News

(video)ಸಲಗ ಚಿತ್ರದ ಬಗ್ಗೆ ದುನಿಯಾ ವಿಜಿ, ಡಾಲಿ ಧನಂಜಯ್ ಹಾಗು ಕೋಕ್ಕ್ರೋಚ್ ಏನ್ ಹೇಳಿದ್ದಾರೆ ನೋಡಿ!

salaga-kannada-movie-trailer

ಸಲಗ ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು! ಈ ಚಿತ್ರವನ್ನು ನಮ್ಮ ದುನಿಯಾ ವಿಜಿ ಅವರೇ ನಿರ್ದೇಶನ ಮಾಡುತ್ತಿದ್ದಾರೆ! ಈ ಚಿತ್ರದಲ್ಲಿ ನಮ್ಮ ದುನಿಯಾ ವಿಜಿ ಅವರ ಜೊತೆ ಟಗರು ಖ್ಯಾತಿಯ ಡಾಲಿ ಧನಂಜಯ್ ಅವರು ನಟಿಸುತ್ತಿದ್ದಾರೆ! ನೆನ್ನೆ ಈ ನಮ್ಮ ಬೆಂಗಳೂರಿನಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭದ ಸಮಯದಲ್ಲಿ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಂದಿದ್ದರು. ದುನಿಯಾ ವಿಜಿ ಅವರ ಬಹು ನಿರೀಕ್ಷೆಯ ಚಿತ್ರವಾದ ಸಲಗ ಚಿತ್ರ ತಂಡದಲ್ಲಿ ಡಾಲಿ ಧನಂಜಯ, ಟಗರು ಖ್ಯಾತಿಯ ಕೋಕ್ಕ್ರೋಚ್ ಕೂಡ ನಟಿಸಿದ್ದಾರೆ! ಇವರೆಲ್ಲ ಸಲಗ ಚಿತ್ರದಲ್ಲಿ ತಮ್ಮ ಪಾತ್ರಗಳ ಬಗ್ಗೆ, ತಮ್ಮ ಚಿತ್ರದ ಬಗ್ಗೆ ಏನ್ ಹೇಳಿದ್ದಾರೆ ಈ ಕೆಳಗಿನ ಸಂದರ್ಶನದ ವಿಡಿಯೋ ತಪಪಡೆ ನೋಡಿರಿ
ಕಳೆದ ವರ್ಷ ದುನಿಯಾ ವಿಜಿ ಅವರು ತಮ್ಮ ವಯಕ್ತಿಕ ಕಾರಣ ಗಳಿಂದ ಮೀಡಿಯಾದಲ್ಲಿ ಬಹಳ ದೊಡ್ಡ ಕಾಂಟ್ರೊವರ್ಸಿ ಮಾಡಿಕೊಂಡಿದ್ದರು. ಮೀಡಿಯಾದಲ್ಲಿ ಬಹಳ ದೊಡ್ಡ ಕಾಂಟ್ರೊವರ್ಸಿ ಆದ ವಿಷ್ಯ ಏನಪ್ಪಾ ಅಂದರೆ, ದುನಿಯಾ ವಿಜಿ ಅವರು ಜಿಮ್ trainer ಪಾನಿ ಪುರಿ ಕಿಟ್ಟಿ ಅವರ ತಮ್ಮನ ಮೇಲೆ ಹಲ್ಲೆ ಮಾಡಿದ್ದರು ಎಂದು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದಲ್ಲದೆ ದುನಿಯಾ ವಿಜಿ ಅವರ ಮೊದಲ ಪತ್ನಿ ನಾಗರತ್ನ ಅವರು ಕೂಡ ವಿಜಿ ಮೇಲೆ ಒಂದು ಕೇಸ್ ಹಾಕಿದ್ದರು. ಇದಲ್ಲದೆ ಕಳೆದ ವರ್ಷ ನಾಗರತ್ನ ಅವರು ದುನಿಯಾ ವಿಜಿ ಅವರ ಎರಡನೇ ಪತ್ನಿ ಕೀರ್ತಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ, ಎಂದು