Film News

ಸಾಯಿ ಪಲ್ಲವಿ ಲವ್‌ಸ್ಟೋರಿ ಸಾಂಗ್ ಸೂಪರ್…….

ಹೈದರಾಬಾದ್: ದಕ್ಷಿಣ ಭಾರತದ ಬಹುಬೇಡಿಕೆ ನಟಿ ನ್ಯಾಚುರಲ್ ಬ್ಯೂಟಿ ಎಂತಲೇ ಕರೆಯುವ ನಟಿ ಸಾಯಿ ಪಲ್ಲವಿ. ಇವರ ಅಭಿನಯದ ಲವ್ ಸ್ಟೋರಿ ಚಿತ್ರದ ಎರಡನೇ ಸಾಂಗ್ ಬಿಡುಗಡೆಯಾಗಿದ್ದು ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ನಟಿ ಸಾಯಿ ಪಲ್ಲವಿಗೆ ದಕ್ಷಿಣ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗವೇ ಇದೆ. ಮುಗ್ದತೆಯ ನಟನೆಯಿಂದಲೇ ಸಿನಿರಸಿಕರ ಮನಸ್ಸು ಕದಿಯುತ್ತಾರೆ. ಜೊತೆಗೆ ಸಾಯಿ ಪಲ್ಲವಿ ಚಿತ್ರಗಳನ್ನು ಸಹ ಬೇಗನೆ ಒಪ್ಪಿಕೊಳ್ಳುವುದಿಲ್ಲ, ಕಥೆಯನ್ನು ಅಳೆದು ತೂಗಿ ಒಪ್ಪಿಕೊಳ್ಳುವಂತಹ ವ್ಯಕ್ತಿತ್ವ ಸಾಯಿ ಪಲ್ಲವಿಯವರದ್ದು. ವೈದ್ಯಕೀಯ ಶಿಕ್ಷಣ ಮುಗಿಸಿರುವ ಸಾಯಿ ಪಲ್ಲವಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ನೃತ್ಯದಲ್ಲಿ ಅಷ್ಟೊಂದು ಪರಿಣಿತಿ ಇಲ್ಲದೇ ಇದ್ದರೂ ಕೂಡ ಸೂಪರ್ ಆಗಿ ಡ್ಯಾನ್ಸ್ ಮಾಡುತ್ತಾರೆ.

ಇದೀಗ ಟಾಲಿವುಡ್ ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ಸಾರಥ್ಯದಲ್ಲಿ ಮೂಡಿಬಂದಿರುವ ಲವ್ ಸ್ಟೋರಿ ಚಿತ್ರದಿಂದ ಸರಂಗ ದರಿಯಾ ಎಂಬ ಹಾಡು ಬಿಡುಗಡೆಯಾಗಿದ್ದು, ಯೂಟೂಬ್‌ನಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ. ಈ ಸಾಮಗ್ ಬಿಡುಗಡೆಯಾದ ಎರಡನೇ ದಿನಕ್ಕೆ ಸೂಪರ್ ಹಿಟ್ ಆಗಿದೆ. ಸದ್ಯ ಬಿಡುಗಡೆಯಾಗಿರುವ ಲಿರಿಕಲ್ ಸಾಂಗ್ ನಲ್ಲಿ ಸಾಯಿ ಪಲ್ಲವಿ ಡ್ಯಾನ್ಸ್ ಮಾಡಿರುವ ಕೆಲವೊಂದು ದೃಶ್ಯಗಳನ್ನು ಹಾಕಿದ್ದು ಬಿಡುಗಡೆಯಾದ 72 ಗಂಟೆಗಳಲ್ಲಿ ಸುಮಾರು 14 ಮಿಲಿಯನ್‌ಗೂ ಹೆಚ್ಚಾಗಿ ವೀಕ್ಷಣೆ ಕಂಡಿದೆ.

ಇನ್ನೂ ಈ ಚಿತ್ರದಲ್ಲಿ ನಾಗಚೈತನ್ಯ ನಾಯಕನಾಗಿ ನಟಿಸಿದ್ದು, ಏಪ್ರಿಲ್ 16 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದ್ದು ಟೀಸರ್ ಸಹ ಹೆಚ್ಚಿನ ವೀಕ್ಷಣೆ ಕಂಡಿದೆ.

Trending

To Top