gossip

‘RRR’ ಚಿತ್ರತಂಡದಿಂದ ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಕಾದಿದೆ ಗುಡ್ ನ್ಯೂಸ್.?

ಬಾಹುಬಲಿ ಸಿನಿಮಾದ ನಂತರ ನಿರ್ದೇಶಕ ರಾಜಮೌಳಿ ಅವರು ಆರ್ ಆರ್ ಆರ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಚಿತ್ರದಲ್ಲಿ ನಾಯಕರಾಗಿ ತೆಲುಗು ಸ್ಟಾರ್ ನಟರಾದ ಜೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ನಟಿಸುತ್ತಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

ಸದ್ಯ ಚಿತ್ರತಂಡದಿಂದ ಹೊಸ ಸುದ್ದಿಯೊಂದು ಹೊರ ಬಿದ್ದಿದ್ದು, ಜನವರಿ 1 ರಂದು ರಾಜಮೌಳಿ, ಆರ್ ಆರ್ ಆರ್ ಸಿನಿಮಾದ ಫಸ್ಟ್ ಪೋಸ್ಟರ್ ರಿಲೀಸ್ ಮಾಡಲಿದ್ದಾರಂತೆ, ಮೂಲಗಳ ಪ್ರಕಾರ ರಾಮಚರಣ್ ಹಾಗೂ ಎನ್ ಸಿ ಆರ್ ಇಬ್ಬರು ಇರುವ ಪೋಸ್ಟರ್ ಬಿಡುಗಡೆ ಮಾಡುತ್ತಾರೆ ಎನ್ನಲಾಗುತ್ತಿದೆ.

ಫಸ್ಟ್ ಪೋಸ್ಟರ್ ಮೇಲೆ ಸಿನಿರಸಿಕರು ಸಿಕ್ಕಾಪಟ್ಟೆ ಕ್ಯುರಿಯಾಸಿಟಿ ಇಟ್ಟುಕೊಂಡಿದ್ದು, ರಾಮ್ ಚರಣ್ ಹಾಗೂ ಎನ್ ಟಿ ಆರ್ ಇಬ್ಬರು ಇರುವ ಪೋಸ್ಟರ್ ಬಿಡುಗಡೆ ಮಾಡುತ್ತಾರೆ ಎನ್ನಲಾಗಿದೆ.

ನಾಯಕಿಯಾಗಿ ಆಲಿಯಾ ಭಟ್ ಮತ್ತು ವಿದೇಶಿ ನಟಿಯೊಬ್ಬಳು ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಾಲಿವುಡ್ ನಟ ಅಜೇಯ್ ದೇವಗನ್ ಸಹ ವಿಶೇಷ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ.

Trending

To Top