಾ ಧೂಳಿಪಾಲ ಎಂಬ ಯಂಗ್ ನಟಿಯೊಂದಿಗೆ ಡೇಟಿಂಗ್ ನಡೆಸು‌ತ್ತಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಆದರೆ ಈ ಕುರಿತು ನಾಗಚೈತನ್ಯ ಆಗಲಿ ಅಥವಾ ಶೋಭಿತಾ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Previous articleದಿ ಡರ್ಟಿ ಪಿಕ್ಚರ್ ಸೀಕ್ವೆಲ್ ನಲ್ಲಿ ವಿದ್ಯಾ ಬಾಲನ್ ಔಟ್, ಇನ್ ಆಗದ್ದು ಯಾರು?
Next articleಬರ್ತ್ ಡೇ ದಿನಂದು ಅಭಿಮಾನಿಗಳಿಗೆ ಸಖತ್ ಹಾಟ್ ಟ್ರೀಟ್ ಕೊಟ್ಟ ನಿಧಿ ಅಗರ್ವಾಲ್…!