Film News

ಐ ಮಿಸ್ ಯೂ ಎಂದು ಪೋಸ್ಟ್ ಮಾಡಿದ ಸಮಂತಾ.. ಪೊಟೋ ಸಖತ್ ವೈರಲ್…..

ಬಹುಬೇಡಿಕೆ ನಟಿ ಸಮಂತಾ ಇದೀಗ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದಾರೆ. ಸೌತ್ ಫಿಲಂ ಇಂಡಸ್ಟ್ರಿಯ ನಂ 1 ನಟಿಯಾಗಿದ್ದಾರೆ. ಸಮಂತಾ ರವರಿಗಾಗಿ ಅನೇಕ ನಿರ್ದೇಶಕರು ನಿರ್ಮಾಪಕರು ಕಾಯುತ್ತಿದ್ದಾರೆ. ನಾಗಚೈತನ್ಯ ಜೊತೆ ವಿಚ್ಚೇದನವಾದ ಬಳಿಕ ಸಮಂತಾ ಗೆ ಮತಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.  ಜೊತೆಗೆ ಫ್ಯಾನ್ ಫಾಲೊಯಿಂಗ್ ಸಹ ಜಾಸ್ತಿಯಾಗಿದೆ.

ಸದಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಸಮಂತಾ ಅಭಿಮಾನಿಗಳೊಂದಿಗೆ ಹತ್ತಿರವಾಗಿರುತ್ತಾರೆ. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಸಂತಸವನ್ನು ಸಹ ಹಂಚಿಕೊಳ್ಳುತ್ತಾರೆ. ಇನ್ನೂ ಸಮಂತಾ ಪೊಟೋ ಒಂದನ್ನು ಹಂಚಿಕೊಂಡಿದ್ದು, ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.  ತಮ್ಮ ಇನ್ಸ್ಟಾಗ್ರಾಂ ಮೂಲಕ ಮೇ.10 ರಂದು ಟವೆಲ್ ಸುತ್ತಿಕೊಂಡು ಹಂಚಿಕೊಂಡ ಪೊಟೋ ಒಂದು ಮಾತ್ರ ಸಖತ್ ವೈರಲ್ ಆಗುತ್ತಿದೆ. ಮುಖ ತೋರಿಸದೇ ಟವೆಲ್ ಸುತ್ತಿಕೊಂಡು ಇರುವಂತಹ ಪೊಟೋವೊಂದನ್ನು ಹಂಚಿಕೊಂಡಿದ್ದಾರೆ. ಇದು ಸಮಂತಾ ಅವರದ್ದೇ ಪೊಟೋ ಎಂಬ ಮಾತುಗಳು ಟಾಲಿವುಡ್ ನಲ್ಲಿ ಕೇಳಿಬರುತ್ತಿದ್ದು, ಸಖತ್ ವೈರಲ್ ಆಗುತ್ತಿದೆ.

ನಿನ್ನೆಯಷ್ಟೆ (ಮೇ.10) ಸಮಂತಾ ಶೇರ್ ಮಾಡಿದ ಪೊಟೋದಲ್ಲಿ ಕೆಲವೊಂದು ಸಾಲುಗಳನ್ನು ಸಹ ಬರೆದಿದ್ದಾರೆ. ಈ ಪೊಟೋಗಳು ಸಖತ್ ವೈರಲ್ ಆಗುತ್ತಿವೆ. ವಸ್ತ್ರ ವಿನ್ಯಾಸಕಿ ನಿರಜಾ ಕೋನಾ ಎಂಬುವವರು ಬರೆದ ಸಾಲುಗಳಾಗಿವೆ. ನಿನ್ನನ್ನು ಈಗಾಗಲೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಬಂದು ಬಿಡು, ನೀನು ಬರೆದ ಸಾಲುಗಳಿಗೆ ಧನ್ಯವಾದಗಳು ಎಂದು ಸಮಂತಾ ಬರೆದುಕೊಂಡಿದ್ದಾರೆ. ವಸ್ತ್ರ ವಿನ್ಯಾಸಕಿ ನೀರಜಾ ಕೋನಾ ಟಾಲಿವುಡ್ ನಲ್ಲಿ ಸಖತ್ ಫೇಮಸ್ ಹೊಂದಿರುವ ವ್ಯಕ್ತಿ. ಸಮಂತಾಗೆ ತುಂಬಾ ಫೇವರಿಟ್ ವಸ್ತ್ರ ವಿನ್ಯಾಸಕಿ.

ನೀರಜಾ ಕೋನಾ ಸಮಂತಾರವರಿಗೆ ನೊಟ್ ಬಂದನ್ನು ಬರೆದಿದ್ದರು. ಅದನ್ನು ಸಮಂತಾ ಶೇರ್‍ ಮಾಡಿದ್ದಾರೆ. ಕನ್ನಡಿಯ ಮುಂದೆ ನಿಂತು ನೋಟ್ ಅನ್ನು ಕನ್ನಡಿಗೆ ಅಂಟಿಸಿದ್ದಾರೆ. ಅದರಲ್ಲಿ ಪಾಪಾ ಲವ್ ಯು ನೀನು ಅದ್ಬುತ ಎಂಬುದನ್ನು ನೆನಪಿನಲ್ಲಿಟ್ಟುಕೊ ಎಂಬ ಸಂದೇಶವನ್ನು ನೀರಜಾ ಸಮಂತಾ ಗೆ ಬರೆದಿದ್ದರು. ಸದ್ಯ ಈ ಪೊಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

Trending

To Top