Film News

ಶೀಘ್ರದಲ್ಲೇ ಸಲಾರ್ ಶೂಟಿಂಗ್ ಪ್ರಾರಂಭ!

ಹೈದರಾಬಾದ್: ಭಾರತದ ಸಿನಿರಂಗದಲ್ಲಿ ಹೈಪ್ ಕ್ರಿಯೇಟ್ ಮಾಡಿರುವ ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಟಾಲಿವುಡ್ ನಟ ಪ್ರಭಾಸ್ ರವರೊಂದಿಗೆ ಸಲಾರ್ ಚಿತ್ರವನ್ನು ಘೋಷಣೆ ಮಾಡಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ ಎಂಬ ಮಾಹಿತಿ ದೊರೆತಿದೆ.

ಬಾಹುಬಲಿ ಪ್ರಭಾಸ್ ಅಭಿನಯಿಸಲಿರುವ ಸಲಾರ್ ಚಿತ್ರದ ಮೂಹೂರ್ತ ಜ.15 ರಂದು ನಡೆಯಲಿದ್ದು, ಸಿನೆಮಾ ಶೂಟಿಂಗ್ ಸಹ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಹೈದರಾಬಾದ್ ನಲ್ಲಿ ದೊಡ್ಡ ಮಟ್ಟದಲ್ಲಿ ಸಲಾರ್ ಮೂಹೂರ್ತ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಗಣ್ಯರು, ಸ್ಟಾರ್ ನಟ-ನಟಿಯರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಇನ್ನೂ ಕರ್ನಾಟಕದ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಟಾಲಿವುಡ್ ಖ್ಯಾತ ನಿರ್ದೇಶಕ ರಾಜಮೌಳಿ, ಕೆಜಿಎಫ್ ನಟ ಯಶ್ ಸೇರಿದಂತೆ ಅನೇಕ ಅತಿಥಿಗಳ ಸಮ್ಮುಖದಲ್ಲಿ ಸಲಾರ್ ಚಿತ್ರದ ಮೂಹೂರ್ತ ನೆರವೇರಲಿದೆ. ಕೆಜಿಎಫ್ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಪ್ರಶಾಂತ್ ನೀಲ್ ಮೊದಲ ಬಾರಿಗೆ ತೆಲುಗು ಭಾಷೆಯ ಸಲಾರ್ ಚಿತ್ರವನ್ನು ನಿರ್ದೇಶನ ಮಾಡಲಿದ್ದು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಮಾಡುವ ಮೂಲಕ ಪ್ಯಾನ್ ಇಂಡಿಯಾ ಸಿನೆಮಾಗಳ ಪಟ್ಟಿಗೆ ಸೇರಲಿದೆ ಸಲಾರ್.

ಇನ್ನೂ ನಟ ಪ್ರಭಾಸ ಸಲಾರ್ ಚಿತ್ರದ ಕುರಿತಂತೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನಾನು ಸಲಾರ್ ಸಿನೆಮಾ ಶೂಟಿಂಗ್ ನಲ್ಲಿ ಭಾಗಿಯಾಗಲು ಕಾತುರದಿಂದ್ದೇನೆ. ಸಿನೆಮಾದಲ್ಲಿ ನಾನು ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳ ಮುಂದೆ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.

ಇನ್ನೂ ಕೆಜಿಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್ ರವರೇ ಸಲಾರ್ ಚಿತ್ರಕ್ಕೂ ನಿರ್ಮಾಪಕರಾಗಿದ್ದು, ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ನಟಿಸಲಿದ್ದು, ನಾಯಕಿಯಾಗಿ ಕಿಯಾರಾ ಅಡ್ವಾನಿ ನಟಿಸುವುದು ಬಹುತೇಕ ಖಚಿತವಾಗುದೆ ಎನ್ನಲಾಗಿದೆ.

Trending

To Top