Film News

ಆರ್.ಆರ್.ಆರ್ ಸಿನೆಮಾದ ಮತ್ತೊರ್ವ ನಾಯಕಿ ಪೋಸ್ಟರ್ ರಿವೀಲ್!

ಹೈದರಾಬಾದ್: ಈಗಾಗಲೇ ಟಾಲಿವುಡ್ ಸೇರಿದಂತೆ ದೇಶವ್ಯಾಪಿ ಭರ್ಜರಿಯಾಗಿ ಹೈಪ್ ಕ್ರಿಯೇಟ್ ಮಾಡಿರುವ ಆರ್.ಆರ್.ಆರ್ ಸಿನೆಮಾದ ಮತ್ತೊರ್ವ ನಾಯಕಿ ಪೋಸ್ಟರ್ ರಿವೀಲ್ ಆಗಿದೆ. ಚಿತ್ರದ ನಾಯಕ ಜೂನಿಯರ್ ಎನ್.ಟಿ.ಆರ್ ಪ್ರೇಯಸಿ ಪಾತ್ರದಲ್ಲಿ ಬಣ್ಣ ಹಚ್ಚಿರುವ ಹಾಲಿವುಡ್ ನಟಿ ಒಲಿವಿಯಾ ಮೋರಿಸ್ ಪೋಸ್ಟರ್ ಬಿಡುಗಡೆಯಾಗಿದೆ.

ಸುಮಾರು ೨ ವರ್ಷಗಳಿಂದ ಆರ್.ಆರ್.ಆರ್ ಸಿನೆಮಾ ಶೂಟಿಂಗ್ ಕೆಲಸ ನಡೆದಿದ್ದು, ರಾಜಮೌಳಿ ನಿರ್ದೇಶನದಲ್ಲಿ ದೊಡ್ಡ ಮಟ್ಟದಲ್ಲಿ ಈ ಚಿತ್ರ ತಯಾರಾಗಿದೆ. ಈ ಚಿತ್ರದಲ್ಲಿ ಮೆಗಾ ಫ್ಯಾಮಿಲಿಯ ರಾಮ್ ಚರಣ್ ತೇಜ್, ಎನ್.ಟಿ.ಆರ್. ಫ್ಯಾಮಿಲಿಯ ಜೂನಿಯರ್ ಎನ್.ಟಿ.ಆರ್ ನಾಯಕರಾಗಿ ನಟಿಸುತ್ತಿದ್ದು, ಹಾಲಿವುಡ್, ಬಾಲಿವುಡ್ ನ ಖ್ಯಾತ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಈ ಭಾಗವಾಗಿಯೇ ಜೂನಿಯರ್ ಎನ್.ಟಿ.ಆರ್ ಗೆ ಜೋಡಿಯಾಗಿ ನಟಿಸಿರುವ ಹಾಲಿವುಡ್ ನಟಿ ಒಲಿವಿಯಾ ಮೋರಿಸ್ ರವರ ಫಸ್ಟ್ ಲುಕ್ ರಿವೀಲ್ ಮಾಡಿದೆ ಚಿತ್ರತಂಡ.

ತೆಲುಗು ರಾಜ್ಯದಲ್ಲಿ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಹಾಗೂ ಕೊಮರಂ ಭೀಂ ಎಂಬುವವರ ಚರಿತ್ರೆಯನ್ನು ಆಧಾರವಾಗಿಟ್ಟುಕೊಂಡು ಆರ್.ಆರ್.ಆರ್ ಚಿತ್ರ ನಿರ್ಮಾಣವಾಗಿದೆ. ಇನ್ನೂ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ರಾಮ್ ಚರಣ್ ತೇಜ್ ಹಾಗೂ ಜೂನಿಯರ್ ಎನ್.ಟಿ.ಆರ್ ಕೊಮರಂ ಭೀಂ ಪಾತ್ರದಲ್ಲಿ ಅಭಿನಯಸಿದ್ದಾರೆ.

ಈಗಾಗಲೇ ಆರ್.ಆರ್.ಆರ್ ಸಿನೆಮಾ ಅ.13, 2021 ರಂದು ಬಿಡುಗಡೆಯಾಗಲಿದೆ. ಇನ್ನೂ ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ಇಂದು ಹಾಲಿವುಡ್ ನಟಿ ಒಲಿವಿಯಾ ಮೋರಿಸ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅವರ ಹುಟ್ಟುಹಬ್ಬದಂದು ಆರ್.ಆರ್.ಆರ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಆರ್.ಆರ್.ಆರ್ ಚಿತ್ರತಂಡ ಬಿಗ್‌ಗಿಫ್ಟ್ ನೀಡಿದೆ. ಇನ್ನೂ ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Trending

To Top