ಸಿನಿಮಾರಂಗದಲ್ಲಿ 11 ವರ್ಷ ಪೂರೈಸಿದ ಸಮಂತಾ!

ಹೈದರಾಬಾದ್: ತನ್ನ ಮುಗ್ದ ನಟನೆಯ ಮೂಲಕ ದಕ್ಷಿಣ ಭಾರತದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿರುವ ನಟಿ ಸಮಂತಾ ಅಕ್ಕಿನೇನಿ ಸಿನೆಮಾ ರಂಗದಲ್ಲಿ ಇದೀಗ 11 ವರ್ಷಗಳನ್ನು ಪೂರೈಸಿದ್ದಾರೆ.

ಕಳೆದ 2010 ರಲ್ಲಿ ಸಿನೆಮಾ ಫಿಲ್ಡ್‌ಗೆ ಎಂಟ್ರಿ ಕೊಟ್ಟ ಸಮಂತಾ ತೆಲುಗು, ತಮಿಳು ಹಿಂದಿ ಭಾಷೆಯಲ್ಲಿ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ತಮ್ಮ ಕೆಲಸ ಪ್ರಾರಂಭಿಸಿದಾಗಿನಿಂದಲೂ ಇಲ್ಲಿಯವರೆಗೂ ಬಹುಬೇಡಿಕೆ ನಟಯಾಗಿಯೇ ಗುರ್ತಿಸಿಕೊಂಡಿದ್ದಾರೆ. ನಟಿ ಸಮಂತಾ ಹುಟ್ಟ ಬೆಳೆದಿದ್ದು ತಮಿಳುನಾಡಿನ ಚೆನೈನಲ್ಲಿ. ತಮಿಳಿನ ವಿನ್ನೈತಂಡಿ ವರುವಾಯಾ ಎಂಬ ಸಿನೆಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು, ಅನೇಕ ಹಿಟ್ ಸಿನೆಮಾಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ನಟಿ ಸಮಂತಾ ಏಮ್ ಮಾಯಾ ಚೇಸಾವೆ ಎಂಬ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಮೊದಲ ತೆಲುಗು ಚಿತ್ರದಲ್ಲೇ ದೊಡ್ಡ ಮಟ್ಟದಲ್ಲಿ ಹೆಸರುಗಳಿಸಿಕೊಂಡರು. ನಂತರ ಸಾಲು ಸಾಲು ಸಿನೆಮಾಗಳಲ್ಲಿ ಅವಕಾಶ ತಾನಾಗೆ ಬಂದಿದ್ದು, ಇಂದಿಗೆ ನಟಿ ಸಮಂತಾ ಸಿನೆಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು 11 ವರ್ಷಗಳಾಗಿವೆ.

ಇನ್ನೂ ಸಿನಿಕ್ಷೇತ್ರದಲ್ಲಿ 11 ವರ್ಷ ಪೂರೈಸಿರುವ ಸಮಂತಾ ರವರಿಗೆ ಅಭಿಮಾನಿಗಳಿಂದ ಹಾಗೂ ಗಣ್ಯರಿಂದ ಶುಭಾಷಯಗಳು ಹರಿದು ಬರುತ್ತಿದೆ. ಮುಖ್ಯವಾಗಿ ದಕ್ಷಿಣ ಭಾರತದ ಬಹುಬೇಡಿಕೆ ನಟಿಯರಲ್ಲೊಬ್ಬರಾದ ಕೀರ್ತಿ ಸುರೇಶ್ ಸಮಂತಾ ರವರ ಕಾಮನ್ ಡಿಪಿ ರಿಲೀಸ್ ಮಾಡಿ ಶುಭ ಕೋರಿದ್ದಾರೆ. ೧೧ ವರ್ಷ ಯಶಸ್ವಿ ಪ್ರಯಾಣಕ್ಕೆ ಅಭಿನಂದನೆಗಳು, ನೀವು ಒಬ್ಬರು ಸಾಮಾನ್ಯ ವ್ಯಕ್ತಿಯಾಗಿ, ಕಲಾವಿದೆಯಾಗಿ ಬೆಳೆಯುವುದನ್ನು ಕಾಣುವುದೇ ಒಂದು ರೀತಿಯ ಸಂತೋಷ, ಇನ್ನೂ ನಿಮ್ಮ ಕಲಾ ಸೇವೆ ಮುಂದುವರೆಯಲಿ, ಯಶಸ್ವಿಯಾಗಿರಲಿ ನಿಮ್ಮ ಪಯಣ ಎಂದು ಬರೆದುಕೊಂಡಿದ್ದಾರೆ.

Previous articleಕೆಳಗೆ ಬಿದ್ದ ನಟಿ ಪ್ರಿಯಾ ವಾರಿಯರ್, ವಿಡಿಯೋ ವೈರಲ್!
Next articleಬೆತ್ತಲೆ ಪೊಟೋ ಕೇಳಿದ ನೆಟ್ಟಿಗನಿಗೆ ಶಾಕಿಂಗ್ ಉತ್ತರ ಕೊಟ್ಟ ಶ್ರೀಮುಖಿ!