ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್, ಸಿನೆಮಾಗಳಿಗೆ ಗುಡ್ ಬೈ ಹೇಳಲಿದ್ದಾರೆಂಬ ನ್ಯೂಸ್ ವೈರಲ್…!

ಸೌತ್ ಸಿನಿರಂಗದಲ್ಲಿ ಓವರ್‍ ಗ್ಲಾಮರ್‍ ಶೋ ಮಾಡದೇ ಸ್ಟಾರ್‍ ಡಮ್ ಗಿಟ್ಟಿಸಿಕೊಂಡ ನಟಿಯರಲ್ಲಿ ಸಾಯಿ ಪಲ್ಲವಿ ಟಾಪ್ ಸ್ಥಾನದಲ್ಲಿರುತ್ತಾರೆ. ಸ್ಟಾರ್‍ ನಟರಂತೆ ಆಕೆ ಸಹ ಒಳ್ಳೆಯ ಕ್ರೇಜ್ ಪಡೆದುಕೊಂಡಿದ್ದಾರೆ. ಸೌತ್ ನಲ್ಲಿ ಆಕೆಯನ್ನು ಲೇಡಿ ಪವರ್‍ ಸ್ಟಾರ್‍ ಎಂತಲೂ ಸಹ ಕರೆಯುತ್ತಿರುತ್ತಾರೆ. ಇದೀಗ ಆಕೆಯ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದ್ದು, ಅದರಂತೆ ಆಕೆ ಸಿನೆಮಾಗಳಿಗೆ ಗುಡ್ ಬೈ ಹೇಳಲಿದ್ದಾರಂತೆ. ಈ ಸುದ್ದಿ ತಿಳಿದ ಅಭಿಮಾನಿಗಳು ಬೇಸರಗೊಂಡಿದ್ದಾರೆ ಎನ್ನಲಾಗುತ್ತಿದೆ.

ನಟಿ ಸಾಯಿ ಪಲ್ಲವಿ ನಟನೆಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳನ್ನೇ ಹೆಚ್ಚಾಗಿ ಮಾಡುತ್ತಾರೆ. ಆಕೆಯ ಸಿನೆಮಾಗಳು ತುಂಭಾನೆ ವಿಭಿನ್ನವಾಗಿರುತ್ತವೆ. ಆದ ಕಾರಣ ಆಕೆ ತುಂಬಾ ಕಡಿಮೆ ಸಿನೆಮಾಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ವಿಭಿನ್ನವಾದ ಸಿನೆಮಾಗಳ ಮೂಲಕವೇ ದೊಡ್ಡ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡರು. ಆಕೆ ಕೊನೆಯದಾಗಿ ಗಾರ್ಗಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಕಂಡುಕೊಂಡಿಲ್ಲ. ಆದರೆ ಆಕೆಯ ಅಭಿನಯಕ್ಕೆ ಪ್ರೇಕ್ಷಕರಿಂದ ಪುಲ್ ಮಾರ್ಕ್ಸ್‌ ಪಡೆದುಕೊಂಡರು. ಇದೀಗ ಸಾಯಿ ಪಲ್ಲವಿ ಅಭಿಮಾನಿಗಳು ಬೇಸರಗೊಳ್ಳುವಂತಹ ಸುದ್ದಿಯೊಂದು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಆಕೆ ಸಿನೆಮಾಗಳಿಂದ ದೂರ ಉಳಿಯಲಿದ್ದಾರಂತೆ. ಸಾಯಿ ಪಲ್ಲವಿ ಸಿನೆಮಾಗಳಿಗೆ ಗುಡ್ ಬೈ ಹೇಳಲಿದ್ದಾರೆಂಬ ಸುದ್ದಿ ಇದೀಗ ವೈರಲ್ ಆಗುತ್ತಿದೆ.

