News

(video)ಕನ್ನಡಾನ ಬಿಟ್ಟು ಹೋಗ್ತೀರಾ ಎಂದು ಕೇಳಿದ್ದಕ್ಕೆ ರಾಕಿ bhai ಸಕತ್ ಡೈಲಾಗ್ ಕೇಳಿ! ವಿಡಿಯೋ ವೈರಲ್

yash-kannada

ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ ಕನ್ನಡ ಸಿನಿಮಾ ರಂಗದ ಎಲ್ಲಾ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡಿದೆ. ಇಡೀ ಭಾರತವೇ ಕನ್ನಡದ ಕಡೆಗೆ, ಕನ್ನಡ ಚಿತ್ರ ರಂಗದ ಕಡೆಗೆ, ಕನ್ನಡ ನಟರ ಕಡೆಗೆ ಮುಖ ಮಾಡಿದ್ದಾರೆ. ಇದೆಲ್ಲಾ ಸಾಧ್ಯ ವಾಗಿದ್ದು ನಮ್ಮ ಕನ್ನಡದ ಹೆಮ್ಮೆಯ KGF ಚಿತ್ರ ತಂಡ ದಿಂದ. ಸದ್ಯ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು KGF ಚಿತ್ರದ ನಂತರ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಬಲ್ಲ ಮೂಲಗಳ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಈಗಾಗಲೇ, ತೆಲುಗು, ತಮಿಳು ಹಾಗು ಬಾಲಿವುಡ್ ಇಂದ ಬುಲಾವ್ ಬಂದಿದೆ. ಇದರ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಕೇಳಿದಾಗ, ನಾನು ಕನ್ನಡ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಅವರ ಖಡಕ್ ಡೈಲಾಗ್ ಒಮ್ಮೆ ನೀವೇ ಕೇಳಿ, ಈ ಕೆಳಗಿನ ವಿಡಿಯೋ ನೋಡಿ
KGF ಚಿತ್ರ ಇಡೀ ದೇಶದಲ್ಲಿ ಭರ್ಜರಿ ಆಗಿ ಸದ್ದು ಮಾಡುತ್ತಿದೆ. ಎಷ್ಟರ ಮಟ್ಟಿಗೆ KGF ಚಿತ್ರ ಸದ್ದು ಮಾಡುತ್ತಿದೆ ಎಂದರೆ ಬಾಲಿವುಡ್ ನ ಜೀರೋ ಚಿತ್ರ, ತಮಿಳಿನ ಮಾರಿ ಚಿತ್ರ ಗಿಂತ KGF ಚಿತ್ರಕ್ಕೆ ಜನ ಕ್ಯೂ ನಲ್ಲಿ ನಿಂತು ನೋಡುತ್ತಿದ್ದಾರೆ. ಇದಲ್ಲೆ ನಮ್ಮ ಕನ್ನಡ ಸೂಪರ್ ಸ್ಟಾರ್ ಯಶ್ ಅವರು ಈಗ ನ್ಯಾಷನಲ್ ಸ್ಟಾರ್ ಆಗಿದ್ದಾರೆ. KGF ಚಿತ್ರದ ಮೂಲಕ ಕನ್ನಡದ ಮಾರ್ಕೆಟ್ ಅನ್ನು ಇಡೀ ದೇಶಕ್ಕೆ ಹೆಚ್ಚಿಸಿದ್ದಾರೆ. ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರದಲ್ಲಿ ಸುಮಾರು 1000 ಕ್ಕೂ ಹೆಚ್ಚು ಜನ ಜೂನಿಯರ್ ಆರ್ಟಿಸ್ಟ್ ಗಳು ಕೆಲಸ ಮಾಡಿದ್ದಾರೆ. ಜೂನಿಯರ್ ಆರ್ಟಿಸ್ಟ್ ಗಳ ಬಗ್ಗೆ ಏನ್ ಹೇಳಿದ್ದಾರೆ ನೋಡಿ, ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ KGF ಚಿತ್ರ ಇಡೀ ದೇಶದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. KGF ಚಿತ್ರ ತಂಡ ಹಾಗು ಪ್ರತಿಯೊಬ್ಬ ಕನ್ನಡಿಗರು ಇದ್ದರಿಂದ ಫುಲ್ ಖುಷ್ ಆಗಿದ್ದಾರೆ. ಕನ್ನಡದ ಹೆಮೆಯ ಚಿತ್ರ KGF ಕನ್ನಡ ಅಲ್ಲದೆ, ತೆಲುಗು, ತಮಿಳು , ಹಿಂದಿ ಹಾಗು ಮಲಯಾಳಂ ಭಾಷೆಯಲ್ಲಿ ಕೂಡ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇವತ್ತು