Film News

ಸಮಂತಾರನ್ನು ಎತ್ತಿಕೊಂಡು ಕುಣಿದ ಬಾಲಿವುಡ್ ನಟ ಅಕ್ಷಯ್ ಕುಮಾರ್, ವೈರಲ್ ಆಯ್ತು ವಿಡಿಯೋ…!

ಬಾಲಿವುಡ್ ನಲ್ಲಿ ವಿವಾದಿತ ಶೋ ಎಂದೇ ಕೆರೆಯಲಾಗುವ ಕಾಫಿ ವಿತ್ ಕರಣ್ ಶೋ ನಲ್ಲಿ ಸೌತ್ ಅಂಡ್ ನಾರ್ಥ್ ನ ಅನೇಕ ಸ್ಟಾರ್‍ ಗಳು ಭಾಗಿಯಾಗಿದ್ದಾರೆ. ಈ ಶೋ ನಲ್ಲಿ ಆ ಸ್ಟಾರ್‍ ನಟರ ಅನೇಕ ವೈಯುಕ್ತಿಕ ವಿಚಾರಗಳು ಸಹ ರಿವೀಲ್ ಆಗಿದ್ದು, ಎಲ್ಲೆಡೆ ವೈರಲ್ ಆಗಿದೆ. ಇದೀಗ ಈ ಶೋ ನಲ್ಲಿ ಮತ್ತೊಂದು ವಿಚಾರ ಜೋರಾಗಿಯೇ ಹರಿದಾಡುತ್ತಿದೆ. ಅದು ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್‍ ನಟಿ ಸಮಂತಾರವನ್ನು ಎತ್ತಿಕೊಂಡು ಕುಣಿದಿದ್ದಾರೆ. ಕರಣ್ ಶೋ ಗೆ ಎಂಟ್ರಿ ಕೊಡುವಾಗ ಅಕ್ಷಯ್ ಕುಮಾರ್‍ ಸಮಂತಾ ರವರನ್ನು ಎತ್ತಿಕೊಂಡು ಬರುತ್ತಿದ್ದಾರೆ. ಸದ್ಯ ಈ ವಿಡಿಯೋ ಅಂಡ್ ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಕಾಫಿ ವಿತ್ ಕರಣ್ ಸೀಸನ್ 7 ಈಗಾಗಲೇ ದೊಡ್ಡ ಸುದ್ದಿ ಮಾಡುತ್ತಿದೆ. ಮೊದಲ ಬಾರಿಗೆ ಕರಣ್ ರವರ ಕಾಫಿ ವಿತ್ ಕರಣ ಶೋ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಈ ಶೋ ಕಳೆದ ಆರು ಸೀಸನ್ ಗಳನ್ನು ಯಶಸ್ವಿಯಾಗಿ ವಿವಾದಗಳಿಂದಲೇ ಯಶಸ್ವಿಯಾಗಿದೆ. ಇದೀಗ 7ಸೀಸನ್ ತುಂಬಾ ಕುತೂಹಲ ಮೂಡಿಸಿದೆ. ಸದ್ಯ ಈ ಶೋನ ಪ್ರಮೋಗಳಿಂದಲೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇನ್ನೂ ಕಾಫಿ ವಿತ್ ಕರಣ್ ಶೋ ಸೀಸನ್ 7 ರಲ್ಲಿ ಸಾರಾ ಅಲಿ ಖಾನ್ ಹಾಗೂ ಜಾನ್ವಿ ಕಪೂರ್‍ ರವರಿಗೆ ಸಂಬಂಧಿಸಿದ ಎಪಿಸೋಡ್ ಪ್ರಸಾರವಾಗಿದೆ. ಈ ಎಪಿಸೋಡ್ ನಲ್ಲಿ ಜಾನ್ವಿ ಹಾಗೂ ಸಾರಾ ಅನೇಕ ವಿಚಾರಗಳನ್ನು ಸಹ ಬಿಚ್ಚಿಟ್ಟಿದ್ದಾರೆ. ಈ ಪೈಕಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ರವರ ನಡುವಣ ಲವ್ ಲೈಫ್ ಬಗ್ಗೆ ಹಾಗೂ ಅವರು ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಮಾಡುವುದರ ಬಗ್ಗೆ ಹೇಳಿಕೊಂಡಿದ್ದರು. ಇದು ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೀಗ ಸಮಂತಾ ರನ್ನು ಅಕ್ಷಯ್ ಕುಮಾರ್‍ ಎತ್ತಿಕೊಂಡು ಹೋಗುತ್ತಿರುವ ವಿಡಿಯೋ ಬಿರುಗಾಳಿಯಂತೆ ಹರಿದಾಡುತ್ತಿದೆ.

