ಹೈದರಾಬಾದ್: ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲಂ ಬ್ಯಾನರ್ನಡಿ ನಿರ್ಮಾಣವಾಗುತ್ತಿರುವ ಸಲಾರ್ ಚಿತ್ರದ ಮೊದಲನೆ ಹಂತದ ಶೂಟಿಂಗ್ ಮುಕ್ತಾಯವಾಗಿದೆ ಎನ್ನಲಾಗಿದೆ.
ಟಾಲಿವುಡ್ನ ಬಹುನಿರೀಕ್ಷಿತ ಬಾಹುಬಲಿ ಪ್ರಭಾಸ್ ಅಭಿನಯದ ಸಲಾರ್ ಚಿತ್ರ ಜನವರಿ ಮಾಹೆಯ ಕೊನೆಯ ವಾರದಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಇದೀಗ ಮೊದಲ ಹಂತದ ಶೂಟಿಂಗ್ ಕಂಪ್ಲೀಟ್ ಆಗಿದೆಯಂತೆ. ಈ ಕುರಿತು ಸಲಾರ್ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಅವರ ಇನ್ಸ್ಟಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನೂ ಈ ಮೊದಲ ಹಂತದ ಚಿತ್ರೀಕರಣದಲ್ಲಿ ಗೋದಾವರಿ ಕಣಿವೆಯಲ್ಲಿ ೯ ದಿನಗಳ ಕಾಲ ಶೂಟಿಂಗ್ ಕೆಲಸಗಳು ನಡೆದಿದೆ. ಇನ್ನೂ ಈ ಹಂತದಲ್ಲಿ ಪ್ರಭಾಸ್ ರವರ ಕೆಲವೊಂದು ಆಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ಇನ್ನೂ ಇದೇ ಸೆಟ್ನಲ್ಲಿ ಸಲಾರ್ ನಾಯಕಿ ಶೃತಿ ಹಾಸನ್ ಕೂಡ ಭಾಗಿಯಾಗಿದ್ದರು. ಶೃತಿ ಹಾಸನ್ ರವರ ಹುಟ್ಟುಹಬ್ಬದ ದಿನದಂದು ಸಲಾರ್ ಚಿತ್ರಕ್ಕೆ ನಾಯಕಿಯಾಗಿ ಶೃತಿ ಹಾಸನ್ ರವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅಧಿಕೃವಾಗಿ ಚಿತ್ರತಂಡ ಘೋಷಣೆ ಮಾಡಿತ್ತು.
ಅಂದಹಾಗೆ ಕೆಲವರು ಸಲಾರ್ ಚಿತ್ರ ಕನ್ನಡದ ಉಗ್ರಂ ಚಿತ್ರದ ರಿಮೇಕ್ ಎಂದು ಗಾಳಿ ಸುದ್ದಿ ಹಬ್ಬಿಸಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ನಿರ್ದೇಶಕ ಪ್ರಶಾಂತ್ ನೀಲ್ ಪ್ರಭಾಸ್ ರವರಿಗಾಗಿಯೇ ತಯಾರಿಸಿದ ಚಿತ್ರಕಥೆ ಇದಾಗಿದ್ದು ಯಾವುದೇ ಚಿತ್ರದ ರಿಮೇಕ್ ಆಗಲಿ, ಬೇರೆ ಚಿತ್ರದಲ್ಲಿನ ಕಥೆಯಾಗಲಿ ಅಲ್ಲ ಎಂದು ತಿಳಿಸಿದ್ದರು. ಇನ್ನೂ ಈ ಚಿತ್ರದ ಮತ್ತೊಂದು ವಿಶೇಷತೆಯೆಂದರೇ ಈ ಚಿತ್ರದಲ್ಲಿ ಸ್ಪೇಷಲ್ ಸಾಂಗ್ ವೊಂದರಲ್ಲಿ ಬಾಲಿವುಡ್ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ರವರನ್ನು ಕರೆತರಲು ಮಾತುಕತೆ ನಡೆಯುತ್ತಿದೆ ಎನ್ನಲಾಗುತ್ತಿದೆ.
