Film News

ಪವನ್ ಸಿನೆಮಾದಿಂದ ಎಕ್ಸಿಟ್ ಆದ ಸಾಯಿ ಪಲ್ಲವಿ! ಫೇಕ್ ನ್ಯೂಸ್ ಎಂದ ಡೈರೆಕ್ಟರ್…

ಹೈದರಾಬಾದ್: ಟಾಲಿವುಡ್ ಸ್ಟಾರ್ ನಟ ಪವನ್ ಕಲ್ಯಾಣ್ ಅಭಿನಯಿಸುತ್ತಿರುವ ಮಲಯಾಳಂ ಸೂಪರ್ ಹಿಟ್ ಸಿನೆಮಾ ಅಯ್ಯಪ್ಪನುಮ್ ಕೋಷಿಯಂ ಸಿನೆಮಾದ ರಿಮೇಕ್ ನಲ್ಲಿ ಪವನ್ ಗೆ ನಾಯಕಿಯಾಗಿ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಕೆಲವೊಂದು ಕಾರಣಗಳಿಂದ ಸಾಯಿ ಪಲ್ಲವಿ ಚಿತ್ರದಿಂದ ತಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ನಟ ಪವನ್ ಕಲ್ಯಾಣ್ ವಕೀಲ್ ಸಾಭ್ ಚಿತ್ರದ ಮೂಲಕ ರೀಎಂಟ್ರಿ ಆಗುತ್ತಿದ್ದು, ಸರಣಿಯಾಗಿ ಹಲವು ಸಿನೆಮಾಗಳನ್ನು ಒಪ್ಪಿಕೊಂಡಿದ್ದಾರೆ. ಒಂದಾದ ನಂತರ ಒಂದು ಸಿನೆಮಾವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ಮಲಯಾಳಂ ನಲ್ಲಿ ಸೂಪರ್ ಹಿಟ್ ಆದ ಅಯ್ಯಪ್ಪನುಮ್ ಕೋಷಿಯಂ ಎಂಬ ಚಿತ್ರದ ರಿಮೇಕ್ ನಲ್ಲಿ ಪವನ್ ನಟಿಸುತ್ತಿದ್ದು, ಚಿತ್ರೀಕರಣ ಸಹ ಭರದಿಂದ ಸಾಗಿದೆ. ಇನ್ನೂ ಈ ಚಿತ್ರದಲ್ಲಿ ಟಾಲಿವುಡ್ ಸ್ಟಾರ್ ರಾಣಾ ದಗ್ಗುಬಾಟಿ ಸಹ ಬಣ್ಣ ಹಚ್ಚಲಿದ್ದಾರೆ.

ಸಾಗರ್ ಕೆ ಚಂದ್ರ ಸಾರಥ್ಯದಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ತುಂಬಾ ಪ್ರತಿಷ್ಟೆಯಿಂದ ಈ ಸಿನೆಮಾ ನಿರ್ಮಾಣವಾಗುತ್ತಿದೆ. ಇದೀಗ ಈ ಚಿತ್ರದಲ್ಲಿ ನಾಯಕಿಯಾಗಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಆಕೆಗಿರುವು ಬ್ಯುಸಿ ಶೆಡ್ಯೂಲ್ಡ್ ಕಾರಣದಿಂದಾಗಿ ಈ ಪ್ರಾಜೆಕ್ಟ್‌ನಿಂದ ಸಾಯಿಪಲ್ಲವಿ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಮಾದ್ಯಮವೊಂದಕ್ಕೆ ಸ್ಪಷ್ಟನೆ ನೀಡಿರುವ ಸಾಗರ್ ಬಿ ಕೃಷ್ಣ, ಇದೆಲ್ಲಾ ಸುಳ್ಳು ಸುದ್ದಿ. ಸಾಯಿ ಪಲ್ಲವಿ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದಿದ್ದಾರಂತೆ.

ಇನ್ನೂ ಈ ಚಿತ್ರವನ್ನು ಸಿತಾರಾ ಎಂಟರ್‌ಟೈನ್‌ಮೆಂಟ್ ಬ್ಯಾನರನಡಿ ತಯಾರಿಸಲಾಗುತ್ತಿದ್ದು, ಸೂರ್‍ಯದೇವರ ನಾಗವಂಶಿ ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ಜೊತೆಗೆ ಐಶ್ವರ್ಯ ರಾಜೇಶ್ ಎಂಬ ನಟಿ ಸಹ ಬಣ್ಣ ಹಚ್ಚಲಿದ್ದು, ಎಸ್.ಎಸ್.ಥಮನ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.

Trending

To Top