ಈ ಹಿಂದೆ ಸಹ ಸಮಂತಾ ರವರ ಎಪಿಸೋಡ್ ಪ್ರಮೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸ್ಯಾಮ್ ಮೊದಲ ಬಾರಿಗೆ ಕರಣ್ ಜೋಹಾರ ನಡೆಸುವ ಕಾಫಿ ವಿತ್ ಕರಣ್ ಶೋ ನಲ್ಲಿ ಭಾಗಿಯಾಗಿದ್ದಾರೆ. ಈ ಶೋಗೆ ಸಮಂತಾ ಬಾಲಿವುಡ್ ಸ್ಟಾರ್‍ ಅಕ್ಷಯ್ ಕುಮಾರ್‍ ಜೊತೆಗೆ ಕಾಣಿಸಿಕೊಂಡಿದ್ದಾರೆ. ಸದ್ಯ ಅಕ್ಷಯ್ ಕುಮಾರ್‍ ಹಾಗೂ ಸಮಂತಾ ರವರ ಎಪಿಸೋಡ್ ನ ಪ್ರೊಮೋ ರಿಲೀಸ್ ಆಗಿದ್ದು, ಪ್ರೊಮೋ ದಲ್ಲಿ ಅಕ್ಷಯ್ ಸಮಂತಾ ರನ್ನು ಎತ್ತಿಕೊಂಡು ಕುಣಿದಾಡಿದ್ದಾರೆ. ಶೋ ಗೆ ಎಂಟ್ರಿಕೊಡುವಾಗ ಸಮಂತಾರವರನ್ನು ಎತ್ತಿಕೊಂಡೇ ಅಕ್ಷಯ್ ಕುಮಾರ್‍ ಎಂಟ್ರಿಕೊಡುತ್ತಾರೆ. ಈ ವೇಳೆ ಕರಣ್ ಜೋಹರ್‍ ನಂಬರ್‍ ಒನ್ ನಟಿಯನ್ನು ನಂಬರ್ ಒನ್ ಸ್ಟಾರ್ ತೋಳಲ್ಲಿ ಎಂದು ಹೇಳಿದ್ದಾರೆ. ಸಮಂತಾ ಸಹ ರೆಡ್ ಕಲರ್‍ ಡ್ರೆಸ್ ನಲ್ಲಿ ಶೋ ನಲ್ಲಿ ಭಾಗಿಯಾಗಿದ್ದರು.

ಈ ಹಿಂದೆ ಪ್ರಸಾರವಾದ ಪ್ರೊಮೋದಲ್ಲಿ ಸಮಂತಾ ಮದುವೆಯ ಬಗ್ಗೆ ಕರಣ್ ಕೇಳಿದ್ದು, ಈ ವೇಳೆ ಸಮಂತಾ ನನ್ನ ಅಸಂತೋಷದ ಮದುವೆಗೆ ಕಾರಣ ನೀವೆ ಎಂದು ಆರೋಪ ಸಹ ಮಾಡಿದ್ದರು. ಇನ್ನೂ ಸಮಂತಾ ರವರನ್ನು ಎತ್ತಿಕೊಂಡು ಬಂದ ಅಕ್ಷಯ್ ಕುಮಾರ್‍ ಚೆನ್ನಾಗಿ ಕುಣಿದಾಡಿದ್ದಾರೆ. ಪುಷ್ಪಾ ಸಿನೆಮಾದ ಹಾಡಿಗೆ ಸ್ಟೆಪ್ಸ್ ಸಹ ಹಾಕಿದ್ದಾರೆ. ಸದ್ಯ ಈ ಪ್ರೊಮೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪ್ರೊಮೋ ನೋಡಲು ಎಲ್ಲರೂ ಕಾದು ಕುಳಿತಿದ್ದಾರೆ. ಇನ್ನೂ ಈ ಶೋ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‍ ನಲ್ಲಿ ಪ್ರಸಾರವಾಗುತ್ತಿದ್ದು. ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳು‌ತ್ತಿದೆ.

ಬಾಲಾಜಿ

ನನ್ನ ಹೆಸರು ಬಾಲಾಜಿ. ನಾನು ರಾಜಕೀಯ, ಪ್ರಚಲಿತ ವಿದ್ಯಾಮಾನ, ಸಿನೆಮಾ ಮೊದಲಾದ ವಿಷಯಗಳಲ್ಲಿ ಆಕರ್ಷಕ ಲೇಖನಗಳನ್ನು ಬರೆಯುವಲ್ಲಿ ಎಂಟು ವರ್ಷಗಳ ಅನುಭವವನ್ನು ಹೊಂದಿದ್ದೇನೆ. ಕುವೆಂಪು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಪಡೆದುಕೊಂಡಿದ್ದೇನೆ. ಅನೇಕ ದಿನಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಪತ್ರಿಕೋದ್ಯಮ ಎಂಬುದು ನನ್ನ ಹವ್ಯಾಸವಾಗಿದೆ. ನನಗೆ ವಹಿಸಿದ ಕೆಲಸವನ್ನು ಆದಷ್ಟೂ ಪ್ರಾಮಾಣಿಕವಾಗಿ ನಿಭಾಯಿಸುವ ವ್ಯಕ್ತಿತ್ವವನ್ನು ಹೊಂದಿದ್ದೇನೆ.

