ಹೈದರಾಬಾದ್: ದಕ್ಷಿಣ ಭಾರತದ ಸಿನಿರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿಕೊಂಡಿರುವ ನಟಿ ಸಾಯಿಪಲ್ಲವಿ ಲವ್ ಸ್ಟೋರಿ ಸಖತ್ ಸದ್ದು ಮಾಡುತ್ತಿದೆ. ಅಂದಹಾಗೆ ಅದು ಸಾಯಿಪಲ್ಲವಿ ಯವರ ಲವ್ ಸ್ಟೋರಿ ಯಲ್ಲ ಬದಲಿಗೆ ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ಅಭಿನಯದ ಲವ್ ಸ್ಟೋರಿ ಚಿತ್ರದ ಟೀಸರ್ ಸಖತ್ ವೈರಲ್ ಆಗುತ್ತಿದೆ.
ಟಾಲಿವುಡ್ ನ ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಲವ್ ಸ್ಟೋರಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸುಂದರವಾದ ಸರಳ ಪ್ರೇಮಕಥೆಯನ್ನು ಆಧರಿಸಿದ ಚಿತ್ರ ಇದಾಗಿದ್ದು, ಬರಿಗಾಲಿನಲ್ಲಿ ಓಡಿಹೋಗುತ್ತಿರುವ ದೃಶ್ಯ ಟೀಸರ್ ನಲ್ಲಿದೆ.
ನಟಿ ಸಾಯಿ ಪಲ್ಲವಿ ಸಿನೆಮಾ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರ ಗಳಿಸಿದ್ದು, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಸರಳವಾದ ಅವರ ನಡೆ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೀಗ ಶೇಖರ್ ಕಮ್ಮುಲ ರವರ ಎರಡನೇ ಸಿನೆಮಾದಲ್ಲಿ ಸಾಯಿ ಪಲ್ಲವಿ ನಟಿಸಿದ್ದು, ಫಿದಾ ಎಂಬ ಚಿತ್ರದಲ್ಲಿ ಮೊದಲಿಗೆ ನಟಿಸಿದ್ದಾರೆ.
ಇನ್ನೂ ಬಿಡುಗಡೆಯಾದ ಟೀಸರ್ ನಲ್ಲಿ ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ಬರಿ ಕಾಲಿನಲ್ಲಿ ಓಡಿಹೋಗುತ್ತಿರುವ ದೃಶ್ಯವಿದ್ದು, ಇನ್ನೂ ಆಕ್ಷನ್ ದೃಶ್ಯಗಳು ಈ ಚಿತ್ರದಲ್ಲಿ ಇದೇಯೆ ಎಂಬ ಅನುಮಾನ ಸಹ ಹುಟ್ಟಿಹಾಕಿದೆ. ಇನ್ನೂ ಈ ಚಿತ್ರವನ್ನು ಖರೀದಿಸಲು ಅನೇಕ ಒಟಿಟಿ ಸಂಸ್ಥೆಗಳು ಮುಂದಾಗಿದೆ ಆದರೆ ಚಿತ್ರತಂಡ ಮಾತ್ರ ಚಿತ್ರಮಂದಿರಗಳಲ್ಲಿಯೇ ಸಿನೆಮಾ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಅಂತೆ. ಇನ್ನೂ ಸಂಕ್ರಾಂತಿ ಹಬ್ಬದಂದು ಈ ಸಿನೆಮಾ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
