News

ದಕ್ಷ ಅಧಿಕಾರಿ ಶ್ರೀಮತಿ ರೋಹಿಣಿ ಸಿಂಧೂರಿ ಬಗ್ಗೆ ಮಾತನಾಡಿದ ನಟಿ ರಮ್ಯಾ

ಸದ್ಯಕ್ಕೆ ರಾಜ್ಯದಲ್ಲಿ ಸುದ್ದಿಯಲ್ಲಿರುವುದು ರೋಹಿಣಿ ಸಿಂದೂರಿ ಅವರ ವರ್ಗಾವಣೆ ವಿಚಾರ.ರೋಹಿಣಿ ಸಿಂದೂರಿ ಅವರನ್ನ ನೋಡಿದರೆ ಒಬ್ಬ ಅಧಿಕಾರಿ ಎಂದರೆ ಹೀಗೆ ಇರಬೇಕು ಎನಿಸುತ್ತದೆ. ಸಿಂಧೂರಿ ಅವರ ಖಡಕ್ ಮಾತು, ಅಭಿವೃದ್ಧಿ ಕೆಲಸ ಸಾಕಷ್ಟು ಜನರಿಗೆ ಪ್ರೇರಣೆಯಾಗಿದೆ.ಇಂತಹ ದಿಟ್ಟ ಐ.ಎ.ಎಸ್ ಅಧಿಕಾರಿಯ ಸ್ಟೋರಿ ತೆರೆ ಮೇಲೆ ಬರೋಕೆ ರೆಡಿಯಾಗಿದೆ.

ಇತ್ತೀಚೆಗಷ್ಟೇ ರಾಜಕೀಯ ನನ್ನ ಮುಗಿದು ಹೋದ ಪ್ರಯಾಣ ಎಂದು ಸುದ್ದಿಯಾಗಿದ್ದ ನಟಿ ಮಾಜಿ ಸಂಸದೆ ರಮ್ಯಾ ಇದೀಗ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂದೂರಿ ಅವರ ವರ್ಗಾವಣೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಕಾತೆಯಲ್ಲಿ ಬರೆದುಕೊಂಡಿರುವ ರಮ್ಯಾ..

“ರೋಹಿಣಿ ಸಿಂದೂರಿ ಅವರ ಕಾರ್ಯ ವೈಕರ್ಯೆಯನ್ನು ನಾನು ಅಂದಿನಿಂದಲೂ ಮೆಚ್ಚಿದ್ದೇನೆ, ಈಗಲೂ ಮೆಚ್ಚಿಕೊಳ್ಳುತ್ತೀನೆ, ಆದರೆ ಇಂದಿನ ರಾಜಕೀಯ ಕೆಲಸಗಳನ್ನು ಮಾಡುತ್ತಿರುವ ಪ್ರಾಮಾಣಿಕ ಅಧಿಕಾರಿಗಳನ್ನ, ಪ್ರೋತ್ಸಾಹಿಸುತ್ತಿಲ್ಲ ಮತ್ತು ಬೆಂಬಲಿಸುತ್ತಿಲ್ಲ ಎನ್ನುವ ನಿರಾಶೆ ಇದೆ..” ಎಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

 

Trending

To Top