Film News

ರಾಖಿ ಭಾಯ್ ಹುಟ್ಟುಹಬ್ಬಕ್ಕೆ ಹರಿದುಬಂದ ಶುಭಾಷಯಗಳು

ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ರವರು 34ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಅಭಿಮಾನಿಗಳು ಸೇರಿದಂತೆ ದಕ್ಷಿಣ ಭಾರತ ಸಿನಿರಂಗದ ಖ್ಯಾತ ನಟರು ಶುಭಾಷಯಗಳನ್ನು ಕೋರುತ್ತಿದ್ದಾರೆ.

ಕೆಜಿಎಫ್ ಚಿತ್ರದ ಮೂಲಕ ವಿಶ್ವ ಮಟ್ಟದಲ್ಲಿ ಹೆಸರು ಗಳಿಸಿದ ನಟ ಯಶ್ ಇದೀಗ ಕೆಜಿಎಫ್-೨ ಚಿತ್ರದ ಮೂಲಕ ಮತಷ್ಟು ಇಮೇಜ್ ಹೆಚ್ಚಿಸಿಕೊಳ್ಳಲಿದ್ದಾರೆ. ಈಗಾಗಲೇ ಕೆಜಿಎಫ್-೨ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸುಮಾರು ೩೦ ಲಕ್ಷಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.

ಇಂದು ಯಶ್ ರವರ ಹುಟ್ಟುಹಬ್ಬವಾಗಿದ್ದು, ಸ್ಯಾಂಡಲ್ ವುಡ್, ಟಾಲಿವುಡ್, ಮಾಲಿವುಡ್, ಬಾಲಿವುಡ್ ನ ಖ್ಯಾತ ನಟರು, ಸ್ಟಾರ್ ಕಲಾವಿದರು ಹುಟ್ಟುಹಬ್ಬದ ಶುಭಾಷಯಗಳನ್ನು ಕೋರುತ್ತಿದ್ದಾರೆ. ಬಾಲಿವುಡ್ ನ ಖ್ಯಾತ ನಟ ಹೃತಿಕ್ ರೋಷನ್ ರವರು ಯಶ್ ರವರಿಗೆ ಶುಭಾಷಯ ಕೋರಿದ್ದು, ಎಂಥಹ ಅದ್ಬುತವಾದ ಟ್ರೈಲರ್, ಕೆಜಿಎಫ್ ಸಿನೆಮಾ ತಂಡಕ್ಕೆ ಧನ್ಯವಾದಗಳು, ಹುಟ್ಟುಹಬ್ಬದ ಶುಭಾಷಯಗಳು ಯಶ್ ಎಂದು ಟ್ವೀಟರ್ ಮೂಲಕ ವಿಶ್ ಮಾಡಿದ್ದಾರೆ. ಇನ್ನೂ ಈ ಟ್ವೀಟ್ ಪ್ರಕಟವಾಗುತ್ತಿದ್ದಂತೆ, ಯಶ್ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದು, ಹೃತಿಕ್ ಹಾಗೂ ಯಶ್ ಕಾಂಬಿನೇಷನ್ ನಲ್ಲಿ ಸಿನೆಮಾ ಬರಲಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ಇನ್ನೂ ನಟ ಯಶ್ ರವರ ಹುಟ್ಟುಹಬ್ಬಕ್ಕೆ  ಪ್ರಶಾಂತ್ ನೀಲ್, ವಿಜಯ್, ಪುನೀತಾ ರಾಜ್ ಕುಮಾರ್, ಸಂಸದೆ ಸುಮಲತಾ, ಕೆಜಿಎಫ್-೨ ಅಧೀರ ಸಂಜಯ್ ದತ್, ರವೀನಾ ಟಂಡನ್ ಸೇರಿದಂತೆ ಅನೇಕರು ಶುಭಾಷಯ ಕೋರುತ್ತಿದ್ದಾರೆ.

ಇನ್ನೂ ನಟ ಯಶ್ ಈ ಬಾರಿ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅಭಿಮಾನಿಗಳಿಗೂ ಸಹ ಅದ್ದೂರಿ ಆಚರಣೆ ಬೇಡ ಎಂದು ಮನವಿ ಮಾಡಿದ್ದರು. ಯಶ್ ತಮ್ಮ ಪತ್ನಿ ರಾಧಿಕಾ ಜೊತೆ ಕೇಕ್ ಕತ್ತರಿಸಿ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಕೇಕ್ ಕತ್ತರಿಸಿ ತಿನ್ನಿಸುತ್ತಿರುವ ಪೊಟೋ ರಾಧಿಕಾ ತಮ್ಮ ಅಧಿಕೃತ ಇನ್ಸ್ಟಾಗಾಂ ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ’ಒಂದೊಮ್ಮೆ ಆಶ್ಚರ್ಯವಾಗುತ್ತದೆ ನೀನು ಹೇಗೆ ನನಗೆ ಪರ್ಫೆಕ್ಸ್ ಜೋಡಿ ಎಂದು, ನಂತರ ಅರ್ಥವಾಗುತ್ತದೆ, ನೀನು ನಿನ್ನ ಪಾಲಿನದ್ದನ್ನೂ ನನಗೆ ಕೊಡುತ್ತಿಯಾ ಎಂದು, ಎಂಬ ಸಾಲುಗಳನ್ನು ಸಹ ಬರೆದುಕೊಂಡಿದ್ದಾರೆ.

Trending

To Top