ರಸ್ತೆ ಅಪಘಾತದಲ್ಲಿ ಗಾಯಗೊಂಡ ತೆಲುಗು ನಟ ಸಾಯಿ ಧರಂ ತೇಜ್

ಖ್ಯಾತ ತೆಲುಗು ನಟ ಸಾಯಿ ಧರಂ ತೇಜ್ ಅವರು ನಿನ್ನೆ ರಾತ್ರಿ ರಸ್ತೆ ಅಪಘಾತಕ್ಕೆ ಗುರಿಯಾಗಿದ್ದಾರೆ. ಸಾಯಿ ಧರಂ ತೇಜ್ ಅವರು ಟಾಲಿವುಡ್ ನ ಖ್ಯಾತನಟ ಮೆಗಾಸ್ಟಾರ್ ಚಿರಂಜೀವಿ ಅವರ ತಂಗಿಯ ಮಗ. ನಿನ್ನೆ ಗಣೇಶ ಹಬ್ಬ ಆಗಿದ್ದರಿಂದ ಹೈದರಾಬಾದ್ ನ ಜ್ಯುಬಿಲಿ ಹಿಲ್ಸ್ ರಸ್ತೆಯಲ್ಲಿ ಹೆಚ್ಚಿನ ವಾಹನ ಸಂಚಾರ ಇರಲಿಲ್ಲ.

ಈ ಸಮಯದಲ್ಲಿ ಬೈಕ್ ಓಡಿಸಿ ರೈಡ್ ಹೋಗುತ್ತಿದ್ದ ಸಾಯಿ ಧರಂ ತೇಜ್, ವೇಗವಾಗಿ ಬೈಕ್ ಓಡಿಸಿದ್ದರ ಪರಿಣಾಮ ಬೈಕ್ ಸ್ಕಿಡ್ ಆಗಿ ಬಿದ್ದು, ಆಕ್ಸಿಡೆಂಟ್ ಆಗಿದೆ. ಅವರನ್ನು ಹೈದರಾಬಾದ್ ನ ಅಪೊಲೋ ಆಸ್ಪತ್ರೆಗೆ ಸೇರಿಸಲಾಗಿದೆ. ಯುವನಟನ ಕಣ್ಣು, ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಆದರೆ ಇವರ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಸಾಯಿ ಧರಂ ತೇಜ್ ಅವರ ಬೈಕ್ ಅಪಘಾತ ಆಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗುತ್ತಿವೆ. ರಿಪಬ್ಲಿಕ್, ನುವ್ವು ಲೇನಿ ಜೀವಿತಮ್ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಸಾಯಿ ಧರಂ ತೇಜ್ ಅಭಿನಯಿಸಿದ್ದರು.

Previous articleಅನುಶ್ರೀಗೆ ಟಾಂಗ್ ಕೊಟ್ಟ ಪ್ರಶಾಂತ್ ಸಂಬರ್ಗಿ ಹೇಳಿದ್ದೇನು ನೋಡಿ !
Next articleಮದುವೆಯಾಗಲು ಗ್ರೀನ್ ಸಿಗ್ನಲ್ ಕೊಟ್ಟ ಅನುಪಮಾ ಗೌಡ ! ಹುಡುಗ ಯಾರು ಗೊತ್ತಾ ?