Film News

ಅಕ್ಟೋಬರ್ 8 ರಂದು RRR ಸಿನೆಮಾ ರಿಲೀಸ್ ಆಗೋದು ಪಕ್ಕಾನಾ?

ಹೈದರಾಬಾದ್: ಟಾಲಿವುಡ್ ನ ಬಹುನಿರೀಕ್ಷಿತ ಚಿತ್ರ ಆರ್.ಆರ್.ಆರ್ ಚಿತ್ರ ಅಕ್ಟೋಬರ್ ಮಾಹೆಯಲ್ಲಿ ರಿಲೀಸ್ ಆಗಲಿದೆ ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರಂತೆ. ಆದರೆ ಇದು ಅಧಿಕೃತವಾಗಿ ಚಿತ್ರತಂಡದಿಂದ ಹೊರಬಂದಿಲ್ಲ.

ಅಂದಹಾಗೆ ಆರ್.ಆರ್.ಆರ್ ಚಿತ್ರ ಈಗಾಗಲೇ ಸಿನಿರಂಗದಲ್ಲಿ ದೊಡ್ಡ ಮಟ್ಟದಲ್ಲಿ ಟ್ರೆಂಡಿಂಗ್ ಕ್ರಿಯೇಟ್ ಮಾಡಿದ್ದು, ಮೆಗಾ ನಟರು ಈ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಸುಮಾರು 3 ವರ್ಷಗಳಿಂದ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಇನ್ನೆನೂ ಕ್ಲೈಮ್ಯಾಕ್ಸ್ ಹಂತದ ಶೂಟಿಂಗ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆಯಂತೆ. ಇದೀಗ ವೈರಲ್ ಆಗುತ್ತಿರುವ ಸುದ್ದಿಯನ್ನು ತಿಳಿಸಿದ್ದು ಚಿತ್ರತಂಡವಲ್ಲ ಬದಲಿಗೆ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವ ಹಾಲಿವುಡ್ ನಟಿ ಅಲಿಸನ್ ಡೂಡಿ ಅವರ ಸಾಮಾಜಿಕ ಜಾಲತಾಣದಲ್ಲಿ ಆರ್.ಆರ್.ಆರ್. ಚಿತ್ರ ಅಕ್ಟೋಬರ್ 8 ರಂದು ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಶೇರ್ ಮಾಡಿದ್ದರು. ಆದರೆ ಈ ಸುದ್ದಿಯನ್ನು ನಟಿ ಅಚಾನಕ್ ಆಗಿ ಶೇರ್ ಮಾಡಿಬಿಟ್ಟಿದ್ದು, ಈ ಪೋಸ್ಟ್ ದೊಡ್ಡ ಮಟ್ಟದಲ್ಲೇ ವೈರಲ್ ಆಗುತ್ತಿದ್ದಂತೆ ಅಲಿಸನ್ ಡೂಡಿ ಈ ಪೋಸ್ಟ್ ಅನ್ನು ಡಿಲೀಟ್ ಮಾಡಿಬಿಟ್ಟಿದ್ದಾರಂತೆ. ಆದರೆ ಆರ್.ಆರ್.ಆರ್ ಚಿತ್ರದ ಅಭಿಮಾನಿಗಳು ಮಾತ್ರ ಇದೇ ದಿನಾಂಕದಂದೇ ಚಿತ್ರ ಬಿಡುಗಡೆಯಾಗಲಿದೆ ಎಂಬ ಹುಮ್ಮಸ್ಸಿನಲ್ಲಿದ್ದಾರಂತೆ.

ನಿರ್ದೇಶಕ ರಾಜಮೌಳಿ ಯವರೇ ಇತ್ತೀಚಿಗೆ ಆರ್.ಆರ್.ಆರ್ ಸಿನೆಮಾದ ಶೂಟಿಂಗ್ ಕ್ಲೈಮ್ಯಾಕ್ಸ್ ಹಂತಕ್ಕೆ ಸೇರಿದೆ ಎಂದು ಪೊಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಇನ್ನೂ ಈ ಚಿತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದ ಕಲಾವಿದರು ನಟನೆ ಮಾಡುತ್ತಿದ್ದಾರೆ.

Trending

To Top