Film News

ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟ ನಟಿ ಸಮಂತಾ!

ಹೈದರಾಬಾದ್: ಕ್ಯೂಟ್ ನಟಿ ಸಮಂತಾ ಮೂಲತಃ ಚೆನೈ ಮೂಲದವರು. ಇಲ್ಲಿಯೇ ಬಾಲ್ಯವನ್ನು ಕಳೆದಿದ್ದಾರೆ. ನಟಿ ಸಮಂತಾ ಸ್ಕೂಲ್ ಟಾಪರ್ ಸಹ ಹೌದು. ಇದೀಗ ಹಲವು ಬಾಲ್ಯದ ವಿಚಾರಗಳನ್ನು ವಿಡಿಯೋ ಮೂಲಕ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

ಸದ್ಯ ನಟಿ ಸಮಂತಾ ಚೆನೈನಲ್ಲಿ ಶೂಟಿಂಗ್ ನಿಮಿತ್ತ ಇದ್ದು, ನಿರ್ದೇಶಕ ವಿಘ್ನೇಶ್ ಶಿವನ್ ಸಾರಥ್ಯದಲ್ಲಿ ಮೂಡಿಬರಲಿರುವ ರೆಂಡು ಕಾದಲ್ ಎಂಬ ಸಿನೆಮಾದಲ್ಲಿ ಸಮಂತಾ ಸಹ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಚೆನೈನಲ್ಲಿ ನಡೆಯುತ್ತಿದ್ದು, ಚೆನೈ ರಸ್ತೆಯಲ್ಲಿ ಸಂಚರಿಸುತ್ತಾ ಅದನ್ನು ವಿಡೀಯೊ ಸಹ ಮಾಡಿ ಮಾಹಿತಿಯನ್ನು ಸಹ ಹಂಚಿಕೊಂಡಿದ್ದಾರೆ.

ಚೆನೈನಲ್ಲಿ ಬೀದಿಗಳಲ್ಲಿ ಕಾರಿನಲ್ಲಿ ಸಂಚರಿಸುತ್ತಾ, ಕೆಲವೊಂದು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಸಮಂತಾ ತನ್ನ ಚಿಕ್ಕಂದಿನಲ್ಲಿ ತಮ್ಮ ಮನೆಯ ಬಾಲ್ಕನಿ ಮೇಲಿಂದ ಒಂದು ಬೆಟ್ಟವನ್ನು ನೋಡುತ್ತಾ ಇದ್ದರಂತೆ, ಇನ್ನೂ ತನ್ನ ಎಲ್ಲಾ ಮಾಹಿತಿ ಆ ಬೆಟ್ಟಕ್ಕೆ ಮಾತ್ರ ಗೊತ್ತಂತೆ. ಪರೀಕ್ಷೆಯ ಸಮಯದಲ್ಲಿ ನಾನು ಹೇಗಿದ್ದೆ, ಎಷ್ಟು ದೇವರಿಗೆ ವಿವಿಧ ರೀತಿಯಲ್ಲಿ ಪ್ರಾರ್ಥನೆ ಮಾಡಿದ್ದು, ಪ್ರಾಮೀಸ್ ಮಾಡಿದ್ದು ಎಲ್ಲವೂ ಆ ಬೆಟ್ಟಕ್ಕೆ ಮಾತ್ರ ತಿಳಿದಿದೆ. ಅಷ್ಟೆ ಅಲ್ಲದೇ ನನ್ನ ಫಸ್ಟ್ ಲವ್, ಹಾರ್ಟ್ ಬ್ರೇಕ್ ಆಗಿದ್ದು, ನನ್ನ ಸ್ನೇಹಿತರ ಮರಣ, ನನ್ನ ಕಣ್ಣೀರು ಎಲ್ಲವೂ ಆ ಬೆಟ್ಟಕ್ಕೆ ಗೊತ್ತಿದೆ ಎಂದು ಎಮೋಷನಲ್ ಆಗಿದ್ದಾರೆ.

ಇನ್ನೂ ಕಾಥವಾಕ್ಕುಲ ರೆಂಡು ಕಾದಲ್ ಚಿತ್ರದಲ್ಲಿ ಸಮಂತಾ ಜೊತೆ ವಿಜಯ್ ಸೇತುಪತಿ ಹಾಗೂ ನಯನತಾರ ಸಹ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಚಿತ್ರದಿಂದ ಬಿಡುಗಡೆಯಾದ ಒಂದು ಸಾಂಗ್ ಸೂಪರ್ ಹಿಟ್ ಆಗಿದೆ.

Trending

To Top