Leave a Comment

Recent Posts

ಮೊದಲ ಬಾರಿಗೆ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ ಕೀರ್ತಿ ಸುರೇಶ್, ಅವಕಾಶ ಸಿಗದಿದ್ದರೇ ಕೆಲಸ ಮಾಡಿಕೊಳ್ಳುತ್ತೇನೆ ಎಂದ ನಟಿ….!

ತೆಲುಗು ಸಿನಿರಂಗದಲ್ಲಿ ಬಹುಬೇಡಿಕೆಯೊಂದಿರುವ ನಟಿಯರಲ್ಲಿ ಕೀರ್ತಿ ಸುರೇಶ್ ಒಬ್ಬರಾಗಿದ್ದಾರೆ. ಮಹಾನಟಿ ಎಂಬ ಸಿನೆಮಾಗಾಗಿ ಆಕೆ ಅವಾರ್ಡ್‌ಗಳನ್ನು ಸಹ ದಕ್ಕಿಸಿಕೊಂಡಿದ್ದಾರೆ. ಮಲಯಾಳಂ…

2 hours ago

ಕಾಂತಾರ ಸಿನೆಮಾದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ತೆಲುಗು ನಟಿ ಅನಸೂಯ…!

ಕೆಜಿಎಫ್ ಸಿನೆಮಾದ ಬಳಿಕ ಇಡೀ ದೇಶದಾದ್ಯಂತ ಅನೇಕರ ಮೆಚ್ಚುಗೆಗೆ ಪಾತ್ರವಾದ ಸಿನೆಮಾ ಕಾಂತಾರ ಎಂದೇ ಹೇಳಬಹುದು. ಕನ್ನಡದ ಖ್ಯಾತ ನಿರ್ದೇಶಕ…

3 hours ago

ಮತ್ತೊಮ್ಮೆ ಮದುವೆ ರೂಮರ್ ಗಳ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಮಿಲ್ಕಿ ಬ್ಯೂಟಿ ತಮನ್ನಾ…!

ಸೌತ್ ನಲ್ಲಿ ಮಿಲ್ಕಿ ಬ್ಯೂಟಿ ಎಂತಲೇ ಖ್ಯಾತಿ ಪಡೆದುಕೊಂಡ ತಮನ್ನಾ ಭಾಟಿಯಾ ಸದಾ ಗ್ಲಾಮರ್‍ ಟ್ರೀಟ್ ನೀಡುತ್ತಲೇ ಇರುತ್ತಾರೆ. ಸೋಷಿಯಲ್…

4 hours ago

ವಿಜಯ್ ದೇವರಕೊಂಡ ತಾಯಿಯೊಂದಿಗೆ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್, ವೈರಲ್ ಆದ ಪೊಟೋ…!

ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುವ ಬಾಲಿವುಡ್ ನಟಿಯರಲ್ಲಿ ಜಾನ್ವಿ ಕಪೂರ್‍ ಸಹ ಒಬ್ಬರಾಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ನಟಿ ಜಾನ್ವಿಗೆ…

7 hours ago

ಗ್ಲಾಮರ್ ಡೋಸ್ ಏರಿಸಿದ ರಾಶಿ ಖನ್ನಾ, ನೆವರ್ ಬಿಫೋರ್ ಅನ್ನೋ ತರಹ ಹಾಟ್ ಟ್ರೀಟ್ ಕೊಟ್ಟ ಬ್ಯೂಟಿ…!

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಬಹುತೇಕ ನಟಿಯರು ಗ್ಲಾಮರ್‍ ಶೋ ಮಾಡುವುದು ಹೆಚ್ಚಾಗಿದೆ. ಈ ಹಿಂದೆ ಓವರ್‍ ಗ್ಲಾಮರ್‍ ಶೋ ಮಾಡದ…

19 hours ago

ಸೀತಾರಾಮಂ ಬ್ಯೂಟಿ ಶಾಕಿಂಗ್ ಕಾಮೆಂಟ್ಸ್, ನಾನು ಏನು ಎಂಬುದನ್ನು ತೋರಿಸುತ್ತೇನೆ ಎಂದ ಮೃಣಾಲ್…!

ದಕ್ಷಿಣದಲ್ಲಿ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ಸೀತಾರಾಮಂ ಸಿನೆಮಾದಲ್ಲಿ ಸೀತಾ ಪಾತ್ರದಲ್ಲಿ ಕಾಣಿಸಿಕೊಂಡ ಮೃಣಾಲ್ ಠಾಕೂರ್‍ ಅಭಿನಯಕ್ಕೆ ಅನೇಕರು ಫಿದಾ…

20 hours ago