Film News

ಅಕ್ಟೋಬರ್ 13ರಂದು RRR ಸಿನಿಮಾ ಬಿಡುಗಡೆ ಪಕ್ಕಾ!

ಹೈದರಾಬಾದ್: ಟಾಲಿವುಡ್ ಹಿಟ್ ಡೈರೆಕ್ಟರ್ ರಾಜಮೌಳಿ ರವರ ನೇತೃತ್ವದಲ್ಲಿ ಮೂಡಿಬರುತ್ತಿರುವ ಭಾರತದ ಬಹುನಿರೀಕ್ಷಿತ ಆರ್.ಆರ್.ಆರ್. ಚಿತ್ರದ ಬಿಡುಗಡೆ ಕುರಿತಂತೆ ಚಿತ್ರತಂಡವೇ ದಿನಾಂಕ ಘೋಷಣೆ ಮಾಡಿದ್ದು, ಅಭಿಮಾನಿಗಳಿಗಿದ್ದ ಕಾತುರವನ್ನು ಹೆಚ್ಚಿಸಿದೆ.

ಇನ್ನೂ ಆರ್.ಆರ್.ಆರ್ ಸಿನೆಮಾ ಬಿಡುಗಡೆ ಕುರಿತಂತೆ ಚಿತ್ರದ ನಿರ್ದೇಶಕ ರಾಜಮೌಳಿ ಯವರೇ ತಮ್ಮ ಅಧಿಕೃತ ಟ್ವಿಟರ್ ನಲ್ಲಿ ಮಾಹಿತಿ ಬಹಿರಂಗಗೊಳಿಸಿದ್ದಾರೆ. ಅಕ್ಟೋಬರ್ ೧೩ ರಂದು ಆರ್.ಆರ್.ಆರ್. ಚಿತ್ರ ತೆರೆಮೇಲೆ ಬರಲಿದೆ. ಇನ್ನೂ ಈ ಕುರಿತು ಟ್ವೀಟ್ ಮಾಡಿರುವ ರಾಜಮೌಳಿ ಪೊಟೋವೊಂದನ್ನು ಹಂಚಿಕೊಂಡು ’ಅಕ್ಟೋಬರ್ 13, 2021 ರಂದು ಬೆಂಕಿ ನೀರಿನ ತಡೆರಹಿತ ಶಕ್ತಿಗೆ ಸಾಕ್ಷಿಯಾಗಿ’ (Witness the unstoppable force of fire and water on October 13, 2021)ಎಂದು ಬರೆದುಕೊಂಡಿದ್ದಾರೆ.

ಸುಮಾರು 400 ಕೋಟಿ ಬಜೆಟ್ ನಲ್ಲಿ ಈ ಸಿನೆಮಾ ತಯಾರಾಗಿದ್ದು, ತೆಲುಗು ರಾಜ್ಯದ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮರಾಜು ಹಾಗೂ ಕೊಮರಂ ಭೀಮ್ ರವರ ಜೀವನ ಚರಿತ್ರೆಯನ್ನು ಆಧರಿಸಿ ಈ ಸಿನೆಮಾ ಚಿತ್ರೀಕರಣ ಆಗಿದೆ. ಕೊಮರಂ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್.ಟಿ.ಆರ್ ಹಾಗೂ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ರಾಮ್ ಚರಣ್ ತೇಜ್ ಅಭಿನಯಸಿದ್ದಾರೆ.

ಈ ಚಿತ್ರದಲ್ಲಿ ಬಾಲಿವುಡ್ ನ ಆಲಿಯಾ ಭಟ್, ಅಜಯ್ ದೇವಗನ್, ಹಾಲಿವುಡ್‌ನ ಒಲಿವಾ ಮೋರಿಸ್ ಸೇರಿದಂತೆ ಇನ್ನೂ ಹಲವಾರು ಖ್ಯಾತ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಆರ್.ಆರ್.ಆರ್ ಚಿತ್ರವನ್ನು ಡಿವಿವಿ ದಾನಯ್ಯ ನಿರ್ಮಾಣ ಮಾಡಿದ್ದು, ಎಂ.ಎಂ. ಕೀರವಾಣಿ ಸಂಗೀತ ನೀಡಿದ್ದಾರೆ.

Trending

To Top