ಈ ವರ್ಷದಲ್ಲಿ ಸಾಯಿ ಪಲ್ಲವಿ ವಿರಾಟಪರ್ವಂ ಹಾಗೂ ಗಾರ್ಗಿ ಎಂಬ ಸಿನೆಮಾದ ಮೂಲಕ ಕಾಣಿಸಿಕೊಂಡರು. ಈ ಸಿನೆಮಾಗಳ ಬಳಿಕ ಆಕೆ ಯಾವುದೇ ಸಿನೆಮಾಗಳನ್ನು ಒಪ್ಪಿಕೊಂಡಿಲ್ಲ. ಸ್ಟಾರ್‍ ನಟರ ಸಿನೆಮಾಗಳಲ್ಲಿ ಅವಕಾಶಗಳು ಬಂದರೂ ಸಹ ಆಕೆ ಯಾವುದೇ ಸಿನೆಮಾಗೂ ಒಪ್ಪಿಕೊಂಡಿಲ್ಲವಂತೆ. ಈ ಕಾರಣದಿಂದ ಆಕೆ ಸಿನೆಮಾಗಳಿಂದ ದೂರ ಉಳಿಯಲಿದ್ದಾರೆ ಎಂಬ ಸುದ್ದಿ  ಹರಿದಾಡುತ್ತಿದೆ. ಈ ಸುದ್ದಿ ಕೇಳಿದ ಅಭಿಮಾನಿಗಳು ಶಾಕ್ ಆಗುವುದರ ಜೊತೆಗೆ ಬೇಸರ ಸಹ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಈ ಹಿಂದೆಯೂ ಸಹ ಅನೇಕ ಬಾರಿ ಇದೇ ರೀತಿಯ ಸುದ್ದಿಗಳು ಹರಿದಾಡಿತ್ತು. ಸಾಯಿ ಪಲ್ಲವಿಗೆ ಮದುವೆ ಫಿಕ್ಸ್ ಆಗಿದೆ. ಸಿನೆಮಾಗಳಿಂದ ದೂರ ಉಳಿಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು. ಆದರೆ ಈ ಸುದ್ದಿ ಸುಳ್ಳು ಸುದ್ದಿ, ಅಂತಹ ಸುಳ್ಳುಸುದ್ದಿಗಳನ್ನು ನಂಬಬೇಡಿ ಎಂದು ಸಾಯಿ ಪಲ್ಲವಿ ಕ್ಲಾರಿಟಿ ಕೊಟ್ಟರು. ಬಳಿಕ ಈ ಸುದ್ದಿಗಳು ಅಲ್ಲಿಗೆ ನಿಂತು ಹೋಯಿತು.

ಸಾಯಿ ಪಲ್ಲವಿ ನಟಿಯಾಗುವುದಕ್ಕೂ ಮುಂಚೆ ವೈದ್ಯೆಯಾಗಿದ್ದರು. ಇದೀಗ ತಾನು ವೈದ್ಯೆಯಾಗಿ ಕೆಲಸ ಮಾಡಲು ಮುಂದಾಗಿದ್ದಾರಂತೆ. ಡಾಕ್ಟರ್‍ ಆಗಿ ಕೆರಿಯರ್‍ ಸಾಗಿಸುವ ನಿಟ್ಟಿನಲ್ಲಿ ಸಿನೆಮಾಗಳಿಂದ ದೂರ ಉಳಿಯಲಿದ್ದಾರೆ ಎಂಬ ಸುದ್ದಿ ಇದೀಗ ಸಿನಿರಂಗದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ಕೊಯಂಬತ್ತೂರ್‍ ನಲ್ಲೂ ಸಹ ಒಂದು ಆಸ್ಪತ್ರೆಯನ್ನು ಕಟ್ಟಿಸುತ್ತಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಸದ್ಯ ಈ ಸುದ್ದಿ ಎಷ್ಟರ ಮಟ್ಟಿಗೆ ನಿಜವೋ ಸುಳ್ಳೋ ತಿಳಿಯದು ಸಿನಿರಂಗದಲ್ಲಿ ಹಾಟ್ ಟಾಪಿಕ್ ಆಗಿದೆ.

Previous articleಮಾಡ್ರನ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕಿಂಗ್ ಲುಕ್ಸ್ ಕೊಟ್ಟ ತೆಲುಗು ಬ್ಯೂಟಿ ಶೋಭಿತಾ ಧೂಲಿಪಾಳ…..!
Next articleಆರೆಂಜ್ ಡ್ರೆಸ್ ನಲ್ಲಿ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ ಯಂಗ್ ಬ್ಯೂಟಿ ಜಾನ್ವಿ, ವೈರಲ್ ಆದ ಪೊಟೋಸ್….!