ಹೈದರಾಬಾದ್: ಇಡೀ ದೇಶದ ಸಿನಿರಂಗದಲ್ಲೇ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ಆರ್.ಆರ್.ಆರ್ ಸಿನೆಮಾದ ಕ್ಲೈಮ್ಯಾಕ್ಸ್ ನ ಆಕ್ಷನ್ ದೃಶ್ಯಗಳ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇತಿಹಾಸದಲ್ಲಿ ಮರೆಯಾಗದಂಹ ಚಿತ್ರ ಇದಾಗಲಿದೆ ಎಂದು ಹೇಳಲಾಗುತ್ತಿದೆ.
ನಿರ್ದೇಶಕ ರಾಜಮೌಳಿ, ನಟ ರಾಮ್ ಚರಣ್ ತೇಜ ಹಾಗೂ ಜೂನಿಯರ್ ಎನ್.ಟಿ.ಆರ್ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಆರ್.ಆರ್.ಆರ್ ಸಿನೆಮಾ ಈಗಾಗಲೇ ದೊಡ್ಡ ಮಟ್ಟದಲ್ಲಿ ಕ್ರೇಜ್ ಹುಟ್ಟಿಸಿದೆ. ಜೂನಿಯರ್ ಎನ್.ಟಿ.ಆರ್ ಕೊಮರಂ ಭೀಮನಾಗಿ ಹಾಗೂ ರಾಮ್ಚರಣ್ ತೇಜ್ ಅಲ್ಲೂರಿ ಸೀತಾರಾಮರಾಜು ಆಗಿ ಈ ಚಿತ್ರದಲ್ಲಿ ನಟಿಸುತ್ತಿದ್ದು, ರೌದ್ರಂ, ರಣಂ, ರುಧಿರಂ ಎಂಬ ಹೆಸರಿನಲ್ಲಿ ಸಿನಿರಸಿಕರನ್ನು ರಂಜಿಸಲು ತಯಾರಾಗುತ್ತಿದೆ. ಇನ್ನೂ ಈ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳಂತೂ ಇತಿಹಾಸದಲ್ಲಿ ಮುದ್ರೆ ಹಾಕಲಿದೆ ಎನ್ನಲಾಗುತ್ತಿದೆ.
ಇನ್ನೂ ಇತ್ತೀಚಿಗಷ್ಟೆ ಆರ್.ಆರ್.ಆರ್ ಸಿನೆಮಾದ ಇಬ್ಬರೂ ಹಿರೋಗಳಾದ ಎನ್.ಟಿ.ಆರ್ ಹಾಗೂ ರಾಮ್ಚರಣ್ ಇಬ್ಬರೂ ಶೂಟಿಂಗ್ ಲೊಕೇಷನ್ ನಲ್ಲಿ ಹರಟೆ ಹೊಡೆಯುತ್ತಿರುವ ಪೊಟೋಗಳನ್ನು ಶೇರ್ ಮಾಡಿದ್ದಾರೆ. ಈ ಇಬ್ಬರೂ ನಟರು ಇರುವಂತಹ ಪೊಟೋಗಳು ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದು, ಇಬ್ಬರೂ ಏನು ಮಾತಾಡುತ್ತಿದ್ದಾರೆ ಎಂದು ವಿವರಣೆ ನೀಡಿದ ಎಂದು ಅನೇಕ ಅಭಿಮಾನಿಗಳು ಕಾಮೆಂಟ್ಗಳನ್ನು ಸಹ ಮಾಡುತ್ತಿದ್ದಾರೆ.
ಇಡೀ ಭಾರತ ದೇಶದಲ್ಲೇ ಬಿಗೆಸ್ಟ್ ಪಾನ್ ಇಂಡಿಯಾ ಸಿನೆಮಾ ಆಗಿ ಸಿದ್ದವಾಗುತ್ತಿರುವ ಸಿನೆಮಾ ಅಂದರೇ ಆರ್.ಆರ್.ಆರ್. ಈಗಾಗಲೇ ಸಿನೆಮಾ ಬಿಡುಗಡೆ ದಿನಾಂಕವನ್ನು ಸಹ ಚಿತ್ರತಂಡ ಘೋಷಣೆ ಮಾಡಿದ್ದು, ಅಕ್ಟೋಬರ್ 13 ರಂದು ವಿಶ್ವದಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಇನ್ನೂ ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಬಣ್ಣ ಹಚ್ಚಿರೋದು ಮತ್ತೊಂದು ವಿಶೇಷ.
