ನಟಿ ಸಮಂತಾ ಇದೀಗ ಪುಲ್ ಫೇಮ್ ನಲ್ಲಿರುವ ನಟಿ. ಸಾಲು ಸಾಲು ಸಿನೆಮಾಗಳಲ್ಲಿ ಪುಲ್ ಬ್ಯುಸಿ. ಅದರಲ್ಲೂ ಪ್ಯಾನ್ ಇಂಡಿಯಾ ಸಿನೆಮಾಗಳೇ ಹೆಚ್ಚಾಗಿವೆ. ಇನ್ನೂ ಸಮಂತಾ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಅವರು ದೊಡ್ಡ ಮಟ್ಟದ ಫಾಲೋವರ್ಸ್ ಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಆಕೆ ಏನೆ ಹಾಕಿದರೂ ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತದೆ. ಇದೀಗ ಸಮಂತಾ ಹಾಕಿರುವ ಪೋಸ್ಟ್ ಸಖತ್ ವೈರಲ್ ಆಗಿದೆ.
ನಟಿ ಸಮಂತಾ ನಾಗಚೈತನ್ಯ ರವರೊಂದಿಗೆ ವಿಚ್ಚೇಧನ ಪಡೆದ ಬಳಿಕವಂತೂ ಹೆಚ್ಚು ಸಿನೆಮಾಗಳಲ್ಲಿ ಹಾಟ್ ಪಾತ್ರಗಳಲ್ಲೂ ಸಹ ನಟಿಸುತ್ತಿದ್ದಾರೆ. ಸದ್ಯ ವಿಜಯ್ ದೇವರಕೊಂಡ ಜೊತೆ ಖುಷಿ ಸಿನೆಮಾದಲ್ಲಿ ರೊಮ್ಯಾನ್ಸ್ ಮಾಡಲಿದ್ದಾರೆ. ಈ ಸಿನೆಮಾದ ಶೂಟಿಂಗ್ ಕೆಲಸಗಳು ಕಾಶ್ಮೀರದಲ್ಲಿ ನಡೆಯುತ್ತಿದ್ದು, ಕಾಶ್ಮೀರದ ಪ್ರಾಕೃತಿಕ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. ಈ ಕುರಿತು ಸಮಂತಾ ಇದೀಗ ಬರೆದುಕೊಂಡ ಪೋಸ್ಟ್ ಒಂದು ಸಖತ್ ವೈರಲ್ ಆಗುತ್ತಿದೆ. ಇತ್ತೀಚಿಗಷ್ಟೆ ಸಮಂತಾ ಹಾಗೂ ವಿಜಯ್ ದೇವರಕೊಂಡ ಶೂಟಿಂಗ್ ಸಮಯದಲ್ಲಿ ಕಾರು ಅಫಘಾತವಾಗಿ ಇಬ್ಬರಿಗೂ ಗಾಯಗಳಾಗಿತ್ತು. ಅಪಘಾತ ನಡೆದ ಒಂದೇ ದಿನದಲ್ಲಿ ಇಬ್ಬರೂ ಶೂಟಿಂಗ್ ಗೆ ಬ್ಯಾಕ್ ಆಗಿದ್ದರು.
ದಕ್ಷಿಣ ಭಾರತದ ಬಹುಬೇಡಿಕೆ ನಟಿಯಾಗಿರುವ ಸಮಂತ ಇದೀಗ ಬಾಲಿವುಡ್ ಹಾಗೂ ಹಾಲಿವುಡ್ ಸಿನೆಮಾಗಳಲ್ಲೂ ಸಹ ಬಣ್ಣ ಹಚ್ಚಿದ್ದಾರೆ. ಎಂ ಮಾಯ ಚೇಸ್ಯಾವೆ ಎಂಬ ಸಿನೆಮಾ ಮೂಲಕ ಟಾಲಿವುಡ್ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ಕ್ಯೂಟ್ ಅಂಡ್ ಬ್ಯೂಟಿಯೊಂದಿಗೆ ಕಡಿಮೆ ಸಮಯದಲ್ಲೇ ದೊಡ್ಡ ಮಟ್ಟದ ಹೆಸರನ್ನು ಗಳಿಸಿಕೊಂಡರು. ಇನ್ನೂ ಅಕ್ಕಿನೇನಿ ಕುಟುಂಬದ ನಾಗಚೈತನ್ಯರೊಂದಿಗೆ ಪ್ರೇಮ ವಿವಾಹವಾದರು. ಬಳಿಕ ಟಾಲಿವುಡ್ ನಲ್ಲಿ ಅವರನ್ನು ಕ್ಯೂಟ್ ಕಪಲ್ಸ್ ಎಂದೇ ಕರೆದರು. ಆದರೆ ಕೆಲವೊಂದು ಕಾರಣಗಳಿಂದ ಈಕೆ ನಾಗಚೈತನ್ಯರೊಂದಿಗೆ ವಿಚ್ಚೇಧನ ಪಡೆದುಕೊಂಡರು. ಕಳೆದ 2021 ರಲ್ಲಿ ಸಿನಿರಂಗದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಆಗಿದ್ದು, ಈ ಜೋಡಿಯ ವಿಚ್ಚೇಧನ ಪ್ರಕರಣ.
https://www.instagram.com/p/CdxCpzGLhEn/
ಸಮಂತಾ ಏನೆ ಪೋಸ್ಟ್ ಹಂಚಿಕೊಂಡರೂ ಸಹ ಬೇಗನೆ ವೈರಲ್ ಆಗುತ್ತಿರುತ್ತದೆ. ವಿಚ್ಚೇಧನದ ಬಳಿಕ ಆಕೆ ಕೆಲವೊಂದು ಕೊಟೇಷನ್ ಗಳನ್ನು ಹಾಕುತ್ತಾರೆ. ಅರ್ಥವಾಗದ ಮಾದರಿಯಲ್ಲಿರುವ ಅವರ ಕೊಟೇಷನ್ ಗಳು ಶೀಘ್ರದಲ್ಲೇ ವೈರಲ್ ಆಗುತ್ತದೆ. ಜೊತೆಗೆ ಅವರ ಕೊಟೇಷನ್ ಗಳ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಚರ್ಚೆಗಳನ್ನು ಹುಟ್ಟಿಹಾಕುತ್ತವೆ. ಇದೀಗ ಕಾಶ್ಮೀರದ ಪ್ರಾಕೃತಿಕ ಸೌಂದರ್ಯದ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹೇಳುತ್ತಾ ಪೋಸ್ಟ್ ಮಾಡಿದ್ದಾರೆ. ಮತ್ತೆ ಕಾಶ್ಮೀರದಲ್ಲಿ ಶೂಟಿಂಗ್ ಇರುತ್ತೋ ಇಲ್ಲವೋ ತಿಳಿಯದು, ಆದರೆ ಕಾಶ್ಮೀರದ ಜೊತೆಗಿನ ಅನುಬಂಧವನ್ನು ಎಂದಿಗೂ ಮರೆಯುವುದಿಲ್ಲ ಎಂಬ ಅರ್ಥದಲ್ಲಿ ಸಮಂತಾ ಮಾಡಿದ ಪೋಸ್ಟ್ ವೈರಲ್ ಆಗಿದೆ. ಇನ್ನೂ ಕಾಶ್ಮೀರದಲ್ಲಿ ಶೂಟಿಂಗ್ ಕೆಲಸಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಚಿತ್ರತಂಡ ಹೈದರಾಬಾದ್ ಗೆ ವಾಪಸ್ಸಾಗಿದೆ.