Film News

ಏಪ್ರಿಲ್ 14 ರಂದು ಸಲಾರ್ ಬಿಡುಗಡೆ!

ಬೆಂಗಳೂರು: ಬಹುನಿರೀಕ್ಷಿತ ಸಲಾರ್ ಚಿತ್ರ ಈಗಾಗಲೇ ದೇಶದ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಮೂಡಿಸಿದ್ದು, ಇದೀಗ ಚಿತ್ರದ ಬಿಡುಗಡೆ ದಿನಾಂಕ ಸಹ ಘೊಷಣೆಯಾಗಿದ್ದು, ಅಭಿಮಾನಿಗಳಿಗೆ ಮತಷ್ಟು ಕುತೂಹಲ ಹೆಚ್ಚುವಂತಾಗಿದೆ.

ಬಾಹುಬಲಿ ಪ್ರಭಾಸ್ ಹಾಗೂ ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಹೊಂಬಾಳೆ ಫಿಲ್ಮಂ ಬ್ಯಾನರ್‌ನಡಿ ತಯಾರಾಗುತ್ತಿರುವ ಸಲಾರ್ ಸಿನೆಮಾ 2022 ನೇ ವರ್ಷದ ಏಪ್ರಿಲ್ 14 ರಂದು ವಿಶ್ವದಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಪ್ಯಾನ್ ಇಂಡಿಯಾದಡಿ ನಿರ್ಮಾಣವಾಗುತ್ತಿರುವ ಸಲಾರ್ ಚಿತ್ರದ ಶೂಟಿಂಗ್ ಕೆಲಸ ಭರದಿಂದ ಸಾಗಿದ್ದು, ಈಗಾಗಲೇ ಮೊದಲನೆ ಹಂತದ ಚಿತ್ರೀಕರಣ ಸಹ ಕಂಪ್ಲೀಟ್ ಆಗಿದೆ.

ಕಳೆದ ಜನವರಿ ಮಾಹೆಯಲ್ಲಿ ಸಲಾರ್ ಚಿತ್ರದ ಮೂಹೂರ್ತ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆದಿತ್ತು. ಬಳಿಕ ಗೋದಾವರಿ ಕಣಿವೆ ಭಾಗದಲ್ಲಿ ಶೂಟಿಂಗ್ ಪ್ರಾರಂಭವಾಗಿತ್ತು. 9 ದಿನಗಳ ಕಾಲ ಶೂಟಿಂಗ್ ನಡೆದಿದ್ದು, ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿರುವ ದಕ್ಷಿಣ ಭಾರತದ ಬಹುಬೇಡಿಕೆ ನಟಿ ಶ್ರುತಿ ಹಾಸನ್ ಸಹ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು.

ಇನ್ನೂ ಈ ಚಿತ್ರದಲ್ಲಿ ಕೆಜಿಎಫ್ ಸಿನೆಮಾದಲ್ಲಿ ಕೆಲಸ ಮಾಡಿದ ತಂತ್ರಜ್ಞರೇ ಕೆಲಸ ಮಾಡುತ್ತಿರುವುದು ವಿಶೇಷವಾಗಿದೆ. ಜೊತೆಗೆ ರವಿ ಬಸ್ರೂರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಮತ್ತೊಂದು ಇಂಟ್ರಸ್ಟಿಂಗ್ ವಿಚಾರವೆಂದರೇ, ಚಿತ್ರದಲ್ಲಿನ ವಿಲನ್ ಪಾತ್ರ. ವಿಲನ್ ಪಾತ್ರಕ್ಕೆ ಕಾಲಿವುಡ್ ನಟ ವಿಜಯ್ ಸೇತುಪತಿ ಹಾಗೂ ಬಾಲಿವುಡ್ ನಟ ಜಾನ್ ಅಬ್ರಾಹಂ ರವರ ಹೆಸರುಗಳು ಮುಂಚೂಣಿಯಲ್ಲಿದೆ ಎನ್ನಲಾಗಿದೆ.

Trending

To Top