Film News

ಅದ್ದೂರಿಯಾಗಿ ನೆರವೇರಿದ ಸಲಾರ್ ಮುಹೂರ್ತ: ಯಶ್-ಪ್ರಭಾಸ್ ಪೊಟೋ ವೈರಲ್

ಹೈದರಾಬಾದ್: ಪ್ಯಾನ್ ಇಂಡಿಯಾದ ಬಹುನಿರೀಕ್ಷಿತ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಲಾರ್ ಚಿತ್ರದ ಮುಹೂರ್ತ ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ನೆರವೇರಿದ್ದು, ಈ ಕಾರ್ಯಕ್ರಮದಲ್ಲಿನ ನಟ ಯಶ್ ಹಾಗೂ ನಟ ಪ್ರಭಾಸ್ ಪೊಟೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದು, ಇದೀಗ ಭಾರತದ ಸಿನಿರಂಗದ ಖ್ಯಾತ ನಿರ್ದೇಶಕರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಇನ್ನೂ ಟಾಲಿವುಡ್ ನಟ ಪ್ರಭಾಸ್ ರವರೊಂದಿಗೆ ಸಲಾರ್ ಚಿತ್ರ ಘೊಷಣೆ ಮಾಡಿದಾಗಿನಿಂದ ಚಿತ್ರದ ಶೂಟಿಂಗ್ ಯಾವಾಗ ಪ್ರಾರಂಭವಾಗಲಿದೆ ಎಂಬ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ದೊರೆತಿದೆ. ಇಂದು ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿದ್ದು, ಶೀಘ್ರದಲ್ಲಿಯೇ ಶೂಟಿಂಗ್ ಸಹ ಪ್ರಾರಂಭವಾಗಲಿದೆ ಎನ್ನಲಾಗಿದೆ.

ಇನ್ನೂ ಸಲಾರ್ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ನಟ ಯಶ್ ಹಾಗೂ ಪ್ರಭಾಸ್ ಜೊತೆಗೆ ತೆಗೆಸಿಕೊಂಡ ಪೊಟೋ ವೈರಲ್ ಆಗುತ್ತಿದೆ. ಸಲಾರ್ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಸಲಾರ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್, ನಟ ಪ್ರಭಾಸ್, ಕೆಜಿಎಫ್ ನಟ ಯಶ್, ಕರ್ನಾಟಕದ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.

ಇನ್ನೂ ಚಿತ್ರದ ಮುಹೂರ್ತ ನೆರವೇರಿದದು, ಜನವರಿ ಮಾಹೆಯ ಅಂತ್ಯದಲ್ಲಿ ಶೂಟಿಂಗ್ ಸಹ ಪ್ರಾರಂಭ ಮಾಡಲಾಗುತ್ತದೆ ಎನ್ನಲಾಗಿದೆ. ಪ್ರಸ್ತುತ ಪ್ರಶಾಂತ್ ನೀಲ್ ಕೆಜಿಎಫ್-೨ ಸಿನೆಮಾದ ಕೊನೆಯ ಹಂತದ ಕೆಲಸಗಳಲ್ಲಿ ನಿರತರಾಗಿದ್ದು, ಪ್ರಭಾಸ್ ನಟನೆ ರಾಧೆ ಶ್ಯಾಮ್ ಶೂಟಿಂಗ್ ಸಹ ಪೂರ್ಣಗೊಂಡಿದೆ. ಇನ್ನೂ ಸಲಾರ್ ಚಿತ್ರದಲ್ಲಿ ಬಾಲಿವುಡ್ ನ ಜಾನ್ ಅಬ್ರಹಾಂ ಖಳನಾಯಕನ ಪಾತ್ರದಲ್ಲಿ, ಪ್ರಮುಖ ಪಾತ್ರವೊಂದರಲ್ಲಿ ಮಲಯಾಳಂ ನಟ ಮೋಹನ್ ಲಾಲ್, ಪ್ರಭಾಸ್ ಗೆ ನಾಯಕಿಯಾಗಿ ದಿಶಾ ಪಟಾಣಿ ಸೇರಿದಂತೆ ಅನೇಕ ಕಲಾವಿದರು ನಟಿಸಲಿದ್ದಾರೆಂಬ ಮಾತುಗಳು ಕೇಳಿಬರುತ್ತಿದ್ದು, ಈ ಕುರಿತು ಚಿತ್ರತಂಡ ಬಹಿರಂಗಗೊಳಿಸಿಲ್ಲ.

Trending

To Top