ಹೈದರಾಬಾದ್: ಬಾಹುಬಲಿ ಚಿತ್ರದ ಮೂಲಕ ಇಡೀ ಜಗತ್ತನ್ನೇ ತೆಲುಗು ಸಿನಿರಂಗದತ್ತ ನೋಡುವಂತೆ ಮಾಡಿದ ನಿರ್ದೇಶಕ ರಾಜಮೌಳಿ ರವರ ಆರ್.ಆರ್.ಆರ್ ಸಿನೆಮಾದಲ್ಲಿ ಅಧಿಕ ಮೊತ್ತವನ್ನು ವಿ.ಎಫ್.ಎಕ್ಸ್ ಎಫೆಕ್ಟ್ ಗಳಿಗಾಗಿ ಖರ್ಚು ಮಾಡಲಿದೆಯಂತೆ.
ಟಾಲಿವುಡ್ ಸ್ಟಾರ್ ನಟರನ್ನೊಳಗೊಂಡ ಆರ್.ಆರ್.ಆರ್. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಆದಷ್ಟೂ ಬೇಗ ಚಿತ್ರೀಕರಣ ಮುಕ್ತಾಯ ಮಾಡಬೇಕೆಂಬ ಕಾತುರದಲ್ಲಿದೆ ಚಿತ್ರತಂಡ. ಚಿತ್ರದ ಶೂಟಿಂಗ್ ಮುಗಿದರೂ ಕೂಡ ಸಿನೆಮಾ ಬಿಡುಗಡೆ ತಡವಾಗಲಿದೆ. ಪೋಸ್ಟ್ ಪ್ರೊಡಕ್ಷನ್ ಪ್ರಕ್ರಿಯೆ ಕಾರಣ ಸಿನೆಮಾ ಬಿಡುಗಡೆ ತಡವಾಗಲಿದೆ ಎನ್ನಲಾಗುತ್ತಿದೆ.
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್.ಆರ್.ಆರ್. ಸಿನೆಮಾ ಶೂಟಿಂಗ್ ಬಹುತೇಕ ಸೆಟ್ ಗಳಲ್ಲಿಯೇ ನಡೆದಿದೆ. ಆದ್ದರಿಂದ ಆಕ್ಷನ್ ದೃಶ್ಯಗಳು ಸೇರಿದಂತೆ ಚಿತ್ರದ ಮುಖ್ಯ ಸನ್ನಿವೇಶಗಳಿಗೆ ವಿ.ಎಫ್.ಎಕ್ಸ್ ಎಫೆಕ್ಟ್ಸ್ ಅತ್ಯವಶ್ಯಕವಾಗಿ ಬೇಕಿದೆ. ಆದ್ದರಿಂದ ಇದಕ್ಕಾಗಿ ಹೆಚ್ಚು ಖರ್ಚಾಗಲಿದೆ ಎನ್ನಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಸಿನೆಮಾದ ಒಟ್ಟು ಬಜೆಟ್ ಸುಮಾರು 400 ಕೋಟಿಯಾಗಿದ್ದು, ಇದರಲ್ಲಿ 150 ಕೋಟಿಗೂ ಹೆಚ್ಚು ಮೊತ್ತ ವಿ.ಎಫ್.ಎಕ್ಸ್. ಎಫೆಕ್ಟ್ಸ್ ಗಳಿಗಾಗಿ ಖರ್ಚಾಗಲಿದೆ ಎಂದು ಹೇಳಲಾಗಿದೆ.
ಇನ್ನೂ ಈ ಚಿತ್ರವನ್ನು ಡಿವಿವಿ ದಾನಯ್ಯ ನಿರ್ಮಾಣ ಮಾಡುತ್ತಿದ್ದು, ರಾಮ್ ಚರಣ್ ತೇಜ, ಜೂನಿಯರ್ ಎನ್.ಟಿ.ಆರ್, ಆಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ದೊಡ್ಡ ದೊಡ್ಡ ನಟರ ತಂಡ ಚಿತ್ರದಲ್ಲಿದೆ.