KGF ಚಿತ್ರ ತಂಡ (ಪ್ರಶಾಂತ್ ನೀಲ್, ರಾಕಿಂಗ್ ಸ್ಟಾರ್ ಯಶ್, ಭುವನ್ ಗೌಡ, ಶ್ರೀನಿಧಿ ಶೆಟ್ಟಿ, ಹಾಗು ಮತ್ತಿತರು) KGF ಚಿತ್ರದ ವಿಜಯ ಯಾತ್ರೆಯನ್ನು ಶುರು ಮಾಡಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ. ಈ ಕೆಳಗಿನ ವಿಡಿಯೋ ನೋಡಲೇಬೇಕು ಹಾಗು ಶೇರ್ ಮಾಡಲೇಬೇಕು
ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ ವಿಶ್ವ ದಾದ್ಯಂತ ಬಿಡುಗಡೆ ಆಗಿದೆ. KGF ಚಿತ್ರಕ್ಕೆ ಇಡೀ ದೇಶವೇ ಫಿದಾ ಆಗಿದ್ದಾರೆ. ನೆನ್ನೆ ಕೆಲವು ಹುಚ್ಚರು KGF ಚಿತ್ರದ ಬಿಡುಗಡೆ ಮಾಡಬೇಡಿ ಅದು ರೌಡಿ ತಂಗಂ ಕಥೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದರೆ ಇವತ್ತು ಸಿನಿಮಾ ನೋಡಿದ ಮೇಲೆ ಗೊತ್ತಾದ ವಿಷ್ಯ ಏನಪ್ಪಾ ಅಂದರೆ KGF ಚಿತ್ರದ ಕಥೆಗೂ ರೌಡಿ ತಂಗಂ ಗು ಯಾವ ಸಂಬಂಧ ಇಲ್ಲ ಕಣ್ರೀ! KGF ಚಿತ್ರ ನಿಜಕ್ಕೂ ಒಂದು ಮಾಸ್ಟರ್ ಪೀಸ್ ಕಣ್ರೀ! ಪ್ರತಿಯೊಬ್ಬ ಕನ್ನಡಿಗನು ನೋಡಲೇಬೇಕಾದ ಚಿತ್ರ. KGF ಚಿತ್ರ ಬಿಡುಗಡೆ ಆಗಿ ಎಲ್ಲಾ ದಾಖಲೆಗಳನ್ನು ಧೂಳೆಬ್ಬಿಸಿದೆ.
KGF ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಬಗ್ಗೆ ಎರಡು ಮಾತೆ ಇಲ್ಲ ಕಣ್ರೀ! ರಾಕಿ bhai ಯಶ್ ಅವರು KGF ಚಿತ್ರದ ರಾಕಿ ಪಾತ್ರಕ್ಕೆ ನ್ಯವ ಒದಗಿಸಿದ್ದಾರೆ. ಯಶ್ ಅವರ ಅಭಿನಯಕ್ಕೆ, ಅವರ ಶ್ರಮಕ್ಕೆ, ಅವರ ಟ್ಯಾಲೆಂಟಿಗೆ, ನಮ್ಮ ಕಡೆ ಇಂದ ಒಂದು ಸಲಾಂ! ಇದಲ್ಲದೆ ಅನಂತ್ ನಾಗ್ ಅವರು ಕೂಡ ಒಂದು ಮುಖ್ಯ ಪಾತ್ರವನ್ನು ಮಾಡಿದ್ದಾರೆ. ಅಚ್ಯುತ್ ಕುಮಾರ್ ಅವರು ಕೂಡ ಒಂದು ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. KGF ಚಿತ್ರದ ಹೆರೋಯಿನ್ ಆದ ಶ್ರೀನಿಧಿ ಶೆಟ್ಟಿ ಅವರು ಅದ್ಭುತವಾಗಿ ನಟಿಸಿದ್ದಾರೆ. KGF ಚಿತ್ರ 1970 ರಿಂದ 1980 ರಲ್ಲಿ ನಡೆಯುವ ಒಂದು ಅದ್ಭುತ ಕಥೆ ಎಂದೇ ಹಳಬಹುದು. ಆ ಸಮಯದಲ್ಲಿ ಬ್ರಿಟಿಷ್ ಅವರು ಹಾಗು ಕೆಲವು ಮುಂಬೈ ಡಾನ್ ಗಳು ನಮ್ಮ ಕರ್ನಾಟಕ KGF ನಲ್ಲಿ ಬೀಡು ಹೂಡಿ ನಮ್ಮ ಕನ್ನಡಿಗರನ್ನು ಅವಮಾನಿಸಿ ಅವರ ಹತ್ತಿರ ಗೋಲ್ಡ್ mining ಕೆಲಸವನ್ನು ಮಾಡಿಸುವ ಒಂದು ಕಥೆ ಇದು. ಇದನ್ನು ತಡೆಯದೆ ರಾಕಿ ಮುಂಬೈ ಅವರಿಗೆ ಸೆಡ್ಡು ಹೊಡೆದು ಅವರಿಗೆಲ್ಲ ಬೆವರಳಿಸಿದ್ದ. ಇನ್ನು ಮುಂದೆ ನಾವು ಕಥೆ ಹೇಳುವುದಿಲ್ಲ. ಇದು ಕಥೆಯ ಬರೀ 10 % ಭಾಗ ಅಷ್ಟೇ! ಸಿನಿಮಾ ನೋಡಲೇಬೇಕು ಕಣ್ರೀ! ನೀವೇ ಸಿನೆಮಾವನ್ನು ಥಿಯೇಟರ್ ನಲ್ಲಿ ನೋಡಬೇಕು ಎಂದು ನಮ್ಮ ವಿನಂತಿ.

Trending

To Top