Film News

ಕ್ಲೈಮ್ಯಾಕ್ಸ್ ಚಿತ್ರೀಕರಣದತ್ತ RRR ಸಿನಿಮಾ: ನಿರ್ದೇಶಕ ರಾಜಮೌಳಿ ಟ್ವೀಟ್

ಹೈದರಾಬಾದ್: ಮೋಸ್ಟ್ ಸಕ್ಸಸ್‌ಫುಲ್ ಡೈರೆಕ್ಟರ್ ಎಂದೇ ಕರೆಯಲಾಗುವ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಆರ್.ಆರ್.ಆರ್ ಚಿತ್ರ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಈ ಕುರಿತು ರಾಜಮೌಳಿಯವರೇ ಸ್ವತಃ ಟ್ವೀಟ್ ಮಾಡಿ ಕ್ಲೈಮ್ಯಾಕ್ಸ್ ಶೂಟಿಂಗ್ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

ಇಡೀ ಭಾರತದ ಸಿನಿರಂಗದಲ್ಲಿ ಬಹುನಿರೀಕ್ಷಿತ ಸಿನೆಮಾಗಳಲ್ಲಿ ಒಂದಾದ ಆರ್.ಆರ್.ಆರ್ ಚಿತ್ರ ಕೊರೋನಾ ಹಿನ್ನೆಲೆಯಲ್ಲಿ ತಡವಾಗಿ ಆರಂಭವಾಗಿತ್ತು. ನಂತರ ಶೂಟಿಂಗ್ ಪ್ರಾರಂಭವಾಗಿದ್ದು, ಶೀಘ್ರವೇ ಶೂಟಿಂಗ್ ಸಹ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಇನ್ನೂ ರಾಜಮೌಳಿಯವರು ಕ್ಲೈಮ್ಯಾಕ್ಸ್ ಹಂತದ ಶೂಟಿಂಗ್ ಗೆ ಸಂಬಂಧಿಸಿದಂತೆ ಚಿತ್ರವೊಂದನ್ನು ಸಹ ಶೇರ್ ಮಾಡಿ ಶೀಘ್ರದಲ್ಲೇ ತೆರೆ ಮೇಲೆ ಬರುವುದಾಗಿ ಹಿಂಟ್ ನೀಡಿದ್ದಾರೆ.

ಇನ್ನೂ ರಾಜಮೌಳಿ ಟ್ವಿಟರ್ ನಲ್ಲಿ ಶೇರ್ ಮಾಡಿದ ಚಿತ್ರದಲ್ಲಿ ಗಾಯಗೊಂಡಿರುವ0ತಹ ಎರಡು ಕೈಗಳು ಹಿಡಿದುಕೊಂಡು ಒಂದಕ್ಕೊಂದು ಬೆಂಬಲ ನೀಡುವಂತಿದೆ. ಇದು ನಟ ರಾಮಚರಣ್ ತೇಜ್ ಹಾಗೂ ಜೂನಿಯರ್ ಎನ್.ಟಿ.ಆರ್ ರವರ ಕೈಗಳು ಎಂದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಏನನ್ನು ಸಾಧಿಸಬೇಕು ಎಂದುಕೊಂಡಿದ್ದೇನೋ ಅದನ್ನು ನನ್ನ ರಾಮರಾಜು ಮತ್ತು ಭೀಮ್ ಸಾಧಿಸಲು ಒಟ್ಟಿಗೆ ಸೇರಿದ್ದಾರೆ ಎಂದು ಸಹ ಪೊಟೋಗೆ ಕ್ಯಾಪ್ಷನ್ ಸಹ ನೀಡಿದ್ದಾರೆ. ಇನ್ನೂ ಈ ಚಿತ್ರ ಸಖತ್ ವೈರಲ್ ಆಗುತ್ತಿದ್ದು, ಚಿತ್ರದ ಬಿಡುಗಡೆ ಯಾವಾಗ ಎಂಬ ಪ್ರಶ್ನೇಯೂ ಸೇರಿದಂತೆ ಅನೇಕ ಪ್ರಶ್ನೆಗಳನ್ನು ಕಾಮೆಂಟ್‌ಗಳ ಮೂಲಕ ಕೇಳುತ್ತಿದ್ದಾರೆ.

ಇನ್ನೂ ಈ ಚಿತ್ರದಲ್ಲಿ ರಾಮ್ ಚರಣ್ ತೇಜ್ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ, ಜೂನಿಯರ್ ಎನ್.ಟಿ.ಆರ್ ಕೊಮರಂ ಭೀಮ್ ಪಾತ್ರದಲ್ಲಿ, ಬಾಲಿವುಡ್ ನಟಿ ಆಲಿಯಾ ಭಟ್ ಸೀತಾ ಪಾತ್ರದಲ್ಲಿ ನಟಿಸುತ್ತಿದ್ದು, ಅಜಯ್ ದೇವಗನ್, ವಿದೇಶಿ ನಟಿ ಒಲಿವಿಯಾ, ರೇಯ್ ಸ್ಟಿವನ್ಸನ್ ಸೇರಿದಂತೆ ಹಲವು ಖ್ಯಾತ ಕಲಾವಿದರು ಬಣ್ಣ ಹಚ್ಚಿದ್ದಾರೆ.

Trending

To Top