ಕೂಡ ಒಂದು ದೊಡ್ಡ ಸುದ್ದಿ ಆಗಿತ್ತು. ಇವೆಲ್ಲ ವಯಕ್ತಿಕ ಕಾರಣಗಳಿಂದ ದುನಿಯಾ ವಿಜಿ ಅವರು ಚಿತ್ರ ರಂಗದಿಂದ ದೂರ ಉಳಿದಿದ್ದರು. ನೆನ್ನೆ ದುನಿಯಾ ವಿಜಿ ಅವರು ತಮ್ಮ ಹುಟ್ಟಿದ ಹಬ್ಬದ ದಿನ ತಮ್ಮ ಸಲಗ ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ್ದರು.
ದುನಿಯಾ ವಿಜಿ ಅವರು ಈ ವರ್ಷ ತಾವೇ ನಿರ್ಮಾಣ ಮಾಡುತ್ತಿರುವ, ಸಲಗ ಚಿತ್ರದಲ್ಲಿ , ತಮ್ಮ ಮಗನ ಕುಸ್ತಿ ಚಿತ್ರದಲ್ಲಿ, ಹಾಗು ಕೋಬ್ರಾ ಎಂಬ ಚಿತ್ರದಲ್ಲಿ ಕೂಡ ಬಹಳ ಬ್ಯುಸಿ ಆಗಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಈ ವರ್ಷ ದುನಿಯಾ ವಿಜಿ ಅವರ ಮೂರು ಚಿತ್ರಗಳು ಬಿಡುಗಡೆ ಆಗಲಿದೆ. ಇದಲ್ಲದೆ ದುನಿಯಾ ವಿಜಿ ಅವರು ಹೇಳುವ ಪ್ರಕಾರ, ಇನ್ನೂ ಮುಂದೆ ತಮ್ಮ ವಯಕ್ತಿಕ ಜೀವನದ ವಿಚಾರಗಳನ್ನು ಮೀಡಿಯಾ ತನಕ ತರುವುದಿಲ್ಲ, ನಾವೇ ಅದನ್ನು ಕೂತು ಪರಿಹರಿಸುತ್ತೇವೆ ಎಂದು ಕೂಡ ಹೇಳಿದ್ದಾರೆ. ದುನಿಯಾ ವಿಜಯ್ ಅವರು ಇಲ್ಲಿಯ ತನಕ ನಾಯಕ ನಟನಾಗಿ ಸುಮಾರು 23 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ ಸಹಕಲಾವಿದರಾಗಿ ಸುಮಾರು 30 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.
ಸಲಗ ಚಿತ್ರದ ಚಿತ್ರೀಕರಣ ಇದೆ ತಿಂಗಳು ಶುರು ಆಗಲಿದೆ. ಚಿತ್ರ ತಂಡವು ಹೇಳುವ ಪ್ರಕಾರ ಸಲಗ ಚಿತ್ರದ ಚಿತ್ರೀಕರಣ ಸುಮಾರು 2 ತಿಂಗಳು ನಡೆಯಲಿದೆ ಎಂದು ಚಿತ್ರ ತಂಡದವರು ಹೇಳಿದ್ದಾರೆ. ಇದಾದ ನಂತರ ದುನಿಯಾ ವಿಜಿ ಅವರ ಮಗನ ಚಿತ್ರವಾದ ಕುಸ್ತಿ ಚಿತ್ರದ ಚಿತ್ರೀಕರಣ ಶುರು ಆಗಲಿದೆ. 2018 ರಲ್ಲಿ ಕುಸ್ತಿ ಚಿತ್ರದ ಟೀಸರ್ ಕೂಡ ಬಿಡುಗಡೆ ಆಗಿ ಸಕತ್ ಸದ್ದು ಮಾಡಿತ್ತು. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top